26
March, 2026

A News 365Times Venture

26
Thursday
March, 2026

A News 365Times Venture

ಸಿಎಂ ಮತ್ತು ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಎರಡು ವಿಚಾರಗಳು ಅಪ್ರಸ್ತುತ- ಸಚಿವ ಕೆ.ಎಚ್ ಮುನಿಯಪ್ಪ.

Date:

ಬೆಂಗಳೂರು, ಏಪ್ರಿಲ್‌ 19,2025 (www.justkannada.in):  ಸಿಎಂ ಮತ್ತು ಕೆಪಿಸಿಸಿ ಬದಲಾವಣೆ ಎರಡು ವಿಚಾರಗಳು ಸದ್ಯ ಅಪ್ರಸ್ತುತ ಎಂದು ಆಹಾರ ಇಲಾಖೆ ಸಚಿವ ಕೆ.ಎಚ್ ಮುನಿಯಪ್ಪ ತಿಳಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಕೆಎಚ್ ಮುನಿಯಪ್ಪ, ಮುಖ್ಯಮಂತ್ರಿ ಆಗಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷರಾಗಿ ಡಿಕೆ.ಶಿವಕುಮಾರ್ ರವರೇ ಮುಂದುವರೆಯಲ್ಲಿದ್ದಾರೆ.  ಅದು ನಮ್ಮ ಮಟ್ಟದಲ್ಲಿನ ಚರ್ಚೆ ಅಲ್ಲ ಏನೇ ಇದ್ದರೂ ಹೈಕಮಾಂಡ್ ಗೆ ತೀರ್ಮಾನ ತೆಗೆದುಕೊಳ್ಳುವ ಅಧಿಕಾರವಿದೆ ಎಂದು ಹೇಳಿದರು.

ದಲಿತ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರ ವಿಚಾರವಾಗಿ ಮಾಧ್ಯಮಗಳು ಸೃಷ್ಟಿ ಮಾಡಿವೆ. ಈಗಾಗಲೇ ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ  ಅವರೇ ಇದ್ದು ಇದರಲ್ಲಿ ಯಾವುದೇ ಬದಲಾವಣೆಗಳಿಲ್ಲ. ಎಲ್ಲಾ ಸಮುದಾಯಗಳಿಗೆ ಸಾಮಾಜಿಕ, ಶೈಕ್ಷಣಿಕ ,ಆರ್ಥಿಕ ಸಮಾನತೆ ಕೊಡುವುದು ಕಾಂಗ್ರೆಸ್ ಪಕ್ಷದ ಬದ್ಧತೆ ಯಾಗಿದೆ ಎಂದು ಸಚಿವ ಕೆಎಚ್ ಮುನಿಯಪ್ಪ ತಿಳಿಸಿದರು.

ಧರ್ಮ ಸಿಂಗ್ ನಂತರ ಅತ್ಯಂತ ಹಿರಿಯರಾದ ಮಲ್ಲಿಕಾರ್ಜುನ ಖರ್ಗೆ ಅವರು ಆಗಬೇಕು ಎಂದು ನಾನೇ ಹೇಳಿದ್ದೆ.  ತದನಂತರ ಮೊದಲು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆದಾಗ ನಮ್ಮ ಪರಮೇಶ್ವರ್ ರವರು ಕೆಪಿಸಿಸಿ ಅಧ್ಯಕ್ಷರಿದ್ದಾಗ ಆಕಸ್ಮಿಕವಾಗಿ ಸೋತರು ಕೂಡ ಅವರಿಗೆ ಉಪ ಮುಖ್ಯಮಂತ್ರಿ ಮಾಡಬೇಕೆಂದು ನಾನೇ ಒತ್ತಾಯ ಮಾಡಿದ್ದೆ. ದಲಿತರಲ್ಲಿ ಯಾರಿಗಾದರು ಕೊಡಬೇಕೆಂದು ಹೇಳಿದ್ದೆ ಆದರೆ ಅದರ ಸಮಯ ಇನ್ನೂ ಬಂದಿಲ್ಲ ಎಂಬುದು ಕಾಣತಿದೆ. ಏಕೆಂದರೆ ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ಇರುವುದರಿಂದ ನಮ್ಮ ಹೈಕಮಾಂಡ್ ಯಾವ ಸಮಯದಲ್ಲಿ ಏನು ನಿರ್ಧಾರ ಮಾಡಬೇಕು ಮಾಡಲಿದೆ ಎಂದರು.

Key words: change, CM, KPCC President, irrelevant issues , Minister, K.H. Muniyappa.

The post ಸಿಎಂ ಮತ್ತು ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಎರಡು ವಿಚಾರಗಳು ಅಪ್ರಸ್ತುತ- ಸಚಿವ ಕೆ.ಎಚ್ ಮುನಿಯಪ್ಪ. appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ಟಿಪ್ಪರ್- ಖಾಸಗಿ ಬಸ್ ಡಿಕ್ಕಿ: 13 ಮಂದಿ ಸಜೀವ ದಹನ

ಪ್ರಕಾಶಂ, ಮಾರ್ಚ್,26,2026 (www.justkannada.in):  ಟಿಪ್ಪರ್ ಮತ್ತು ಖಾಸಗಿ ಬಸ್ ಗಳ...

ഹോർമുസ് കടലിടുക്കിൽ സാഹചര്യങ്ങൾ പഴയപോലെയാകില്ല: ഇറാൻ

ടെഹ്‌റാൻ: ഹോർമുസ് കടലിടുക്കിലെ സാഹചര്യം പഴയപടിയാകില്ലെന്ന് ഇറാൻ സൈന്യത്തിന്റെ ഖാത്തം അൽ-അൻബിയ...

பாபநாசம் தொகுதி அமமுக-வுக்கு இல்லை; ரூட் போடும் வைத்தி! – திமுகவில் இணைகிறாரா டிடிவி விசுவாசி?

அமமுக-வின் துணை பொதுச்செயலாளர் எம்.ரெங்கசாமி. டி.டி.வி.தினகரனுக்கு அடுத்தபடியாக டெல்டா அமமுக-வின் முகமாக...