4
March, 2026

A News 365Times Venture

4
Wednesday
March, 2026

A News 365Times Venture

ಬಿ.ಎಸ್.ಎಫ್ ಕ್ಯಾಂಪಸ್ ನಲ್ಲಿ ಸಾಲುಮರದ ತಿಮ್ಮಕ್ಕ ವನ: 8.500 ಗಿಡ ನೆಡುವ ಅಭಿಯಾನ

Date:

ಬೆಂಗಳೂರು ಗ್ರಾಮಾಂತರ, ಮಾರ್ಚ್,26,2025 (www.justkannada.in):  ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಕಾರಹಳ್ಳಿ ಗ್ರಾಮದ ಬಳಿಯ ಬಿ ಎಸ್ ಎಫ್ ಕ್ಯಾಂಪಸ್ ನಲ್ಲಿ ಹೊಸದಾಗಿ 8.500 ಗಿಡಗಳನ್ನು ನೆಡುವುದರ ಜೊತೆಗೆ ಆ ಪ್ರದೇಶಕ್ಕೆ ಸಾಲುಮರದ ತಿಮ್ಮಕ್ಕ ವನ ಎಂದು ನಾಮಕರಣ ಮಾಡಲಾಗಿದೆ.

ಬಿ ಎಸ್ ಎಫ್, ಗೋಕುಲ್ ದಾಸ್ ಎಕ್ಸ್ ಪೋರ್ಟ್ ಫೌಂಡೇಶನ್ ಮತ್ತು ಕ್ಯಾಚ್ ಫೌಂಡೇಶನ್ ಸಂಯುಕ್ತಾಶ್ರಯದಲ್ಲಿ ಕಾರಹಳ್ಳಿಯ ಬಿ ಎಸ್ ಎಫ್ ಅಧೀನದಲ್ಲಿರುವ ಗುಡ್ಡ ಪ್ರದೇಶದಲ್ಲಿ ಹಮ್ಮಿಕೊಂಡಿದ್ದ ಗಿಡ ನೆಡುವ ಕಾರ್ಯಕ್ರಮದಲ್ಲಿ 8.500 ವಿವಿಧ ಜಾತಿಯ ಗಿಡಗಳನ್ನು ನೆಡಲಾಗುವುದು. ಅಭಿಯಾನಕ್ಕೆ ಕರ್ನಾಟಕ ರತ್ನ, ಶತಾಯುಷಿ ಸಾಲುಮರದ ತಿಮ್ಮಕ್ಕ ಚಾಲನೆ ನೀಡಿದರು.

ಇತ್ತೀಚೆಗೆ ಸಾರ್ವಜನಿಕರಲ್ಲಿ ಪ್ರಕೃತಿ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಲಾಗುತ್ತಿದ್ದು, ಪರಿಸರ ಉಳಿಸುವ ನಿಟ್ಟಿನಲ್ಲಿ ವಿವಿಧ ರೀತಿಯ ಕಾರ್ಯಕ್ರಮಗಳನ್ನು ರೂಪಿಸುತ್ತಿರುತ್ತಾರೆ ಎಂದು ಬಿಎಸ್ ಎಫ್ ಅಧಿಕಾರಿ ಡಿ ಕೆ ಯಾದವ್ ಶ್ಲಾಘಿಸಿದರು.

ಬಿ ಎಸ್ ಎಫ್ ಕ್ಯಾಂಪಸ್ ನಲ್ಲೀಗ 8.500 ಗಿಡಗಳನ್ನು ನೆಟ್ಟು ಬೆಳೆಸುವ ಅಭಿಯಾನಕ್ಕೆ ಚಾಲನೆ ದೊರೆತಿದ್ದು ಸಮಾಜ ಮುಖಿ ಸಂಸ್ಥೆಗಳ ಸಹಯೋಗ ಅತ್ಯಗತ್ಯ ಎಂದು ಅವರು ಹೇಳಿದರು.

ಇದೇ ವೇಳೆ ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಬಿ ಎಸ್ ಎಫ್ ಅಧಿಕಾರಿ ಡಿ ಕೆ ಯಾದವ್,ಗೋಕುಲ್ ದಾಸ್ ಅಧಿಕಾರಿಗಳಾದ ಅಮಿತ್ ಶರ್ಮ,ಮಹಾಂತೇಶ್ ಬಂಗಾರಿ,ಪ್ರಣಾಲ್ ಗೋಸ್ವಾಮಿ ಸೇರಿದಂತೆ ಗೋಕುಲ್ ದಾಸ್ ಕಂಪೆನಿ ಹಾಗೂ ಕ್ಯಾಚ್ ಫೌಂಡೇಶನ್ ಸಿಬ್ಬಂದಿ ಭಾಗವಹಿಸಿದ್ದರು.

Key words: Salumarada Thimmakka, BSF Campus,  8.500 Planting, Campaign

The post ಬಿ.ಎಸ್.ಎಫ್ ಕ್ಯಾಂಪಸ್ ನಲ್ಲಿ ಸಾಲುಮರದ ತಿಮ್ಮಕ್ಕ ವನ: 8.500 ಗಿಡ ನೆಡುವ ಅಭಿಯಾನ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ശ്രീലങ്കന്‍ തീരത്ത് ഇറാനിയന്‍ യുദ്ധക്കപ്പല്‍ മുക്കിയത് യു.എസ് അന്തര്‍വാഹിനി: സ്ഥിരീകരിച്ച് യു.എസ്

വാഷിങ്ടണ്‍: ശ്രീലങ്കന്‍ തീരത്തിന് സമീപത്ത് വെച്ച് ഇറാന്റെ യുദ്ധക്കപ്പല്‍ മുക്കിയത് യു.എസ്...

` மண்ணுக்கு போற உடம்பு; படிப்புக்கு உதவட்டுமே!'- உடல் தானப் பதிவுசெய்த அற்புதம் அம்மாள், பேரறிவாளன்

"ரொம்ப நாள் ஆசைய்யா... ஆனா யார்கிட்ட கேட்டாலும் யாராவது சொந்தக்காரங்க...

ಒಂದೇ ಕೊಠಡಿಯ 10 ಜನ ಪಾಸಾಗಿದ್ದು ಭ್ರಷ್ಟಾಚಾರವಲ್ಲ,ಇತಿಹಾಸ-KPSC ಕಾರ್ಯದರ್ಶಿ ಜ್ಯೋತಿ

ಬೆಂಗಳೂರು,ಮಾರ್ಚ್, 4,2026 (www.justkannada.in): ಕೆಪಿಎಸ್‌ ಸಿ ಪ್ರಕಟಿಸಿದ ಕೆಎಎಸ್ ಮುಖ್ಯ...