13
March, 2026

A News 365Times Venture

13
Friday
March, 2026

A News 365Times Venture

WTC ಫೈನಲ್‌ ನಲ್ಲಿ ಎಡವಿದ ಆಸಿಸ್:  ದ.ಆಫ್ರಿಕಾಗೆ ಚಾಂಪಿಯನ್ ಪಟ್ಟ

Date:

ಲಂಡನ್,ಜೂನ್,14,2025 (www.justkannada.in): ಕ್ರಿಕೆಟ್ ಕಾಶಿ ಲಾರ್ಡ್ಸ್ ಮೈದಾನದಲ್ಲಿ ನಡೆದ ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್ ನಲ್ಲಿ ಆಸ್ಟ್ರೇಲಿಯಾ ಎಡವಿದ್ದು ಚಾಂಪಿಯನ್ ಪಟ್ಟ ಅಲಂಕರಿಸುವ ಮೂಲಕ ದಕ್ಷಿಣಾ ಆಫ್ರಿಕಾ 27 ವರ್ಷಗಳ ನಂತರ ಐಸಿಸಿ ಟ್ರೋಫಿ ಗೆದ್ದ ಸಾಧನೆ ಮಾಡಿದೆ.

​ ಒಂದೆಡೆ ಸತತ ಎರಡನೇ ಬಾರಿಗೆ ವಿಶ್ವ ಟೆಸ್ಟ್ ಚಾಂಪಿಯನ್‌ ಕಿರೀಟ ತೊಡುವ ಆಸೆಯೊಂದಿಗೆ ಆಸ್ಟ್ರೇಲಿಯಾ ತಂಡ ಲಾರ್ಡ್ಸ್ ಅಂಗಳಕ್ಕಿಳಿದಿದ್ದರೆ, ಮತ್ತೊಂದೆಡೆ ಚೊಚ್ಚಲ ಟೆಸ್ಟ್ ಚಾಂಪಿಯನ್‌ ಪಟ್ಟ ಹಾಗೆಯೇ ಬಹು ವರ್ಷಗಳ ಐಸಿಸಿ ಟ್ರೋಫಿ ಬರ ನೀಗಿಸಿಕೊಳ್ಳುವ ಗುರಿಯೊಂದಿಗೆ ಬಂದಿದ್ದ ದಕ್ಷಿಣ ಆಫ್ರಿಕಾ ತಂಡಗಳು ಮುಖಾಮುಖಿಯಾಗಿದ್ದವು.

ಎರಡನೇ ಇನ್ನಿಂಗ್ಸ್ ನಲ್ಲಿ ಆಸ್ಟ್ರೇಲಿಯಾ ನೀಡಿದ 282 ರನ್​ಗಳ ಗುರಿ ಬೆನ್ನಟ್ಟಿದ ಆಫ್ರಿಕಾಗೆ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕ ರಯಾನ್ ರಿಕಲ್ಟನ್ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲ್ಲು ಸಾಧ್ಯವಾಗದೆ ಕೇವಲ ಮೂರನೇ ಓವರ್‌ನಲ್ಲಿ ಪೆವಿಲಿಯನ್‌ ಸೇರಿಕೊಂಡರು. ಇದಾದ ನಂತರ ಜೊತೆಯಾದ ಮಾರ್ಕ್ರಾಮ್ ಹಾಗೂ ವಿಯಾನ್ ಮುಲ್ಡರ್ ಅರ್ಧಶತಕದ ಜೊತೆಯಾಟವನ್ನಾಡಿ ತಂಡವನ್ನು ಸಂಕಷ್ಟದಿಂದ ಹೊರತಂದರು.

ಮಾಕ್ರಂ 136 ರನ್ ಗಳಿಸಿದರೇ ಕ್ಯಾಪ್ಟನ್ ತೆಂಬ ಬವುಮಾ 66 ರನ್ ಬಾರಿಸಿ ಗೆಲವಿನ ದಡಕ್ಕೆ ದಕ್ಷಿಣ ಆಫ್ರಿಕಾವನ್ನ ಕೊಂಡೊಯ್ದರು.  5 ಕೊನೆಗೆ 5 ವಿಕೆಟ್ ನಷ್ಟಕ್ಕೆ ದಕ್ಷಿಣಾ ಆಫ್ರಿಕಾ 282 ರನ್ ಗಳಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್ ತನ್ನದಾಗಿಸಿಕೊಂಡಿತು.

ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್- 212/10

ದಕ್ಷಿಣ ಆಫ್ರಿಕಾ ಮೊದಲ ಇನ್ನಿಂಗ್ಸ್- 138/10

ಸ್ಟ್ರೇಲಿಯಾ 2ನೇ ಇನ್ನಿಂಗ್ಸ್  -207/10

ದಕ್ಷಿಣ ಆಫ್ರಿಕಾ 2ನೇ ಇನ್ನಿಂಗ್ಸ್- 282/5

vtu

Key words: Aussies, WTC final,  Champion, South Africa

The post WTC ಫೈನಲ್‌ ನಲ್ಲಿ ಎಡವಿದ ಆಸಿಸ್:  ದ.ಆಫ್ರಿಕಾಗೆ ಚಾಂಪಿಯನ್ ಪಟ್ಟ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ನನ್ನನ್ನು ಬೆಳೆಸಿದಂತೆ ಯತೀಂದ್ರರನ್ನು ರಾಜಕೀಯವಾಗಿ ಬೆಳೆಸಿ-ಸಿಎಂ ಸಿದ್ದರಾಮಯ್ಯ

ಮೈಸೂರು,ಮಾರ್ಚ್13,2026 (www.justkannada.in):  ರಾಜಕೀಯವಾಗಿ ನನ್ನನ್ನು ಬೆಳೆಸಿದಂತೆ ಪುತ್ರ ಯತೀಂದ್ರರನ್ನು ಬೆಳೆಸುವಂತೆ...

കടന്നുവന്ന കനല്‍വഴികള്‍ മറ്റുള്ളവര്‍ മറന്നാലും ഞാന്‍ മറക്കില്ല; എന്റെ ചോരവീണ മണ്ണില്‍ തലയുയര്‍ത്തിത്തന്നെ നില്‍ക്കും: കെ. സുധാകരന്‍

കണ്ണൂര്‍: നിയമസഭാ സ്ഥാനാര്‍ത്ഥി നിര്‍ണയത്തിലെ അതൃപ്തി പരസ്യമാക്കി കോണ്‍ഗ്രസ് നേതാവ് കെ.സുധാകരന്‍....

பண்ணையாளர்கள் அறிமுகப்படுத்திய பரிசுகள்… வளைக்கப்பட்ட வாக்காளர்கள்! | நினைவுச் சுவடுகள் 09

பரிசுகளால் வளைக்கப்பட்ட வாக்காளர்கள்நினைவுச் சுவடுகள்தமிழ்நாட்டு அரசியலில் தேர்தல்கள் என்றால் பொதுக்கூட்டம், மாநாடு,...

Heroes Body Transformation: సినిమాల కోసం బాడీ ట్రాన్స్‌ఫర్మేషన్.. యంగ్ హీరోల సరికొత్త లుక్స్ వైరల్..!

Heroes Body Transformation: ప్రస్తుతం టాలీవుడ్‌లో మేకోవర్ సీజన్ నడుస్తోంది. కొత్త...