23
March, 2026

A News 365Times Venture

23
Monday
March, 2026

A News 365Times Venture

ಕರ್ನಾಟಕದ 3 ಜಿಲ್ಲೆಗಳು ಸೇರಿ ದೇಶಾದ್ಯಂತ ನಾಳೆ ಮಾಕ್ ಡ್ರಿಲ್

Date:

ಬೆಂಗಳೂರು, ಮೇ ,6,2025 (www.justkannada.in): ಜಮ್ಮುಕಾಶ್ಮೀರದ  ಪಹಲ್ಗಾಮ್​ ನಲ್ಲಿ ನಡೆದ ಉಗ್ರ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳಲು ಭಾರತ ಮುಂದಾಗಿದ್ದು, ಪಾಕಿಸ್ತಾನದ ವಿರುದ್ದ ಈಗಾಗಲೇ ಹಲವು ಕಠಿಣ ನಿರ್ಧಾರಗಳನ್ನ ಕೈಗೊಂಡಿದೆ. ಇದೀಗ ಭಾರತ ಮತ್ತು ಪಾಕ್ ನಡುವೆ ಯುದ್ದದ ಕಾರ್ಮೋಡ ಕವಿದಿದ್ದು,  ಇದಕ್ಕಾಗಿಯೇ ಭಾರತೀಯ ಸೇನೆ ಭರ್ಜರಿ ತಾಲೀಮು ನಡೆಸಿದೆ. ಈ ಮಧ್ಯೆ ಇದೀಗ  ಕೇಂದ್ರ ಸರ್ಕಾರ ದೇಶಾದ್ಯಂತ ಮಾಕ್​ ಡ್ರಿಲ್ ಮಾಡಲು ಆದೇಶಿಸಿದೆ.

ಕೇಂದ್ರ ಗೃಹ ಸಚಿವಾಲಯವು ಮೇ 7 ರಂದು 244 ಜಿಲ್ಲೆಗಳಲ್ಲಿ “ಪರಿಣಾಮಕಾರಿ ನಾಗರಿಕ ರಕ್ಷಣೆ” ಅಣಕು ಅಭ್ಯಾಸಗಳನ್ನು ನಡೆಸಲು ಆದೇಶಿಸಿದೆ. ದೆಹಲಿ, ಉತ್ತರ ಪ್ರದೇಶ, ಒಡಿಶಾ ಮತ್ತು ಪಶ್ಚಿಮ ಬಂಗಾಳ, ಕರ್ನಾಟಕ ಸೇರಿದಂತೆ ರಾಜ್ಯಗಳಲ್ಲಿ ನಾಳೆ  ರಾಷ್ಟ್ರವ್ಯಾಪಿ  ಮಾಕ್ ಡ್ರಿಲ್ ನಡೆಯಲಿದೆ ಎಂದು ಕೇಂದ್ರ ಸರ್ಕಾರ ಪ್ರಕಟಿಸಿದೆ

ಇತ್ತ ಕರ್ನಾಟಕದಲ್ಲಿ ಬೆಂಗಳೂರು, ಕಾರವಾರ ಮತ್ತು ರಾಯಚೂರಿನಲ್ಲಿ ನಾಳೆ ಮಾಕ್​ ಡ್ರಿಲ್​ ಗೆ ನಿರ್ಧರಿಸಲಾಗಿದೆ ಎಂದು ಅಗ್ನಿಶಾಮಕ ದಳದ ಡಿಜಿಪಿ ಪ್ರಶಾಂತ್ ಕುಮಾರ್ ಠಾಕೂರ್ ಹೇಳಿದ್ದಾರೆ. ಈ ಬಗ್ಗೆ ಕೇಂದ್ರ ಸರ್ಕಾರದಿಂದ ಸುತ್ತೋಲೆ ಬರುತ್ತದೆ ಎಂದಿದ್ದಾರೆ.

ಈ ಕುರಿತು ಮಾತನಾಡಿದ ಅಗ್ನಿಶಾಮಕ ದಳದ ಡಿಜಿಪಿ ಪ್ರಶಾಂತ್ ಕುಮಾರ್ ಠಾಕೂರ್, ಬೆಂಗಳೂರು, ಕಾರವಾರ, ರಾಯಚೂರಿನಲ್ಲಿ ನಾಳೆ ಸಂಜೆ 4 ಗಂಟೆ ಮಾಕ್​  ಡ್ರಿಲ್ ​ಗೆ ನಿರ್ಧಾರ ಮಾಡಿದ್ದೇವೆ. ಈ ಕುರಿತಾಗಿ ಈಗಾಗಲೇ ಅಗ್ನಿಶಾಮಕದಳ, ಸಿವಿಲ್ ಡಿಫೆನ್ಸ್ ಅಧಿಕಾರಿಗಳ ಜತೆ ಸಭೆ ಮಾಡಲಾಗಿದೆ‌ ಎಂದು ತಿಳಿಸಿದ್ದಾರೆ.

ಬೆಂಗಳೂರಿನ 35 ಕಡೆ ಸೈರನ್​ ಇದ್ದು, 32 ಕಡೆ ಕಾರ್ಯ ನಿರ್ವಹಿಸುತ್ತಿವೆ. ಹೀಗಾಗಿ ಸೈರನ್​ ಕಾರ್ಯ ನಿರ್ವಹಿಸುವ ಕಡೆ ಮಾಕ್ ​ಡ್ರಿಲ್​ ನಡೆಯಲಿದೆ.

Key words: Mock drill, tomorrow,  across ,country –

The post ಕರ್ನಾಟಕದ 3 ಜಿಲ್ಲೆಗಳು ಸೇರಿ ದೇಶಾದ್ಯಂತ ನಾಳೆ ಮಾಕ್ ಡ್ರಿಲ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ಉಪಚುನಾವಣೆ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆಗಳು ನಮ್ಮ ಕೈ ಹಿಡಿಯಲಿದೆ- ಸಿಎಂ ಸಿದ್ದರಾಮಯ್ಯ

ಬಾಗಲಕೋಟೆ,ಮಾರ್ಚ್,23,2026 (www.justkannada.in): ಉಪಚುನಾವಣೆ ಗೆಲ್ಲುವ ಸಂಪೂರ್ಣ ವಿಶ್ವಾಸವಿದೆ. ಗ್ಯಾರಂಟಿ ಯೋಜನೆಗಳು...

എക്കാലത്തുമുള്ളത് കോ-ലീ-ബി സഖ്യം; പി.ഡി.പി മതരാഷ്ട്രവാദം ഉള്ളവരല്ല, വര്‍ഷങ്ങളായി ഇടതുപക്ഷത്തെ പിന്തുണയ്ക്കുന്നു: തോമസ് ഐസക്

തിരുവനന്തപുരം: പാലക്കാട് എന്‍.എം.ആര്‍ റസാഖിനെ സ്ഥാനാര്‍ത്ഥിയാക്കിയതിന് പിന്നില്‍ പാലക്കാട് സി.പി.ഐ.എം-ബി.ജെ.പി ഡീലാണെന്ന...

இறுதி வரை திக் திக்.! `புதுச்சேரியில் காங்கிரஸ் – திமுக கூட்டணி தொடர்கிறது’ – கூட்டாக அறிவிப்பு

புதுச்சேரி சட்டப்பேரவைக்கான வாக்குப்பதிவு ஏப்ரல் 9-ம் தேதி நடைபெற  இருக்கும் நிலையில்,...

Iran Counter: అమెరికాతో ఎలాంటి చర్చలు జరగలేదు.. ‘ట్రంప్ భయపడ్డాడు’.. ఇరాన్ కౌంటర్..

అమెరికా , ఇరాన్ మధ్య ఉద్రిక్తతలు కొనసాగుతున్న వేళ.. అమెరికా అధ్యక్షుడు...