14
March, 2026

A News 365Times Venture

14
Saturday
March, 2026

A News 365Times Venture

ಕಾಲ್ತುಳಿತ ಪ್ರಕರಣ: ‘ಕೈ’ ಹೈಕಮಾಂಡ್ ಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಬಹಿರಂಗ ಸವಾಲು

Date:

ಬೆಂಗಳೂರು,ಜೂನ್,7,2025 (www.justkannada.in):  ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌‍ ಹೈಕಮಾಂಡ್‌ ಗೆ ಧಮ್, ತಾಕತ್ತಿದ್ದರೇ  ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರಿಂದ ರಾಜೀನಾಮೆ ಪಡೆಯಲಿ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಬಹಿರಂಗ ಸವಾಲು ಹಾಕಿದರು.

ಈ ಕುರಿತು ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಬೆಂಗಳೂರಿನಲ್ಲಿ ಇಷ್ಟೊಂದು ದೊಡ್ಡ ಘಟನೆ ನಡೆದಿದ್ದರೂ ಕಾಂಗ್ರೆಸ್‌‍ ಹೈಕಮಾಂಡ್‌ ಒಂದೇ ಒಂದು ಸಾಂತ್ವಾನವನ್ನೂ ಹೇಳಿಲ್ಲ. ಬದಲಾಗಿ ಸರ್ಕಾರವನ್ನು, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರನ್ನು ಸಮರ್ಥಿಸಿಕೊಳ್ಳುತ್ತಿದೆ. ಅವರ ರಾಜೀನಾಮೆ ಪಡೆಯಲು ನಿಮಗೆ ಧಮ್ ತಾಕತ್ತಿಲ್ಲವೇ..? ಎಂದು ವಾಗ್ದಾಳಿ ನಡೆಸಿದರು.

ಕಾಲ್ತುಳಿತ ದುರಂತಕ್ಕೆ ಸಿಎಂ ಸಿದ್ದರಾಮಯ್ಯ ಹಾಗೂ  ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರೇ ನೇರ ಕಾರಣ. ಹೀಗಾಗಿ ಇಬ್ಬರೂ ಗೌರವಯುತವಾಗಿ ರಾಜೀನಾಮೆ ನೀಡಬೇಕು. ನಂತರ ಇಬ್ಬರನ್ನು ತನಿಖಾಧಿಕಾರಿಗಳು ಬಂಧಿಸಿ ವಿಚಾರಣೆಗೊಳಪಡಿಸಬೇಕೆಂದು ಎಂದು ಆಗ್ರಹಿಸಿದರು.

ಆರ್‌ಸಿಬಿ, ಡಿಎನ್‌ಎ ಮತ್ತಿತರರನ್ನು ತನಿಖಾಧಿಕಾರಿಗಳು ಬಂಧಿಸುವುದಾದರೆ ಸಿಎಂ ಮತ್ತು ಡಿಸಿಎಂ ಅವರುಗಳನ್ನು ಏಕೆ ಬಂಧಿಸಬಾರದು? ಈ ಪ್ರಕರಣದಲ್ಲಿ ಈ ಇಬ್ಬರೂ ಪ್ರಮುಖ ಆರೋಪಿಗಳಾಗಿದ್ದಾರೆ. ಎಲ್ಲದಕ್ಕೂ ಮೂಗು ತೂರಿಸುವ ಹೈಕಮಾಂಡ್‌ ನವರು ಈಗ ಯಾಕೆ ಮೌನಕ್ಕೆ ಜಾರಿದ್ದಾರೆ? ಕಾಂಗ್ರೆಸ್‌‍ ಹೈಕಮಾಂಡ್‌ ನಾಯಕರು ಎಲ್ಲಿದ್ದೀರಿ ಎಂದು ಹರಿಹಾಯ್ದರು.vtu

Key words: stampede case, Union Minister, Shobha Karandlaje, Congress, high command

The post ಕಾಲ್ತುಳಿತ ಪ್ರಕರಣ: ‘ಕೈ’ ಹೈಕಮಾಂಡ್ ಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಬಹಿರಂಗ ಸವಾಲು appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

4,824 ಕೋಟಿ ರೂ. ಮೊತ್ತದ ಬಂಡವಾಳ ಹೂಡಿಕೆಗೆ ಸಮ್ಮತಿ: ಸಚಿವ ಎಂ. ಬಿ. ಪಾಟೀಲ್

ಬೆಂಗಳೂರು,ಮಾರ್ಚ್,14,2026 (www.justkannada.in): ವಿಜಯಪುರ, ಬಾಗಲಕೋಟೆ, ಚಿತ್ರದುರ್ಗ, ಕೋಲಾರ, ರಾಮನಗರ ಸೇರಿದಂತೆ ...

മൊജ്തബ ഖാംനഇ അടക്കമുള്ളവരെ കുറിച്ച് വിവരം നൽകുന്നവർക്ക് പത്ത് മില്യൺ; പാരിതോഷികം പ്രഖ്യാപിച്ച് അമേരിക്ക

വാഷിങ്ടൺ: ഇറാന്റെ പുതിയ പരമോന്നത നേതാവ് ആയത്തുല്ല മുജ്തബ ഖാംനഇ അടക്കമുള്ള...

வட கொரியா திடீர் ஏவுகணை தாக்குதல்? -'அலர்ட்' ஆகும் ஜப்பான் – என்ன நடந்தது?

ஒரு பக்கம் ஈரான் போர், உக்ரைன் போர் நடந்து கொண்டிருக்கிறது.இன்னொரு பக்கம்,...

Sabarimala Entry: శబరిమల ఆలయ ప్రవేశంపై కేరళం ప్రభుత్వ ‘యూటర్న్’.. 50 ఏళ్లలోపు మహిళలు ప్రవేశించకూడదంటూ.!

Sabarimala Entry: శబరిమల ఆలయ ప్రవేశంపై మరోమారు దుమారం రేగుతుంది. కేరళంలో...