13
March, 2026

A News 365Times Venture

13
Friday
March, 2026

A News 365Times Venture

ಶಿಕ್ಷಣದ ಜೊತೆಗೆ ಆರೋಗ್ಯ: ಕ್ಯಾನ್ಸರ್ ರೆಸಿಡೆನ್ಸಿಯಲ್ ಸ್ಕೂಲ್ ತೆರೆಯಲು ಚಿಂತನೆ – ಸಚಿವ ಮಧು ಬಂಗಾರಪ್ಪ

Date:

ಶಿವಮೊಗ್ಗ,ಜೂನ್,14,2025 (www.justkannada.in): ಕ್ಯಾನ್ಸರ್ ಬಾಧಿತ ಮಕ್ಕಳ ಶಿಕ್ಷಣ ಮತ್ತು ಸಕಾಲಿಕ ಚಿಕಿತ್ಸೆಗೆ ವಿಶೇಷ ವಸತಿ ಶಾಲೆ ತೆರೆಯಲು ಚಿಂತನೆ ನಡೆಸಲಾಗಿದೆ. ಕ್ಯಾನ್ಸರ್ ರೆಸಿಡೆನ್ಸಿಯಲ್ ಸ್ಕೂಲ್ ತೆರೆಯುತ್ತೇವೆ ಎಂದು ಶಾಲಾ ಮತ್ತು ಸಾಕ್ಷರತಾ ಇಲಾಖೆ ಸಚಿವ ಎಸ್.ಮಧು ಬಂಗಾರಪ್ಪ ತಿಳಿಸಿದರು.

ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ಮಧು ಬಂಗಾರಪ್ಪ, ವಿಮಾನ ದುರಂತದಲ್ಲಿ ಮೃತಪಟ್ಟವರಿಗೆ ಮೊದಲು ಸಂತಾಪ ಸಲ್ಲಿಸುತ್ತೇನೆ. ಅವರ ಕುಟುಂಬಸ್ಥರಿಗೆ ದೇವರು ನೋವು ಭರಿಸುವ ಶಕ್ತಿ ನೀಡಲಿ. ನಾನು ಇಲಾಖೆ ಜವಾಬ್ದಾರಿ ವಹಿಸಿಕೊಂಡು ಎರಡು ವರ್ಷ ಆಗಿದೆ. ಪಕ್ಷ ಅವಕಾಶ ಕೊಟ್ಟಾಗ ಪೋಕಸ್ ಇಟ್ಟು, ದೇವರ ಕೆಲಸದ ರೀತಿ ಮಾಡಿದ್ದೇನೆ. ಸಂವಿಧಾನ ಪೀಠಿಕೆ ಓದು, ಮರು ಪರೀಕ್ಷೆ ಘೋಷಣೆ ಮಾಡಿದ್ದಕ್ಕೆ ಸಾಕಷ್ಟು ಟೀಕೆ- ಟಿಪ್ಪಣಿ ಬಂದವು. ಅನೇಕ ಹೊಸ ಕಾರ್ಯಕ್ರಮವನ್ನ ಸಹ ಜಾರಿಗೆ ತಂದಿದ್ದೆವೆ. ಮಕ್ಕಳಿಗೆ ಅವಕಾಶಗಳ ಕೊರತೆಯಾಗಬಾರದು ಎಂದು ಹೊಸ ಪ್ರಯತ್ನ ಮಾಡಿದ್ಧೆನೆ. ಇಡೀ ದೇಶದಲ್ಲಿ ರೀ- ಎಕ್ಸಾಂ ಪಾಲಿಸಿ ಇರೋದು ನಮ್ಮಲ್ಲಿ ಮಾತ್ರ. ರಾಜ್ಯದಲ್ಲಿ ಈ ಬಾರಿ 51 ಮಕ್ಕಳು ಎಸ್ಎಸ್ಎಲ್ಸಿ ಯಲ್ಲಿ 625 ಅಂಕ ಗಳಿಸಿದ್ದಾರೆ.  ಇದು ನಿಜವಾದ ಅಭಿವೃದ್ಧಿ. ನನಗೆ ಕನ್ನಡ ಬರಲ್ಲ..,ನನ್ನ ಹೇರ್ ಸ್ಟೈಲ್ ಬಗ್ಗೆ ಮಾತಾಡಿದೋರಿಗೆ ಇದೇ ಉತ್ತರ. ಸರ್ಕಾರಿ ಶಾಲೆಯ ಮಕ್ಕಳು ಶೇ.36 ರಷ್ಟು ಪಾಸ್ ಆಗಿದ್ದಾರೆ ಎಂದು ತಿರುಗೇಟು ನೀಡಿದರು.

ಕ್ಯಾನ್ಸರ್ ರೆಸಿಡೆನ್ಸಿಯಲ್ ಸ್ಕೂಲ್ ಅನ್ನು ತೆರೆಯಲು ಚಿಂತನೆ ನಡೆಯುತ್ತಿದೆ. ಶಿಕ್ಷಣದ ಜೊತೆಗೆ ಮಗುವಿಗೆ ಆರೋಗ್ಯ ನೀಡಲು ಯೋಚನೆ ಮಾಡಿದ್ದೇವೆ. ಕಿದ್ವಾಯಿ ಆಸ್ಪತ್ರೆಯ ಅಕ್ಕಪಕ್ಕದಲ್ಲೇ ಶಾಲೆ ಆರಂಭಿಸುವ ಚಿಂತನೆಯಿದೆ. ರಾಜ್ಯದಲ್ಲಿ ಸುಮಾರು 3500 ಮಕ್ಕಳು ದಾಖಲು ಆಗುವ ನಿರೀಕ್ಷೆಯಿದೆ. ಇದರಲ್ಲಿ ಕನಿಷ್ಟ 1500 ಮಕ್ಕಳಿಗೆ ಆರಂಭಿಕ ಹಂತದಲ್ಲೇ ಚಿಕಿತ್ಸೆ – ಶಿಕ್ಷಣ ಕೊಡುವ ಇರಾದೆಯಿದೆ. ಪ್ರಾಥಮಿಕವಾಗಿ 1ರಿಂದ 10ನೇ ತರಗತಿವರೆಗೂ ಮಾಡುತ್ತೇವೆ. ಎಲ್ಲಾ ಪ್ರಕ್ರಿಯೆ ಆದರೆ, ಜುಲೈ ವೇಳೆಗೆ ಕ್ಯಾನ್ಸರ್ ರೆಸಿಡೆನ್ಸಿಯಲ್ ಸ್ಕೂಲ್ ಆರಂಭಿಸುತ್ತೇವೆ. ಇನ್ಫೋಸಿಸ್ ಸಂಸ್ಥೆಯಿಂದ 200 ಕೋಟಿ ಸಿಎಸ್ಆರ್ ಹಣವನ್ನ ಕೊಡುತ್ತಿದ್ದಾರೆ. ಮುಖ್ಯವಾಗಿ ಶಿವಮೊಗ್ಗ ಗ್ರಾಮಾಂತರ ಭಾಗಕ್ಕೆ ಆ ಹಣ ಬಳಸಲಾಗುತ್ತದೆ. ಜೊತೆಗೆ ಶಿಕ್ಷಣ ಇಲಾಖೆಯಿಂದ ಸ್ಟುಡಿಯೊ ಮಾಡಲಾಗುತ್ತಿದೆ. ಯೂಟ್ಯೂಬ್ ಚಾನಲ್ ಮೂಲಕವೂ ಉತ್ತಮ ಶಿಕ್ಷಕರಿಂದ ಭೋದನೆ ಮಾಡಲಾಗುತ್ತದೆ. ರಾಜ್ಯದಲ್ಲಿ ಯಾವುದೇ ಕನ್ನಡ ಶಾಲೆಗಳನ್ನು ಬಂದ್ ಮಾಡುವುದಿಲ್ಲ. 51 ಸಾವಿರ ಅತಿಥಿ ಶಿಕ್ಷಕರ ನೇಮಕಾತಿಯನ್ನ ಮಾಡಿಕೊಂಡಿದ್ದೇವೆ ಎಂದರು.

ಶರಾವತಿ ಸಂತ್ರಸ್ತರ ಸಮಸ್ಯೆ ಸದ್ಯದಲ್ಲೇ ಬಗೆಹರಿಯಲಿದೆ. ಶರಾವತಿ ಸಂತ್ರಸ್ತರ ಏನೇ ಸಮಸ್ಯೆ ಇದ್ದರೂ ಜಿಲ್ಲಾಧಿಕಾರಿಗಳ ಗಮನಕ್ಕೆ ತನ್ನಿ. ಶರಾವತಿ ಸಂತ್ರಸ್ತರು ಯಾರು ಗಾಬರಿಯಾಗುವುದು ಬೇಡ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು.vtu

Key words: Health, education, cancer residential school, Minister, Madhu Bangarappa

The post ಶಿಕ್ಷಣದ ಜೊತೆಗೆ ಆರೋಗ್ಯ: ಕ್ಯಾನ್ಸರ್ ರೆಸಿಡೆನ್ಸಿಯಲ್ ಸ್ಕೂಲ್ ತೆರೆಯಲು ಚಿಂತನೆ – ಸಚಿವ ಮಧು ಬಂಗಾರಪ್ಪ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ನನ್ನನ್ನು ಬೆಳೆಸಿದಂತೆ ಯತೀಂದ್ರರನ್ನು ರಾಜಕೀಯವಾಗಿ ಬೆಳೆಸಿ-ಸಿಎಂ ಸಿದ್ದರಾಮಯ್ಯ

ಮೈಸೂರು,ಮಾರ್ಚ್13,2026 (www.justkannada.in):  ರಾಜಕೀಯವಾಗಿ ನನ್ನನ್ನು ಬೆಳೆಸಿದಂತೆ ಪುತ್ರ ಯತೀಂದ್ರರನ್ನು ಬೆಳೆಸುವಂತೆ...

കടന്നുവന്ന കനല്‍വഴികള്‍ മറ്റുള്ളവര്‍ മറന്നാലും ഞാന്‍ മറക്കില്ല; എന്റെ ചോരവീണ മണ്ണില്‍ തലയുയര്‍ത്തിത്തന്നെ നില്‍ക്കും: കെ. സുധാകരന്‍

കണ്ണൂര്‍: നിയമസഭാ സ്ഥാനാര്‍ത്ഥി നിര്‍ണയത്തിലെ അതൃപ്തി പരസ്യമാക്കി കോണ്‍ഗ്രസ് നേതാവ് കെ.സുധാകരന്‍....

பண்ணையாளர்கள் அறிமுகப்படுத்திய பரிசுகள்… வளைக்கப்பட்ட வாக்காளர்கள்! | நினைவுச் சுவடுகள் 09

பரிசுகளால் வளைக்கப்பட்ட வாக்காளர்கள்நினைவுச் சுவடுகள்தமிழ்நாட்டு அரசியலில் தேர்தல்கள் என்றால் பொதுக்கூட்டம், மாநாடு,...

Heroes Body Transformation: సినిమాల కోసం బాడీ ట్రాన్స్‌ఫర్మేషన్.. యంగ్ హీరోల సరికొత్త లుక్స్ వైరల్..!

Heroes Body Transformation: ప్రస్తుతం టాలీవుడ్‌లో మేకోవర్ సీజన్ నడుస్తోంది. కొత్త...