11
March, 2026

A News 365Times Venture

11
Wednesday
March, 2026

A News 365Times Venture

ಇದು ವಸೂಲಿ , ಕಮಿಷನ್ ಸರ್ಕಾರ: ಬೆಲೆ ಏರಿಕೆ ಭ್ರಷ್ಟಾಚಾರವೇ ಇವರ ಸಾಧನೆ- ಅಶ್ವಥ್ ನಾರಾಯಣ್ ವಾಗ್ದಾಳಿ

Date:

ಮೈಸೂರು,ಮೇ,19,2025 (www.justkannada.in): ರಾಜ್ಯದಲ್ಲಿರುವುದು ವಸೂಲಿ , ಕಮಿಷನ್ ಸರ್ಕಾರ. ಬೆಲೆ ಏರಿಕೆ ಭ್ರಷ್ಟಾಚಾರವೇ ಇವರ ಸಾಧನೆ ಎಂದು ಮಾಜಿ ಸಚಿವ ಸಿ.ಎನ್ ಅಶ್ವಥ್ ನಾರಾಯಣ್ ವಾಗ್ದಾಳಿ ನಡೆಸಿದರು.

ಮೈಸೂರಿನ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ನಾಯಕರು ರಾಜ್ಯ ಸರ್ಕಾರದ ವೈಫಲ್ಯಗಳ ಕುರಿತು ಚಾರ್ಜ್ ಶೀಟ್ ಬಿಡುಗಡೆ ಮಾಡಿದರು.

ಬಳಿಕ ಮಾತನಾಡಿದ ಮಾಜಿ ಸಚಿವ ಸಿ ಎನ್ ಅಶ್ವಥ್ ನಾರಾಯಣ್, 2 ವರ್ಷದ ಹಿಂದೆ ಬಹಳಷ್ಟು ನಿರೀಕ್ಷೆಯೊಂದಿಗೆ ರಾಜ್ಯದ ಜನರು ಕಾಂಗ್ರೆಸ್ ಪಾರ್ಟಿಗೆ ಅಧಿಕಾರ ನೀಡಿದರು. ಕಳೆದೆರಡು ವರ್ಷದಲ್ಲಿ ರಾಜ್ಯದ ಜನರ ಬದುಕನ್ನು ಬರ್ಬಾದ್ ಮಾಡಲಾಗಿದೆ. ಎರಡು ವರ್ಷ ಪೂರೈಸಿದ್ದರಿಂದ ಸಾಧನಾ ಸಮಾವೇಶ ಮಾಡಲು ಮುಂದಾಗಿದ್ದಾರೆ. ಸಿಎಂ ಹಾಗೂ ಸಚಿವರನ್ನು ಹೊರತುಪಡಿಸಿದರೆ ಬೇರೆ ಯಾರು ಕೂಡ ಸಂತೋಷವಾಗಿಲ್ಲ. ಇದು ವಸೂಲಿ ಸರ್ಕಾರ, ಭ್ರಷ್ಟ ಸರ್ಕಾರ, ಕಮೀಷನ್ ಸರ್ಕಾರ, ಕೆಲವೆಡೆ 60% ಮತ್ತೆ ಕೆಲವೆಡೆ 100% ವಸೂಲಿ ಮಾಡೋ ಸರ್ಕಾರ, ಅಲ್ಪಸಂಖ್ಯಾತರ ತುಷ್ಠೀಕರಣ ಎಂಬುದು ಸೇರಿದಂತೆ ಬೇರೆ ಬೇರೆ ರೀತಿಯಲ್ಲಿ ಕರೆಯಬಹುದು ಎಂದು ಕುಟುಕಿದರು.

ಅಭಿವೃದ್ಧಿ ಶೂನ್ಯ ಸೇರಿದಂತೆ ಹಲವಾರು ರಂಗಗಳಲ್ಲಿ ವಿಫಲವಾಗಿರುವುದೇ ಇವರ ಸಾಧನೆಯಾ? ಬೆಲೆ ಏರಿಕೆ ಭ್ರಷ್ಟಾಚಾರ ಇವರ ಸಾಧನೆಯಾಗಿದೆ. ಯುದ್ದಕ್ಕೆ ಮುನ್ನಾ ಯುದ್ದ ಮಾಡ್ಬೇಡಿ ಎನ್ನೋದು. ಕದನ‌ ವಿರಾಮ ಘೋಷಣೆಯಾದರೆ ಯುದ್ದ ಮಾಡಿ ಅನ್ನೋದು ಇವರ ಧೋರಣೆಯಾಗಿದೆ. ಇವರು ದೇಶಕ್ಕೆ ಅಗೌರವ ತರುವ ರೀತಿ ನಡೆದುಕೊಳ್ಳುತ್ತಿದ್ದಾರೆ ಎಂದು ಅಶ್ವಥ್ ನಾರಾಯಣ್ ಹರಿಹಾಯ್ದರು.

Key words: Commission, Government,, Corruption, achievement, Ashwath Narayan

The post ಇದು ವಸೂಲಿ , ಕಮಿಷನ್ ಸರ್ಕಾರ: ಬೆಲೆ ಏರಿಕೆ ಭ್ರಷ್ಟಾಚಾರವೇ ಇವರ ಸಾಧನೆ- ಅಶ್ವಥ್ ನಾರಾಯಣ್ ವಾಗ್ದಾಳಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ಸಿಎಂ ಸಿದ್ದರಾಮಯ್ಯ ಅವರ ನಾಳಿನ ಮೈಸೂರು ಪ್ರವಾಸ ರದ್ದು

ಬೆಂಗಳೂರು,ಮಾರ್ಚ್,11,2026 (www.justkannada.in): ನಾಳೆ ಸಿಎಂ ಸಿದ್ದರಾಮಯ್ಯ ಹಮ್ಮಿಕೊಂಡಿದ್ದ  ಮೈಸೂರು ಪ್ರವಾಸವನ್ನು...

എന്തുകൊണ്ട് കേരളത്തിന് എയിംസ് അനുവദിക്കുന്നില്ല? കേന്ദ്രത്തിനെതിരെ ഹൈക്കോടതിയുടെ രൂക്ഷ വിമർശനം

കൊച്ചി : കേരളത്തിന് എയിംസ് അനുവദിക്കാത്തതിൽ കേന്ദ്രത്തിനെതിരെ രൂക്ഷ വിമർശനവുമായി ഹൈക്കോടതി...

இந்தியா வந்துகொண்டிருந்த சரக்குக் கப்பல் மீது தாக்குதல்: ஹார்முஸ் ஜலசந்தியில் ஈரான் போரால் பதற்றம்!

ஈரான் மீது இஸ்ரேலும், அமெரிக்காவும் இணைந்து போர் தொடுத்த நிலையில், மத்திய...

Afghanistan: ఇవేం బుద్ది తక్కువ పనుల్రా బాబు.. ఆఫ్ఘనిస్తాన్‌లో బాలికల విద్యపై శాశ్వత నిషేధం!

ఆఫ్ఘానిస్తాన్‌లో తాలిబన్ పాలన కొనసాగుతున్న నేపథ్యంలో, దేశ విద్యాశాఖ మంత్రి ఇటీవల...