12
March, 2026

A News 365Times Venture

12
Thursday
March, 2026

A News 365Times Venture

ಮಾಸ್ ಲೀಡರ್ ಸಿದ್ದರಾಮಯ್ಯ ಅವರ ಸೇವೆ ವಿಸ್ತಾರ ಮಾಡಲು ಪಕ್ಷ ಚಿಂತನೆ- ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

Date:

ಬೆಂಗಳೂರು,ಜುಲೈ,7,2025 (www.justkannada.in): ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ AICC ಹಿಂದುಳಿದ ವರ್ಗಗಳ ರಾಷ್ಟ್ರೀಯ ಸಲಹಾ ಮಂಡಳಿ ರಚಿಸಿರುವ ಕುರಿತು ಪ್ರತಿಕ್ರಿಯಿಸಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಸಿದ್ದರಾಮಯ್ಯ ಸಾಹೇಬರು ದೇಶ ಕಂಡಿರುವ ಮಾಸ್ ಲೀಡರ್ . ಅವರ ಸೇವೆ ವಿಸ್ತಾರ ಮಾಡಲು ಪಕ್ಷ ಚಿಂತನೆ ನಡೆಸಿದೆ ಎಂದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಸಿಎಂ ಸಿದ್ದರಾಮಯ್ಯ ಜನಪ್ರಿಯತೆ ರಾಜ್ಯಕ್ಕೆ ಸೀಮಿತ ಆಗಬಾರದು. ಇಡೀ ದೇಶದಲ್ಲಿ ಸಿದ್ದರಾಮಯ್ಯ ಜನಪ್ರಿಯ ಆಗಿದ್ದಾರೆ. ಮೊದಲಿನಿಂದಲೂ ಕಾಂಗ್ರೆಸ್ ಪಕ್ಷದ ಕಾಳಜಿ ದಮನಿತರ ಪರ ಇದೆ.  ಹಿಂದುಳಿದ ದಮನಿತರು ಮಹಿಳೆಯರು ಬಡವರ ಪರವಿದೆ. ಸಿಎಂ ಸಿದ್ದರಾಮಯ್ಯ ಅವರೂ ಇದೆಲ್ಲಾ ಕಾಳಜಿಯುಳ್ಳವರು ಅದಕ್ಕಾಗಿ ಸಿದ್ದರಾಮಯ್ಯರನ್ನ ಒಬ್ಬ ಲೀಡರ್ ಎಂದು ಹೇಳುತ್ತೇವೆ. ಅವರ ಸೇವೆ ವಿಸ್ತಾರ ಮಾಡಲು ಕಾಂಗ್ರೆಸ್ ಪಕ್ಷ ಚಿಂತನೆ ಮಾಡಿದೆ. ಇದರಲ್ಲಿ ಬಿಜೆಪಿ ಏನಾದರೂ ಹುಡುಕುತ್ತಿದ್ದರೆ ನಿರಾಸೆ ಕಟ್ಟಿಟ್ಟ ಬುತ್ತಿ ಎಂದರು.

ಸಿಎಂ ಬದಲಾವಣೆ ಬಗ್ಗೆ ಸ್ವಾಮೀಜಿಗಳ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್,  ಸ್ವಾಮೀಜಿಗಳು ಅವರ ಮೇಲಿನ ಪ್ರೀತಿ ಆಶೀರ್ವಾದಕ್ಕೆ ಹೇಳುತ್ತಾರೆ. ಆದರೆ ಕಾಂಗ್ರೆಸ್ ಒಂದು ಶಿಸ್ತಿನ ಪಕ್ಷ ಇಲ್ಲಿ ಏನಿದ್ದರೂ ಹೈಕಮಾಂಡ್ ಹೇಳಿದ್ದನ್ನ ನಾವು ಕೇಳುತ್ತೇವೆ. ಸಿಎಂ ಬದಲಾವಣೆ ಬಗ್ಗೆ ಯಾರು ಯಾವಾಗ ಗಡುವು ಕೊಟ್ಟಿದ್ದಾರೆ ಗೊತ್ತಿಲ್ಲ. ಏನೇ ಇದ್ದರೂ ನಮ್ಮ ಹೈಕಮಾಂಡ್ ಪಕ್ಷದ ವರಿಷ್ಠರು ಇದ್ದಾರೆ ಎಂದರು.vtu

Key words: mass leader, Siddaramaiah, Minister, Lakshmi Hebbalkar

The post ಮಾಸ್ ಲೀಡರ್ ಸಿದ್ದರಾಮಯ್ಯ ಅವರ ಸೇವೆ ವಿಸ್ತಾರ ಮಾಡಲು ಪಕ್ಷ ಚಿಂತನೆ- ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ಗೃಹ ಬಳಕೆ ಗ್ಯಾಸ್ ಸಿಲಿಂಡರ್ ಗೆ ಸಮಸ್ಯೆ ಇಲ್ಲ-ಸಚಿವ ಕೆ.ಎಚ್ ಮುನಿಯಪ್ಪ

ಬೆಂಗಳೂರು,ಮಾರ್ಚ್,12,2026 (www.justkannada.in):  ಬೆಂಗಳೂರಿನಲ್ಲಿ ಗ್ಯಾಸ್ ಸಿಲಿಂಡರ್ ಕೊರತೆ ಎಂಬ ವಿಚಾರ,...

സര്‍ സി.പിയെ ചോദ്യം ചെയ്യാന്‍ മടിക്കാത്ത ആലപ്പുഴയിലെ തൊഴിലാളി വര്‍ഗം ജി. സുധാകരനെയും ചോദ്യം ചെയ്യും: എം. ശിവപ്രസാദ്

തിരുവനന്തപുരം: മുന്‍ മന്ത്രിയും സി.പി.ഐ.എം മുതിര്‍ന്ന നേതാവുമായ ജി. സുധാകരനെതിരെ രൂക്ഷവിമര്‍ശനവുമായി...

Ring Roads In Telangana: తెలంగాణ జిల్లాలకు మహర్దశ.. ప్రతీ జిల్లాకో రింగు రోడ్డు..

తెలంగాణ రాష్ట్రవ్యాప్తంగా రవాణా వ్యవస్థను సమూలంగా ప్రక్షాళన చేస్తూ.. ప్రతి జిల్లా...