4
March, 2026

A News 365Times Venture

4
Wednesday
March, 2026

A News 365Times Venture

ನಟ ದರ್ಶನ್ ಗೆ  ಜಾಮೀನು ಮಂಜೂರು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ಇಂದು ವಿಚಾರಣೆ

Date:

ನವದೆಹಲಿ,ಏಪ್ರಿಲ್,2,2025 (www.justkannada.in):  ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಮತ್ತು ಇತರೆ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿರುವ ಆದೇಶ ಪ್ರಶ್ನಿಸಿ ಬೆಂಗಳೂರು ನಗರ ಪೊಲೀಸರು ಸಲ್ಲಿಸಿರುವ ಮೇಲ್ಮನವಿ ಅರ್ಜಿ ವಿಚಾರಣೆ ಇಂದು ಸುಪ್ರೀಂ ಕೋರ್ಟ್ ನಲ್ಲಿ  ನಡೆಸಲಿದೆ.

ಪ್ರಕರಣ ಸಂಬಂಧ ದರ್ಶನ್, ಪವಿತ್ರಗೌಡ, ಲಕ್ಷ್ಮಣ್, ಪ್ರದೇಶ್, ನಾಗರಾಜು, ಅನುಕುಮಾ‌ರ್ ಹಾಗೂ ಜಗದೀಶ್ ಅವರಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದರೇ ಉಳಿದ ಹತ್ತು ಮಂದಿ ಆರೋಪಿಗಳಿಗೆ ವಿಚಾರಣಾ ನ್ಯಾಯಾಲಯ ಜಾಮೀನು ಮಂಜೂರು ಮಾಡಿತ್ತು. ಈ ನಿಯಮಿತ ಜಾಮೀನು ಆದೇಶಗಳನ್ನು ಪ್ರಶ್ನಿಸಿ ವಕೀಲ ಅನಿಲ್ ನಿಶಾನಿ ಅರ್ಜಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸುವಂತೆ ರಾಜ್ಯ ಸರ್ಕಾರದ ಪರ ವಕೀಲರು ನ್ಯಾಯಮೂರ್ತಿಗಳಾದ ಜೆ.ಬಿ.ಪಾರ್ದಿ-ವಾಲಾ ಹಾಗೂ ಆ‌ರ್. ಮಹದೇವನ್ ದ್ವಿಸದಸ್ಯ ಪೀಠದೆದುರು ಮಂಗಳವಾರ ಪ್ರಸ್ತಾಪಿಸಿದರು. ವಿಚಾರಣೆಯನ್ನು ಬುಧವಾರ ನಡೆಸುವುದಾಗಿ ನ್ಯಾಯಪೀಠವು ತಿಳಿಸಿದ್ದು  ಇಂದು ಅರ್ಜಿ ವಿಚಾರಣೆ ನಡೆಯಲಿದೆ.

Key words: petition, challenging,  actor, Darshan, bail,  hearing, Supreme court

The post ನಟ ದರ್ಶನ್ ಗೆ  ಜಾಮೀನು ಮಂಜೂರು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ಇಂದು ವಿಚಾರಣೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ശ്രീലങ്കന്‍ തീരത്ത് ഇറാനിയന്‍ യുദ്ധക്കപ്പല്‍ മുക്കിയത് യു.എസ് അന്തര്‍വാഹിനി: സ്ഥിരീകരിച്ച് യു.എസ്

വാഷിങ്ടണ്‍: ശ്രീലങ്കന്‍ തീരത്തിന് സമീപത്ത് വെച്ച് ഇറാന്റെ യുദ്ധക്കപ്പല്‍ മുക്കിയത് യു.എസ്...

` மண்ணுக்கு போற உடம்பு; படிப்புக்கு உதவட்டுமே!'- உடல் தானப் பதிவுசெய்த அற்புதம் அம்மாள், பேரறிவாளன்

"ரொம்ப நாள் ஆசைய்யா... ஆனா யார்கிட்ட கேட்டாலும் யாராவது சொந்தக்காரங்க...

ಒಂದೇ ಕೊಠಡಿಯ 10 ಜನ ಪಾಸಾಗಿದ್ದು ಭ್ರಷ್ಟಾಚಾರವಲ್ಲ,ಇತಿಹಾಸ-KPSC ಕಾರ್ಯದರ್ಶಿ ಜ್ಯೋತಿ

ಬೆಂಗಳೂರು,ಮಾರ್ಚ್, 4,2026 (www.justkannada.in): ಕೆಪಿಎಸ್‌ ಸಿ ಪ್ರಕಟಿಸಿದ ಕೆಎಎಸ್ ಮುಖ್ಯ...