27
March, 2026

A News 365Times Venture

27
Friday
March, 2026

A News 365Times Venture

MYSORE COURT: ಅಪಘಾತ ಮಾಡಿ 31 ಜನರ ಸಾವಿಗೆ ಕಾರಣರಾದ  ಆರೋಪಿಗೆ ಶಿಕ್ಷೆ.

Date:

ಮೈಸೂರು, ಏ.೨೫,೨೦೨೫: ಮೈಸೂರು-ನಂಜನಗೂಡು ಮುಖ್ಯ ರಸ್ತೆಯಲ್ಲಿರುವ ಉಂಡಭತ್ತಿ ಕೆರೆಗೆ ಟೆಂಪೋ ಉರುಳಿ ೩೧ ಮಂದಿ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಆರೋಪಿಗಳಿಗೆ ಕೋರ್ಟ್‌ ಶಿಕ್ಷೆ ವಿಧಿಸಿದೆ. ೨೦೧೦ ಡಿಸೆಂಬರ್‌ ೧೪ ರಂದು ಘಟನೆ ನಡೆದಿತ್ತು.

ಉಂಡಭತ್ತಿ ಕೆರೆ ಏರಿಯ ಮೇಲೆ ಆರೋಪಿಯು ಕೆಎ-09-4622 ನಂಬರಿನ ಪ್ಯಾಸೆಂಜರ್ ಟೆಂಪೋದಲ್ಲಿ ನಿಗದಿತ ಪ್ರಯಾಣಿಕರಿಗಿಂತ ಹೆಚ್ಚು ಅಂದರೆ 40 ಜನರನ್ನು ಕೊರಿಸಿಕೊಂಡು ನಂಜನಗೂಡು ಕಡೆಯಿಂದ ಮೈಸೂರು ಕಡೆಗೆ ಅತಿ ವೇಗ ಹಾಗೂ ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ರಸ್ತೆಯ ಎಡಬದಿಯ ಕೆರೆಗೆ ಟೆಂಪೋವನ್ನು ಮೊಗಚಿಸಿದ. ೨೦೧೦ ಡಿಸೆಂಬರ್‌ ೧೪ ರಂದು ಘಟನೆ ನಡೆದಿತ್ತು.

ಈ ಪರಿಣಾಮ ಟೆಂಪೋ ಕೆರೆಯ ನೀರಿನಲ್ಲಿ ಮುಳುಗಿ, ಟೆಂಪೋದಲ್ಲಿ ಪ್ರಯಾಣಿಸುತ್ತಿದ್ದ ಪೈಕಿ 31 ಜನರು ಸ್ಥಳದಲ್ಲೇ ಮೃತಪಟ್ಟಿದ್ದು, ಹಾಗೂ ಸ್ವಲ್ಪ ಜನರಿಗೆ ಸಾಮಾನ್ಯ ಸ್ವರೂಪದ ಗಾಯಗಳಾಗಿದ್ದು, ನಂತರ ಅಪಾದಿತ ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡದೆ, ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸದೆ ಟೆಂಪೋವನ್ನು ಬಿಟ್ಟು ಪರಾರಿಯಾಗಿದ್ದ.

ಆರೋಪಿಯು ಸದರಿ ವಾಹನದ ಪರ್ಮಿಟ್‌ನ ಷರತ್ತನ್ನು ಪದೇ ಪದೇ ಉಲ್ಲಂಘನೆ ಮಾಡಿದ್ದ. ಜತೆಗೆ ಆಪಾದಿತ-2 ವಾಹನದ ಮಾಲೀಕ. ವಾಹನದ ಪರ್ಮಿಟ್‌ನ ಷರತ್ತುಗಳನ್ನು ಉಲ್ಲಂಘನೆ ಮಾಡಿ ತಮ್ಮ ವಾಹನದಲ್ಲಿ ನಿಗದಿಗಿಂತ ಹೆಚ್ಚು ಪ್ರಯಾಣಿಕರನ್ನು ಕಳುಹಿಸಿಕೊಟ್ಟಿರುವುದು ತನಿಖೆಯಿಂದ ದೃಢಪಟ್ಟಿರುವುದರಿಂದ ಆಪಾದಿತ-1 (ಚಾಲಕ)  ಮೇಲೆ ಕಲಂ: 279, 337, 304(2) 2 m 2/2. : 187, 177 ಹಾಗೂ  ಅಪಾದಿತ-2 (ವಾಹನದ ಮಾಲೀಕ) ಮೇಲೆ ಕಲಂ 192(ಎ), ಐಎಂ.ವಿ ಆಕ್ಟ್ ರೀತ್ಯಾ ತನಿಖೆ ಕೈಗೊಳ್ಳಲಾಗಿತ್ತು.

file photo

ಡಿ.ವೈ.ಎಸ್.ಪಿ  ಸಿ.ಡಿ ಜಗದೀಶ್ ರವರು ತನಿಖೆ ನಡೆಸಿ ಆರೋಪಿಗಳ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಜತೆಗೆ  ನ್ಯಾಯಾಲಯದ ಪೊಲೀಸ್ ಸಿಬ್ಬಂದಿ ಮಹದೇವಸ್ವಾಮಿ ಈ ಪ್ರಕರಣದಲ್ಲಿ ಸಾಕ್ಷಿದಾರರನ್ನು ಕರೆತರುವಲ್ಲಿ ಸಹಕರಿಸಿದ್ದರು.

ಆಪಾದಿತರ ವಿರುದ್ಧದ ಆಪಾದನೆ ರುಜುವಾತುಪಡಿಸುವ ಸಲುವಾಗಿ ಅಭಿಯೋಜನೆಯು 27 ಜನ ಸಾಕ್ಷಿಗಳನ್ನು ಹಾಗೂ 83 ದಾಖಲೆಗಳನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಿತ್ತು. ಜತೆಗೆ ಸರ್ವೋಚ್ಚ ನ್ಯಾಯಾಲಯದ ತೀರ್ಪುಗಳನ್ನು ಹೆಸರಿಸಿ ವಾದ ಮಂಡಿಸಿದ್ದರಿಂದ ಮೈಸೂರು ನಗರದ 11ನೇ ಅಧಿಕ ಸಿ.ಜೆ & ಜೆ.ಎಂ.ಎಫ್.ಸಿ ನ್ಯಾಯಾಲಯ ನ್ಯಾಯಾಧೀಶರಾದ ಸಂಜಯ್ ಎಂ ಮಲ್ಲಿಕಾರ್ಜುನಯ್ಯ ರವರು ವಿಚಾರಣೆ ನಡೆಸಿ ಆಪಾದಿತರ ವಿರುದ್ಧ ಆಪಾದಿಸಲಾದ ಆಪಾದನೆಯು ಸಾಭೀತಾಗಿದೆ ಎಂದು ಅಭಿಪ್ರಾಯಪಟ್ಟು ಆರೋಪಿಗಳಿಗೆ ಶಿಕ್ಷೆ ಪ್ರಕಟಿಸಿದರು.

ಐಎಂವಿ ಆಕ್ಟ್ ರಡಿಯಲ್ಲಿ ಮೊದಲ ಆರೋಪಿಗೆ ಒಟ್ಟಾರೆ 3 ವರ್ಷ 6 ತಿಂಗಳು ಜೈಲು ಶಿಕ್ಷೆ ಮತ್ತು ಒಟ್ಟಾರೆ- 12,600/-ದಂಡ ಮತ್ತು ಎರಡನೇ ಆರೋಪಿಗೆ 1 ವರ್ಷ ಜೈಲು ಶಿಕ್ಷೆ ಮತ್ತು 10,000/- ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ಸೌಮ್ಯ.ಎಂ.ಎನ್ , ಸಹಾಯಕ ಸರ್ಕಾರಿ ಅಭಿಯೋಜಕಿ

ಸದರಿ ಪ್ರಕರಣದಲ್ಲಿ ರಾಜ್ಯದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕಿ  ಸೌಮ್ಯ.ಎಂ.ಎನ್ ವಿಚಾರಣೆ ನಡೆಸಿ ಸಮರ್ಥವಾಗಿ ವಾದ ಮಂಡಸಿದ್ದರು.

KEY WORDS:  Mysore court, convicted,31 people were killed, tempo fell, Undabhatti Lake , Mysuru-Nanjangud Main Road.

SUMMARY:

Those accused of causing the death of 31 people in an accident were punished. The court convicted the accused in connection with the incident in which 31 people were killed when a tempo fell into Undabhatti Lake on Mysuru-Nanjangud Main Road.

 

 

The post MYSORE COURT: ಅಪಘಾತ ಮಾಡಿ 31 ಜನರ ಸಾವಿಗೆ ಕಾರಣರಾದ  ಆರೋಪಿಗೆ ಶಿಕ್ಷೆ. appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ಅಧಿವೇಶನದಲ್ಲಿ ಸರ್ಕಾರದ ತಪ್ಪು ಹೊರಗೆಳೆಯುವ ಕಿವಿ ಹಿಂಡುವ ಕೆಲಸ ಮಾಡಿದ್ದೇವೆ- ಆರ್.ಅಶೋಕ್

ಬೆಂಗಳೂರು,ಮಾರ್ಚ್,26,2026 (www.justkannada.in):  ವಿಧಾನಮಂಡಲ ಅಧಿವೇಶನದಲ್ಲಿ ಸರ್ಕಾರದ ತಪ್ಪುಗಳನ್ನು ಹೊರಗೆಳೆಯುವ  ಸರ್ಕಾರದ...

അടിമത്തം മനുഷ്യരാശിക്കെതിരായ ഗുരുതര കുറ്റകൃത്യം; യു.എന്‍ പ്രമേയത്തെ എതിര്‍ത്ത് വോട്ട് ചെയ്ത് യു.എസും ഇസ്രഈലും

ന്യൂയോര്‍ക്ക്: അടമിത്തം മനുഷ്യരാശിക്കെതിരായ ഗുരുതര കുറ്റകൃത്യമാണെന്നും അത് തടയണമെന്നും അപലപിക്കുകയും നഷ്ടപരിഹാരം...

கூட்டணிக் கட்சிகளுக்கு எந்தெந்த தொகுதிகள்? – பட்டியலை தயார் செய்த திமுக!

தி.மு.க கூட்டணியில் இடம்பெற்றுள்ள கட்சிகளுக்கு தொகுதி பங்கீடு முடிந்த நிலையில், ஒவ்வொரு...

Bank Holidays: బ్యాంకులకు వరుస సెలవులు.. వరుసగా మూడు రోజులు.

వరుస సెలవుల కారణంగా వచ్చే వారం దేశవ్యాప్తంగా బ్యాంకింగ్ సేవలకు మూడు...