18
March, 2026

A News 365Times Venture

18
Wednesday
March, 2026

A News 365Times Venture

ಮೈಸೂರು ಜಿಲ್ಲೆಯಲ್ಲಿ ಮೂರು ಕೋವಿಡ್ ಕೇಸ್ ಪತ್ತೆ

Date:

ಮೈಸೂರು,ಮೇ,26,2025 (www.justkannada.in): ಮೈಸೂರು ಜಿಲ್ಲೆಯಲ್ಲಿ ಮೂರು ಕೋವಿಡ್ ಕೇಸ್ ಪತ್ತೆಯಾಗಿವೆ. ಎರಡು ಕೆ.ಆರ್.ನಗರ, ಒಂದು ಹೆಚ್.ಡಿ.ಕೋಟೆಯ ರೋಗಿಗಳಲ್ಲಿ ಕೊರೋನಾ ಪತ್ತೆಯಾಗಿದೆ ಎಂದು  ಮೈಸೂರು ಡಿಎಚ್ ಓ ಡಾ.ಪಿ.ಸಿ.ಕುಮಾರಸ್ವಾಮಿ‌ ತಿಳಿಸಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿ ಮಾಹಿತಿ ನೀಡಿದ ಡಿಎಚ್ ಓ ಡಾ.ಪಿ.ಸಿ.ಕುಮಾರಸ್ವಾಮಿ‌, ಕೋವಿಡ್ ಪತ್ತೆಯಾದ ಮೂವರು ಕೂಡ ಆರೋಗ್ಯವಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಮೂರು ಕೇಸ್ ಗಳಿಗೆ ಯಾವುದೇ ಹೊರ ರಾಜ್ಯ, ದೇಶಕ್ಕೆ ತೆರಳಿದ ಹಿಸ್ಟರಿ ಇಲ್ಲ. ಈಗ ಪತ್ತೆಯಾದ ಮೂರು ಪ್ರಕರಣದ ಸಂಪರ್ಕಕ್ಕೆ ಸಿಕ್ಕವರ ಟೆಸ್ಟಿಂಗ್ ಮಾಡಿಸಲಾಗಿದೆ. ಎಲ್ಲರನ್ನೂ ಕೂಡ ನೆಗೆಟಿವ್ ಬಂದಿರುವ ಕಾರಣ ಆತಂಕ ಪಡುವಂತಿಲ್ಲ ಎಂದರು.

ಜಿಲ್ಲೆಯಲ್ಲಿ‌ ಗರ್ಭಿಣಿಯರು, ಮಕ್ಕಳು, ವಯಸ್ಕರ ಮೇಲೆ ಹೆಚ್ಚಿನ ಗಮನ ಹರಿಸಿದ್ದೇವೆ. ಮೈಸೂರಿನ ಕೆ.ಆರ್.ಆಸ್ಪತ್ರೆ, ಜಿಲ್ಲಾಸ್ಪತ್ರೆ ಸೇರಿ ಎಲ್ಲರ ಜೊತೆ ಚರ್ಚಸಿದ್ದೇವೆ. ಸರ್ಕಾರದ ಅನುಸಾರ ಸ್ಯಾರಿ ಕೇಸ್ ಗಳನ್ನ ಮಾತ್ರ ಟೆಸ್ಟಿಂಗ್ ಮಾಡುತ್ತಿದ್ದೇವೆ. ಈ ಬಾರಿಯ ಕೋವಿಡ್ ಹೆಚ್ಚು ಅಪಾಯಕಾರಿಯಲ್ಲ. ನಾಗರೀಕರು ಯಾರೂ ಭಯ ಪಡುವ ಅಗತ್ಯವಿಲ್ಲ. ಈ ಬಾರಿಯ ಕೋವಿಡ್ ಜ್ವರ, ಕೆಮ್ಮು, ‌ತಲೆ‌ನೋವು, ಸಾಮಾನ್ಯ ರೋಗ ಲಕ್ಷಣಗಳಂತೆ ಇವೆ. ಹಿಂದೆ ಇದ್ದ ಮಾದರಿಯಲ್ಲೇ ಕೋವಿಡ್ ಬಂದಿದೆ. ಜನರು ಎಚ್ಚರಿಕೆಯಿಂದ ಇರಬೇಕು. ಮೃದು ಆಹಾರವನ್ನ ಸೇವನೆ ಮಾಡಬೇಕು. ಗುಂಪುಗಳಲ್ಲಿ ಅವರು ಸೇರಬಾರದು. ಎಂಟತ್ತು ಜನ ಸೇರುವ ಸ್ಥಳದಲ್ಲಿ ಮಾಸ್ಕ್ ಬಳಸಿ. ಸ್ಯಾನಿಟೈಸರ್ ಬಳಸುವ ಮೂಲಕ ರೋಗ ತಡೆಗಟ್ಟಿ ಎಂದು ಸಲಹೆ ನೀಡಿದರು.

ಕೋವಿಡ್ ಒಂದು ಸಹಜ ಜ್ವರ. ಪ್ರತಿ ವರ್ಷ ಮೇ, ಜೂನ್, ಜುಲೈ ತಿಂಗಳಲ್ಲಿ ಬರುತ್ತದೆ. ವಾತಾವರಣ ಬದಲಾದಂತೆ ಈ ರೀತಿಯ ರೋಗಗಳು ಸಾಮಾನ್ಯ. ಜನರು ಆತಂಕಕ್ಕೆ ಒಳಗಾಗದೆ, ಎಚ್ಚರಿಕೆಯಿಂದ ಇರಿ ಎಂದು ಡಿಎಚ್ ಓ ಡಾ.ಪಿ.ಸಿ.ಕುಮಾರಸ್ವಾಮಿ ತಿಳಿಸಿದ್ದಾರೆ.

Key words: Three, Covid cases, detected ,Mysore district

The post ಮೈಸೂರು ಜಿಲ್ಲೆಯಲ್ಲಿ ಮೂರು ಕೋವಿಡ್ ಕೇಸ್ ಪತ್ತೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ಮೃತ ಮೂವರು ರಿಸರ್ವ್ ಸಬ್ ಇನ್ಸ್‌ಪೆಕ್ಟರ್‌ ಗಳ ಕುಟುಂಬಕ್ಕೆ ಪರಿಹಾರ ಘೋಷಿಸಿದ ಸಿಎಂ

ಬೆಂಗಳೂರು,ಮಾರ್ಚ್,18,2026 (www.justkannada.in): ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಹೆಗ್ಗೆರೆ ಗೇಟ್...

ഭീരുത്വപരമായ വധം; ഇറാന്‍ ഇന്റലിജന്‍സ് മന്ത്രി കൊല്ലപ്പെട്ടെന്ന് സ്ഥിരീകരിച്ച് പെസസ്‌കിയാന്‍

ടെഹ്‌റാന്‍: ഇറാന്റെ ഇന്റലിജന്‍സ് മന്ത്രി എസ്മായില്‍ ഖത്തീബ് കൊല്ലപ്പെട്ടെന്ന് സ്ഥിരീകരിച്ച് ഇറാന്‍...

தவெக: "நான் முதல் மாநாட்டுல சொன்ன மாதிரிதான்" – கூட்டணி சர்ச்சைகளுக்கு விஜய்யின் விளக்கம் என்ன?

தமிழக வெற்றிக் கழகத்தின் இஃப்தார் நோன்பு திறக்கும் நிகழ்வு இன்று மகாபலிபுரத்திலுள்ள...

Story Board: డబ్బిస్తే.. ఏదైనా చేసుకోవచ్చా..? ఫామ్ హౌస్‌లో ఏం జరుగుతోంది..?

Story Board: హైదరాబాద్ చుట్టుపక్కల ఫామ్‌హౌస్‌ల్లో అసాంఘిక కార్యకలాపాలు పెరిగిపోతున్నాయి. అసలు...