12
March, 2026

A News 365Times Venture

12
Thursday
March, 2026

A News 365Times Venture

ರಾಜ್ಯ  ಪಡಿತರ ಚೀಟಿದಾರರಿಗೆ ‘ಆಹಾರದ ಕಿಟ್’ ನೀಡಲು ಸರ್ಕಾರ ಚಿಂತನೆ

Date:

ಬೆಂಗಳೂರು,ಜೂನ್,24,2025 (www.justkannada.in):  ರಾಜ್ಯದ ಪಡಿತರ ಚೀಟಿದಾರರಿಗೆ ನೀಡಲಾಗುತ್ತಿರುವ ಹೆಚ್ಚುವರಿ 5 ಕೆಜಿ ಅಕ್ಕಿ ಬದಲು ಆಹಾರದ ಕಿಟ್ ನೀಡಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎನ್ನಲಾಗಿದೆ.

ಹೌದು. ಕಾಂಗ್ರೆಸ್ ಚುನಾವಣೆಗೂ ಮುನ್ನ 10 ಕೆಜಿ ಅಕ್ಕಿ ಕೊಡುವುದಾಗಿ ಘೋಷಣೆ ಮಾಡಿತ್ತು. ಅಧಿಕಾರಕ್ಕೆ ಬಂದ ನಂತರ  ಅನ್ನಭಾಗ್ಯ ಯೋಜನೆಯಡಿ 5 ಕೆಜಿ ಅಕ್ಕಿ ಉಳಿದ 5 ಕೆಜಿ ಅಕ್ಕಿಗೆ ಹಣವನ್ನ ಪಡಿತರ ಚೀಟಿದಾರರ ಖಾತೆಗೆ ವರ್ಗಾವಣೆ ಮಾಡುತ್ತಿತ್ತು. ನಂತರ ಹಣದ ಬದಲಾಗಿ 5 ಕೆಜಿ ಹೆಚ್ಚುವರಿ ಅಕ್ಕಿಯನ್ನೇ ನೀಡುತ್ತಿದೆ. ಇದೀಗ ಹೆಚ್ಚುವರಿ 5 ಕೆಜಿ ಅಕ್ಕಿ ಬದಲು ಆಹಾರದ ಕಿಟ್ ನೀಡಲು ಆಹಾರ ಇಲಾಖೆಯಿಂದ ಪ್ರಸ್ತಾವನೆ ಬಂದಿದೆ ಎನ್ನಲಾಗಿದೆ. ಆಹಾರದ ಕಿಟ್ ನಲ್ಲಿ ಸಕ್ಕರೆ, ಉಪ್ಪು, ತೊಗರಿಬೇಳೆ, ಕಾಫಿಪುಡಿ, ಟೀ ಪುಡಿ, ಅಡುಗೆ ಎಣ್ಣೆ, ಗೋಧಿ ಇರಲಿದೆ . ಪ್ರಸ್ತಾವನೆಗೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದರೆ ಮಾತ್ರ ವಿತರಣೆ ಮಾಡುವ ಸಾಧ್ಯತೆಯಿದೆ ಎನ್ನಲಾಗಿದೆ.

ಸಚಿವ ಸಂಪುಟದಲ್ಲಿ ಇದಕ್ಕೆ ಸಮ್ಮತಿ ಸಿಕ್ಕಿದರೆ ಸದ್ಯದಲ್ಲೇ ಆಹಾರ ಕಿಟ್ ನೀಡುವ ಯೋಜನೆ ಜಾರಿಗೆ  ಬರುವ ಸಾಧ್ಯತೆಯಿದೆ. ಜುಲೈ 2 ರಂದು ನಂದಿಬೆಟ್ಟದಲ್ಲಿ ಸಚಿವ ಸಂಪುಟ ಸಭೆ ನಡೆಯಲಿದ್ದು ಈ ಬಗ್ಗೆ ಇಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.vtu

Key words: government, food kits, ration card,  holders

The post ರಾಜ್ಯ  ಪಡಿತರ ಚೀಟಿದಾರರಿಗೆ ‘ಆಹಾರದ ಕಿಟ್’ ನೀಡಲು ಸರ್ಕಾರ ಚಿಂತನೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

LPG ಸಿಲಿಂಡರ್ ಕೊರತೆ: ವಿಧಾನಸಭೆಯಲ್ಲಿ ಪ್ರತಿಧ್ವನಿ, ವಾಕ್ಸಮರ

ಬೆಂಗಳೂರು,ಮಾರ್ಚ್,11,2026 (www.justkannada.in): ಮಧ್ಯಪ್ರಾಚ್ಯದಲ್ಲಿ ಯುದ್ದ ಹಿನ್ನೆಲೆಯಲ್ಲಿ ಕರ್ನಾಟಕ ಸೇರಿ ದೇಶದ...

പ്രധാനമന്ത്രിയെ വിമര്‍ശിക്കുന്ന സോഷ്യല്‍ മീഡിയ പോസ്റ്റുകള്‍ക്ക് പൂട്ട്; ഉത്തരവിട്ട് കേന്ദ്രം

ന്യൂദല്‍ഹി: പ്രധാനമന്ത്രി നരേന്ദ്രമോദിയെയോ സര്‍ക്കാരിനെയോ വിമര്‍ശിക്കുന്നതോ പരിഹസിക്കുന്നതോ ആയ സോഷ്യല്‍ മീഡിയ...

திருச்சி: "விஞ்ஞான ரீதியான ஊழலுக்கு பெயர் போனது தான் தி.மு.க!" – பிரதமர் மோடி காட்டம்

தமிழகத்திற்கு இந்த ஆண்டில் இரண்டாவது முறையாக வருகை தந்துள்ளார் பிரதமர் மோடி....