18
March, 2026

A News 365Times Venture

18
Wednesday
March, 2026

A News 365Times Venture

ವ್ಯಾಪಕ ಮಳೆ: ಕಬಿನಿ ಜಲಾಶಯ ಭರ್ತಿಗೆ ಇನ್ನು ನಾಲ್ಕು ಅಡಿ ಬಾಕಿ

Date:

ಮೈಸೂರು,ಜೂನ್,2,2025 (www.justkannada.in): ಕೇರಳಾದ ವೈನಾಡು ಭಾಗದಲ್ಲಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ  ಮೈಸೂರು ಜಿಲ್ಲೆ ಹೆಚ್.ಡಿ ಕೋಟೆ ಜಿಲ್ಲೆ ಬೀಚನಹಳ್ಳಿಯಲ್ಲಿರುವ ಕಬಿನಿ ಜಲಾಶಯಕ್ಕೆ ಒಳ ಹರಿವಿನ ಪ್ರಮಾಣ ಗಣನೀಯವಾಗಿ ಹೆಚ್ಚಳವಾಗಿದ್ದು ಜಲಾಶಯ ಭರ್ತಿಗೆ ಕೇವಲ ನಾಲ್ಕು ಅಡಿ  ಮಾತ್ರ ಬಾಕಿ ಇದೆ.

ಜಲಾಶಯದ ಗರಿಷ್ಠ ಮಟ್ಟ 2284 ಅಡಿಗಳಾಗಿದ್ದು ಇಂದಿನ ನೀರಿನ ಮಟ್ಟ 2280.67 ಅಡಿಗಳಿದೆ. ಜಲಾಯಶಕ್ಕೆ  9024 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು ಹೊರ ಹರಿವು 8000 ಕ್ಯೂಸೆಕ್ ಇದೆ. ಇದು ರಾಜ್ಯದಲ್ಲೇ ಮೊಟ್ಟ ಮೊದಲಿಗೆ ತುಂಬುವ ಜಲಾಶಯವಾಗಿದೆ.

ಇನ್ನು ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನಲ್ಲಿರುವ ಕೆಆರ್ ಎಸ್ ಜಲಾಶಯದ ನೀರಿನ ಮಟ್ಟ 103 ಅಡಿಗೆ ದಾಟಿದೆ.  ಕೊಡುಗು ಸೇರಿದಂತೆ ಕಾವೇರಿ ಜಲಾನಯನ ಪ್ರದೇಶದಲ್ಲೂ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೆಆರ್ ಎಸ್ ಜಲಾಶಯ ವಾಡಿಕೆಗಿಂತ ಮೊದಲೇ ತುಂಬುವ ಲಕ್ಷಣ ಕಾಣುತ್ತಿದೆ. .

ಜಲಾಶಯದ ಗರಿಷ್ಠ ಮಟ್ಟ 124.80 ಅಡಿಗಳಾಗಿದ್ದು, ಪ್ರಸ್ತುತ 103 ಅಡಿಗಳಿಗೆ ನೀರಿನ ಮಟ್ಟ ತಲುಪಿದೆ. ಒಳ‌ ಹರಿವು 17 ಸಾವಿರ ಕ್ಯೂಸೆಕ್ ಇದ್ದು 670 ಕ್ಯೂಸೆಕ್ ನೀರು ಹೊರಕ್ಕೆ ಬಿಡಲಾಗುತ್ತಿದೆ.vtu

Key words: rains,  Kabini reservoir,  still, fill, Mysore

The post ವ್ಯಾಪಕ ಮಳೆ: ಕಬಿನಿ ಜಲಾಶಯ ಭರ್ತಿಗೆ ಇನ್ನು ನಾಲ್ಕು ಅಡಿ ಬಾಕಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ಕೈಗಾರಿಕೆಗಳು ಹೊರ ಹೋಗುತ್ತಿರುವುದು ಮೂಲಭೂತ ಸೌಕರ್ಯಗಳ ಕೊರತೆಯಿಂದಲ್ಲ-ಸಚಿವ ಭೈರತಿ ಸುರೇಶ್

ಬೆಂಗಳೂರು,ಮಾರ್ಚ್,17,2026 (www.justkannada.in): ರಾಜ್ಯದ ಕೈಗಾರಿಕೆಗಳು ಮೂಲಭೂತ ಸೌರ್ಕಯಗಳ ಕೊರತೆಯಿಂದ ಹೊರಹೋಗುತ್ತಿಲ್ಲ....

‘ഇറാന്‍ ഒരു ആസന്ന ഭീഷണിയല്ല, ഈ യുദ്ധം ഇസ്രായേലിന് വേണ്ടി’; രാജിവച്ച് അമേരിക്കന്‍ ഭീകരവിരുദ്ധ സമിതി മേധാവി

വാഷിങ്ടണ്‍: ഇറാനെതിരായ യു.എസ്- ഇസ്രഈല്‍ ആക്രമണത്തെ എതിര്‍ത്ത് യു.എസ് ഭീകരവിരുദ്ധ സമിതിയിലെ...

'ரஜினியை பற்றி பேசினால்…' – ஆதவ் இருந்த மேடையிலேயே கொந்தளித்த ரஜினி ரசிகர்

சென்னை கொளத்தூரில் தவெகவின் கொள்கை விளக்கப் பொதுக்கூட்டம் நடந்திருந்தது. இந்தக் கூட்டத்தில்...