27
March, 2026

A News 365Times Venture

27
Friday
March, 2026

A News 365Times Venture

ಇಸ್ರೋ ಮಾಜಿ ಅಧ್ಯಕ್ಷ ಕೆ. ಕಸ್ತೂರಿ ರಂಗನ್ ನಿಧನ

Date:

ಬೆಂಗಳೂರು,ಏಪ್ರಿಲ್,25,2025 (www.justkannada.in):  ಇಸ್ರೋ ಮಾಜಿ ಅಧ್ಯಕ್ಷ ಕೆ. ಕಸ್ತೂರಿ ರಂಗನ್ ಅವರು ಇಂದು ನಿಧನರಾಗಿದ್ದಾರೆ.

ಕೆಲದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಕಸ್ತೂರಿ ರಂಗನ್ ಅವರು ಇಂದು ಬೆಂಗಳೂರಿನ ಕೊಡಿಗೇನಹಳ್ಳಿ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಕಸ್ತೂರಿ ರಂಗನ್ ಅವರಿಗೆ 84 ವರ್ಷ ವಯಸ್ಸಾಗಿತ್ತು.

1994ರಿಂದ 2003ರವರೆಗೆ  ಇಸ್ರೋ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದ ಕಸ್ತೂರಿ ರಂಗನ್ ಅವರು,  ಅನೇಕ ರಾಕೆಟ್‌ ಗಳ ಉಡಾವಣೆ, ಭಾರತದಲ್ಲಿ ವಿಜ್ಞಾನ, ತಂತ್ರಜ್ಞಾನ ಹಾಗೂ ಇಸ್ರೋ ಬೆಳವಣಿಗೆಯಲ್ಲಿ ಅಪಾರ ಕೊಡುಗೆ ನೀಡಿದ್ದಾರೆ.

ಭಾನುವಾರ ಬೆಳಗ್ಗೆ ಕಸ್ತೂರಿ ರಂಗನ್ ಅವರ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.  ರಾಮನ್ ಸಂಶೋಧನಾ ಸಂಸ್ಥೆಯಲ್ಲಿ ಅಂದು ಬೆಳಿಗ್ಗೆ 10ರಿಂದ 12ರವರೆಗೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

Key words: Former ISRO Chairman, K. Kasturirangan, passes away

The post ಇಸ್ರೋ ಮಾಜಿ ಅಧ್ಯಕ್ಷ ಕೆ. ಕಸ್ತೂರಿ ರಂಗನ್ ನಿಧನ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ಅಧಿವೇಶನದಲ್ಲಿ ಸರ್ಕಾರದ ತಪ್ಪು ಹೊರಗೆಳೆಯುವ ಕಿವಿ ಹಿಂಡುವ ಕೆಲಸ ಮಾಡಿದ್ದೇವೆ- ಆರ್.ಅಶೋಕ್

ಬೆಂಗಳೂರು,ಮಾರ್ಚ್,26,2026 (www.justkannada.in):  ವಿಧಾನಮಂಡಲ ಅಧಿವೇಶನದಲ್ಲಿ ಸರ್ಕಾರದ ತಪ್ಪುಗಳನ್ನು ಹೊರಗೆಳೆಯುವ  ಸರ್ಕಾರದ...

അടിമത്തം മനുഷ്യരാശിക്കെതിരായ ഗുരുതര കുറ്റകൃത്യം; യു.എന്‍ പ്രമേയത്തെ എതിര്‍ത്ത് വോട്ട് ചെയ്ത് യു.എസും ഇസ്രഈലും

ന്യൂയോര്‍ക്ക്: അടമിത്തം മനുഷ്യരാശിക്കെതിരായ ഗുരുതര കുറ്റകൃത്യമാണെന്നും അത് തടയണമെന്നും അപലപിക്കുകയും നഷ്ടപരിഹാരം...

கூட்டணிக் கட்சிகளுக்கு எந்தெந்த தொகுதிகள்? – பட்டியலை தயார் செய்த திமுக!

தி.மு.க கூட்டணியில் இடம்பெற்றுள்ள கட்சிகளுக்கு தொகுதி பங்கீடு முடிந்த நிலையில், ஒவ்வொரு...

Bank Holidays: బ్యాంకులకు వరుస సెలవులు.. వరుసగా మూడు రోజులు.

వరుస సెలవుల కారణంగా వచ్చే వారం దేశవ్యాప్తంగా బ్యాంకింగ్ సేవలకు మూడు...