18
March, 2026

A News 365Times Venture

18
Wednesday
March, 2026

A News 365Times Venture

ನಟ ಕಮಲ್ ಹಾಸನ್ ಸಿನಿಮಾ ರಿಲೀಸ್ ಮಾಡಿದ್ರೆ ಚಿತ್ರಮಂದಿರಗಳಿಗೆ ಬೆಂಕಿ ಹಚ್ಚುತ್ತೇವೆ: ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ

Date:

ಬೆಂಗಳೂರು,ಮೇ,30,2025 (www.justkannada.in): ತಮಿಳಿನಿಂದ ಕನ್ನಡ ಹುಟ್ಟಿತು ಎಂದು ಹೇಳಿಕೆ ನೀಡಿ ಕನ್ನಡಕ್ಕೆ ಅಪಮಾನ ಮಾಡಿರುವ ನಟ ಕಮಲ್ ಹಾಸನ್ ಸಿನಿಮಾ ರಿಲೀಸ್ ಮಾಡಿದ್ರೆ ಚಿತ್ರಮಂದಿರಗಳಿಗೆ ಬೆಂಕಿ ಹಚ್ಚುತ್ತೇವೆ ಎಂದು ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ಎಚ್ಚರಿಕೆ ನೀಡಿದ್ದಾರೆ.

ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕರವೇ ಅಧ್ಯಕ್ಷ ನಾರಾಯಣಗೌಡ, ಯಾವುದಾದರೂ ಚಿತ್ರಮಂದಿರಗಳು ಕಮಲ್ ಹಾಸನ್ ನಟನೆಯ ‘ಥಗ್ ಲೈಫ್’ ಸಿನಿಮಾ ಬಿಡುಗಡೆ ಮಾಡಿದರೆ ಚಿತ್ರಮಂದಿರಗಳಿಗೆ ಬೆಂಕಿ ಹಚ್ಚುತ್ತೇವೆ. ಕಮಲ್ ಹಾಸನ್ ಅವರು ಕ್ಷಮೆ ಕೇಳದೇ ಇದ್ದರೆ ಅವರ ಯಾವ ಸಿನಿಮಾಗಳೂ ಸಹ ಕರ್ನಾಟಕದಲ್ಲಿ ಬಿಡುಗಡೆ ಆಗಲು ಬಿಡುವುದಿಲ್ಲ. ಕನ್ನಡದ ಬಗ್ಗೆ ಯಾರೇ ಮಾತಾಡಿದರೂ ಕನ್ನಡ ರಕ್ಷಣಾ ವೇದಿಕೆ ಮಾತ್ರ ಬಿಡಲ್ಲ. ನಮ್ಮ ಮೇಲೆ ಇನ್ನೂ ಕೇಸ್ ಹಾಕಿದರೂ ಸಮಸ್ಯೆ ಇಲ್ಲ. ಕಮಲ್ ಹಾಸನ್ ಕ್ಷಮೆ ಕೇಳದೇ ಇದ್ದರೆ ಅವರ ಸಿನಿಮಾ ಬಿಡುಗಡೆ ಆಗಲ್ಲ ಎಂದು ಹೇಳಿದ್ದಾರೆ.vtu

ಕಮಲ್ ಹಾಸನ್ ತಮಿಳಿನ ದೊಡ್ಡ ಮಹಾ ನಟ. ಅವರ ಮೇಲೆ ದೊಡ್ಡ ಅಭಿಮಾನ ನಮಗೂ ಇತ್ತು. ಆದರೆ ಮೊನ್ನೆ ಸಿನಿಮಾ ಕಾರ್ಯಾಕ್ರಮದಲ್ಲಿ ಕನ್ನಡ ವಿರೋಧಿ ಹೇಳಿಕೆ ಕೊಟ್ಟಿದ್ದಾರೆ. ಅವರು ತಮಿಳಿನಿಂದ ಕನ್ನಡ ಹುಟ್ಟಿದ್ದು ಎಂದು ಹೇಳಿದ್ದಾರೆ‌. ಯಾವ ಆಧಾರದ ಮೇಲೆ ಹೇಳಿದ್ದಾರೊ ಗೊತ್ತಿಲ್ಲ. ಯಾವ ಶಾಸನಗಳನ್ನು ನೋಡದೆ ತಮಿಳರನ್ನ ಓಲೈಸುವ ಹೇಳಿಕೆ ಕೊಟ್ಟಿದ್ದಾರೆ‌. ಅವರು ಆ ಮಾತನ್ನ ಹೇಳುವಾಗ ಅಲ್ಲಿ ಶಿವರಾಜ್ ಕುಮಾರ್ ಇದ್ದರು‌. ಅವರು ಅಲ್ಲಿಯೆ ಇದಕ್ಕೆ ವಿರೋಧಿಸಬೇಕಿತ್ತು ಎಂದು  ನಾರಾಯಣಗೌಡ ಅಸಮಾಧಾನ ವ್ಯಕ್ತಪಡಿಸಿದರು.

Key words: actor, Kamal Haasan,  movie, Karave, Narayana Gowda

The post ನಟ ಕಮಲ್ ಹಾಸನ್ ಸಿನಿಮಾ ರಿಲೀಸ್ ಮಾಡಿದ್ರೆ ಚಿತ್ರಮಂದಿರಗಳಿಗೆ ಬೆಂಕಿ ಹಚ್ಚುತ್ತೇವೆ: ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

JDS ಬಿಡುವ ಪ್ರಶ್ನೆಯೇ ಇಲ್ಲ- ಶಾಸಕ ಜಿ.ಟಿ ದೇವೇಗೌಡ

ಮೈಸೂರು,ಮಾರ್ಚ್,18,2026 (www.justkannada.in):  ನಾನು ಜೆಡಿಎಸ್ ಪಕ್ಷದಲ್ಲೇ ಇದ್ದೇನೆ. ಜೆಡಿಎಸ್ ಬಿಡುವ...

ആരെയൊക്കെ വധിച്ചാലും ഇറാന്‍ ദുര്‍ബലപ്പെടില്ല, വ്യക്തികളെ ആശ്രയിച്ചല്ല ആ സംവിധാനം നിലനില്‍ക്കുന്നത്: അരാഗ്ചി

ടെഹ്റാന്‍: യു.എസും ഇസ്രാഈലും ചേര്‍ന്ന് നടത്തുന്ന കൊലപാതകങ്ങള്‍ കൊണ്ട് ഇറാന്റെ ശക്തമായ...

ஹார்முஸில் 5,000 பவுண்ட் வெடிகுண்டு: யாரும் உதவிக்கு வரவில்லை; 'தானே' களத்தில் இறங்கிய அமெரிக்கா

அமெரிக்காவும், இஸ்ரேலும் தங்களுக்கு எதிராக தொடுத்துள்ள போருக்கு ஈரானின் முக்கிய எதிர்வினை...

Indore: భారీ అగ్ని ప్రమాదం.. బాలికతో పాటు ఒకే కుటుంబానికి చెందిన 7 మంది మృతి..!

Indore: ఇండోర్ లో ఘోర అగ్ని ప్రమాదం చోటు చేసుకుంది. ఈ...