18
March, 2026

A News 365Times Venture

18
Wednesday
March, 2026

A News 365Times Venture

ಸಮುದಾಯದ ಏಳಿಗೆಗೆ ಡಿ. ನಾಗರಾಜು ಅವರ ಎರಡು ದಶಕಗಳ ಸೇವೆ ಸ್ಮರಣೀಯ-  ಎಚ್.ಎ . ವೆಂಕಟೇಶ್

Date:

ಮೈಸೂರು,ಜೂನ್,2,2025 (www.justkannada.in): ಸಮುದಾಯಕ್ಕೆ ಡಿ. ನಾಗರಾಜು ಅವರು ಸಂಘದ ಖಜಾಂಚಿಯಾಗಿ, ಆಂತರಿಕ ಲೆಕ್ಕಪರಿಶೋಧಕರಾಗಿ ಸಲ್ಲಿಸಿರುವ ಸೇವೆ ಅತ್ಯಂತ ಸ್ಮರಣೀಯವಾದದ್ದು ಎಂದು ಮೈಸೂರು ಪೇಂಟ್ಸ್ ಮತ್ತು ವಾರ್ನಿಸ್ ಕಾರ್ಖಾನೆಯ ಮಾಜಿ ಅಧ್ಯಕ್ಷ ಎಚ್ಎ ವೆಂಕಟೇಶ್ ಅವರು ಸ್ಮರಿಸಿದ್ದಾರೆ.

ಇಂದು ಮೈಸೂರಿನ ಸರಸ್ವತಿಪುರಂನ ಶ್ರೀ ಯೋಗಿ ನಾರಾಯಣ ಬಣಜಿಗ (ಬಲಿಜ) ಸಂಘದ ವಿದ್ಯಾರ್ಥಿ ನಿಲಯದ ಆವರಣದಲ್ಲಿ ಹಮ್ಮಿಕೊಂಡಿದ್ದ ಮಾಜಿ ಖಜಾಂಚಿ ಹಾಗೂ ಆಂತರಿಕ ಲೆಕ್ಕಪರಿಶೋಧಕರಾಗಿ ಕಳೆದ ಎರಡು ದಶಕಗಳಿವೆಗಳಿಂದ ಸೇವೆ ಸಲ್ಲಿಸಿದ ಡಿ. ನಾಗರಾಜ್ ಅವರ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಪ್ರಾಮಾಣಿಕ, ಪಾರದರ್ಶಕ ,ಪ್ರಬುದ್ಧತೆ, ಪರಿಪಕ್ವತೆಯಿಂದ  ಸೇವೆ ಸಲ್ಲಿಸಿದ್ದಾರೆ. ಪ್ರತಿ ತಿಂಗಳ ಲೆಕ್ಕವನ್ನು ಕಾರ್ಯಕಾರಿ ಸಮಿತಿಯ ಮುಂದಿಟ್ಟು ಯಾವುದೇ ಲೋಪವಿಲ್ಲದಂತೆ ಸೇವೆ ಸಲ್ಲಿಸಿದ ಅಪರೂಪದ ವ್ಯಕ್ತಿತ್ವವನ್ನು ಹೊಂದಿದವರಾಗಿರುತ್ತಾರೆ. ಇಂತಹ ಹಿರಿಯರು  ವ್ಯವಸ್ಥೆಗೆ  ಮಾದರಿಯಾಗಿರುತ್ತಾರೆ ಎಂದು ಬಣ್ಣಿಸಿದರು.

ಸಂಘ ಸಂಸ್ಥೆಗಳು ಯಾವುದೇ ಆರೋಪಗಳಿಗೆ ಒಳಗಾಗದೆ ಇರುವ ಸಂಖ್ಯೆ ಗಣನೀಯವಾಗಿ ಕಮ್ಮಿ ಇದೆ. ತಮಗೆ ವಹಿಸಿದ ಜವಾಬ್ದಾರಿಯನ್ನು ಕಳಂಕ ರಹಿತವಾಗಿ ನಿರ್ವಹಿಸಿ ಮಾದರಿಯಾಗಿದ್ದಾರೆ. ವಯೋ ಸಹಜ ಆರೋಗ್ಯ ಸಮಸ್ಯೆಯಿಂದ ಅವರ ಸೇವೆ ನಮಗೆ ಲಭ್ಯವಿಲ್ಲದಿರುವುದರ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಶ್ರೀಯುತರ ಸೇವೆ ಮತ್ತು ಕಾರ್ಯವೈಖರಿಯನ್ನು ಸಂಘ ಎಂದಿಗೂ ಮರೆಯುವುದಿಲ್ಲ ಎಂದು ಹೇಳಿ, ಇಂತಹ ವ್ಯಕ್ತಿತ್ವ ಹೊಂದಿದವರನ್ನು ಗೌರವಿಸುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಸಂಘದ ಕಾರ್ಯದರ್ಶಿ ಎಚ್. ಆರ್. ಗೋಪಾಲಕೃಷ್ಣ ಅವರು, ಅವರ ಸೇವೆಯನ್ನು ಹಾಗೂ ಸನ್ಮಾನ ಸನ್ಮಾನದ ಔಚಿತ್ಯವನ್ನು ಸಭೆಗೆ ತಿಳಿಸಿದರು. ಸಂಘದ ಅಧ್ಯಕ್ಷ ಎಂ. ನಾರಾಯಣರವರು ಡಿ. ನಾಗರಾಜರವರ ನಿಷ್ಟೂರ ವ್ಯಕ್ತಿತ್ವ ಹಾಗೂ ಬಾಂಧವ್ಯವನ್ನು ಸ್ಮರಿಸಿದರು.

ಸಮಾರಂಭದಲ್ಲಿ ಉಪಾಧ್ಯಕ್ಷ ಜಿ. ರಮೇಶ್  ಅವರು ಖಜಾಂಚಿ ಕೆ. ಚಂದ್ರಶೇಖರ್ ಅವರು ನಿರ್ದೇಶಕರುಗಳಾದ ಎಚ್. ವಿ. ನಾಗರಾಜು, ಬಿ .ಕೆ. ಸುರೇಶ್ ,  ಶ್ರೀನಿವಾಸ್ ಮೂರ್ತಿ ಶ್ರೀರಂಗಪಟ್ಟಣ  ,ವಸತಿ ನಿಲಯದ ವ್ಯವಸ್ಥಾಪಕ ಎಚ್ .ಆರ್ .ವೆಂಕಟೇಶ್  ನಿಲಯ ಪಾಲಕರಾದ ರಾಮಕೃಷ್ಣ ಹಾಗೂ ಸಮುದಾಯದ ಬಂಧುಗಳು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.vtu

Key words: D. Nagaraju, service, memorable, H.A. Venkatesh

The post ಸಮುದಾಯದ ಏಳಿಗೆಗೆ ಡಿ. ನಾಗರಾಜು ಅವರ ಎರಡು ದಶಕಗಳ ಸೇವೆ ಸ್ಮರಣೀಯ-  ಎಚ್.ಎ . ವೆಂಕಟೇಶ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ಕೈಗಾರಿಕೆಗಳು ಹೊರ ಹೋಗುತ್ತಿರುವುದು ಮೂಲಭೂತ ಸೌಕರ್ಯಗಳ ಕೊರತೆಯಿಂದಲ್ಲ-ಸಚಿವ ಭೈರತಿ ಸುರೇಶ್

ಬೆಂಗಳೂರು,ಮಾರ್ಚ್,17,2026 (www.justkannada.in): ರಾಜ್ಯದ ಕೈಗಾರಿಕೆಗಳು ಮೂಲಭೂತ ಸೌರ್ಕಯಗಳ ಕೊರತೆಯಿಂದ ಹೊರಹೋಗುತ್ತಿಲ್ಲ....

‘ഇറാന്‍ ഒരു ആസന്ന ഭീഷണിയല്ല, ഈ യുദ്ധം ഇസ്രായേലിന് വേണ്ടി’; രാജിവച്ച് അമേരിക്കന്‍ ഭീകരവിരുദ്ധ സമിതി മേധാവി

വാഷിങ്ടണ്‍: ഇറാനെതിരായ യു.എസ്- ഇസ്രഈല്‍ ആക്രമണത്തെ എതിര്‍ത്ത് യു.എസ് ഭീകരവിരുദ്ധ സമിതിയിലെ...

'ரஜினியை பற்றி பேசினால்…' – ஆதவ் இருந்த மேடையிலேயே கொந்தளித்த ரஜினி ரசிகர்

சென்னை கொளத்தூரில் தவெகவின் கொள்கை விளக்கப் பொதுக்கூட்டம் நடந்திருந்தது. இந்தக் கூட்டத்தில்...