13
March, 2026

A News 365Times Venture

13
Friday
March, 2026

A News 365Times Venture

ಬಿಜೆಪಿಗೆ ಓಪನ್ ಚಾಲೆಂಜ್ ಹಾಕಿದ ಸಚಿವ ಜಮೀರ್ ಅಹ್ಮದ್ ಖಾನ್

Date:

ಕೋಲಾರ,ಜೂನ್,16,2025 (www.justkannada.in):  ಬಿಜೆಪಿ ತನ್ನ ಆಡಳಿತಾವಧಿಯಲ್ಲಿ ಕೋಲಾರ ಜಿಲ್ಲೆಯಲ್ಲಿ ಒಂದೇ ಒಂದು ಮನೆ ಕೊಟ್ಟಿರುವುದನ್ನು ಸಾಬೀತು ಮಾಡಿದರೇ ನಾನು ರಾಜಕೀಯದಿಂದ ನಿವೃತ್ತಿ ಪಡೆಯುತ್ತೇನೆ ಎಂದು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಓಪನ್ ಚಾಲೆಂಜ್ ಹಾಕಿದರು.

ಕೋಲಾರದಲ್ಲಿ  ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಜಮೀರ್ ಅಹ್ಮದ್ ಖಾನ್, ಬಿಜೆಪಿಗರು ಒಂದೇ ಒಂದು ಮನೆ ಕೊಟ್ಟಿರುವುದು ಸಾಬೀತಾದರೆ ರಾಜಕೀಯ ನಿವೃತ್ತಿ ಪಡೆಯುವೆ. ಬಿಜೆಪಿಗರು ಮನೆ ಕೊಟ್ಟಿದ್ರೆ  ಸಾಬೀತು ಮಾಡಲಿ, 44 ಸಾವಿರ ಮನೆ ರೆಡಿ ಇದೆ. ಕೊಡುವುದು ಮಾತ್ರ ಬಾಕಿ ಇದೆ  ಎಂದರು.

ಚುನಾವಣಾ ಸಂದರ್ಭದಲ್ಲಿ ಕಾಂಗ್ರೆಸ್ ಕೇವಲ ಪಂಚ ಗ್ಯಾರಂಟಿಗಳ ಭರವಸೆಯನ್ನು ಮಾತ್ರ ನೀಡಿತ್ತು, ಸ್ಲಂ ನಿವಾಸಿಗಳಿಗೆ ಮತ್ತು ರಾಜೀವ್ ಗಾಂಧಿ ಯೋಜನೆ ಅಡಿ ಮನೆಗಳನ್ನು ಕೊಡುತ್ತೇವೆ ಎಂದು ಹೇಳಿರಲಿಲ್ಲ, ಆದರೆ ತಮ್ಮ ಸರ್ಕಾರಕ್ಕೆ ಬಡವರ ಬಗ್ಗೆ ಕಾಳಜಿಯಿದೆ, ಹಾಗಾಗೇ ಮನೆಗಳನ್ನು ನೀಡಿದ್ದೇವೆ, ಬಿಜೆಪಿ ತನ್ನ ಆಡಳಿತಾವಧಿಯಲ್ಲಿ ಒಂದೇಒಂದು ಮನೆ ಕೊಟ್ಟಿರುವುದನ್ನು ಸಾಬೀತು ಮಾಡಿದರೇ ನಾನು ರಾಜಕೀಯದಿಂದ ನಿವೃತ್ತನಾಗುತ್ತೇನೆ ಎಂದು ಸವಾಲು ಹಾಕಿದರು.vtu

Key words: Minister Zameer Ahmed Khan, open challenge, BJP

The post ಬಿಜೆಪಿಗೆ ಓಪನ್ ಚಾಲೆಂಜ್ ಹಾಕಿದ ಸಚಿವ ಜಮೀರ್ ಅಹ್ಮದ್ ಖಾನ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ಅಡಿಕೆ ಕಳ್ಳತನ ಮಾಡಿದ್ದ ಮೂವರು ಕಳ್ಳರು ಅಂದರ್

ಮೈಸೂರು,ಮಾರ್ಚ್,12,2026 (www.justkannada.in): ಸುಮಾರು 15 ಕ್ವಿಂಟಾಲ್ ನಷ್ಟು ಅಡಿಕೆಯನ್ನು ಕಳ್ಳತನ...

ഞെട്ടിപ്പിക്കുന്ന സംഭവം, ഉടന്‍ സമഗ്രമായ അന്വേഷണം നടത്തണം; ഫാറൂഖ് അബ്ദുല്ലക്ക് നേരെയുണ്ടായ വധശ്രമത്തില്‍ എം.എ. ബേബി

ന്യൂദല്‍ഹി: ജമ്മു കശ്മീര്‍ മുന്‍ മുഖ്യമന്ത്രി ഫാറൂഖ് അബ്ദുല്ലക്ക് നേരെയുണ്ടായ വധശ്രമം...

'6 தொகுதிகள் கொடுத்தே ஆகணும்' – கறார் காட்டும் கம்யூனிஸ்டுகள்; கைவிரித்த திமுக!

கம்யூனிஸ்ட் கட்சிகளுடனான தி.மு.க-வின் தொகுதி பங்கீட்டு பேச்சுவார்த்தையில் தொடர் இழுபறி நீடிக்கிறது....