20
March, 2026

A News 365Times Venture

20
Friday
March, 2026

A News 365Times Venture

ಹನಿಟ್ರ್ಯಾಪ್ ಚರ್ಚೆ: 48 ಜನರ ಪೆನ್ ಡ್ರೈವ್ ಮಾಡಿಕೊಂಡಿದ್ದಾರೆ ಎಂದ ಸಚಿವ ರಾಜಣ್ಣ: ಉನ್ನತ ಮಟ್ಟದ ತನಿಖೆಗೆ ಗೃಹ ಸಚಿವರ ಆದೇಶ

Date:

ಬೆಂಗಳೂರು,ಮಾರ್ಚ್,20,2025 (www.justkannada.in): ರಾಜ್ಯದ ಪ್ರಭಾವಿ ಸಚಿವರೊಬ್ಬರನ್ನು ಹನಿಟ್ರ್ಯಾಪ್​ (ಬಲೆಗೆ ಬೀಳಿಸುವ ಯತ್ನ ನಡೆದಿದೆ ಎನ್ನುವ ಸುದ್ದಿ ಭಾರೀ ಸದ್ದು ಮಾಡಿದ್ದು,  ಇದೀಗ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಸದನದಲ್ಲಿ ಭಾರಿ ಚರ್ಚೆಯಾಗಿದೆ.

ವಿಧಾನಸಭೆಯಲ್ಲಿ ಹನಿಟ್ರ್ಯಾಪ್ ವಿಚಾರದ ಬಗ್ಗೆ ಪ್ರಸ್ತಾಪಿಸಿದ ಸಹಕಾರ ಸಚಿವ ಕೆ.ಎನ್ ರಾಜಣ್ಣ, ನನಗಿರೋ ಮಾಹಿತಿಯಂತೆ ಒಬ್ಬರು, ಇಬ್ಬರೂ ಇಲ್ಲ. ಇದು ನಮ್ಮ ರಾಜ್ಯಕ್ಕೆ ಸೀಮಿತವಾಗಿಲ್ಲ. ರಾಷ್ಟ್ರಮಟ್ಟದ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಇದರಲ್ಲಿ ಸಿಲುಕಿದ್ದಾರೆ. 48 ಜನ ಈ ಸಿಡಿನಲ್ಲಿ ಇದ್ದಾರೆ ಎಂದರು.

48 ಜನರ ಪೆನ್ ಡ್ರೈವ್ ಮಾಡಿಕೊಂಡಿದ್ದಾರೆ.  ಕರ್ನಾಟಕ ಸಿಡಿ ಪೆನ್ ಡ್ರೈವ್ ಕಾರ್ಖಾನೆಯಾಗಿದೆ. ರಾಜ್ಯಕ್ಕೆ ಮಾತ್ರವಲ್ಲದೆ ರಾಷ್ಟ್ರಮಟ್ಟದವರೆಗೂ ಇದು ಹಬ್ಬಿದೆ. ನಾನು ಗೃಹ ಸಚಿವರಿಗೆ ಲಿಖಿತ ದೂರು ಕೊಡಿತ್ತೇನೆ.  ಇದರ ಹಿಂದೆ ಯಾರೇ ಇದ್ದರೂ ಹೊರಬರಬೇಕು. ಇದರ ಹಿಂದಿರುವ ನಿರ್ದೇಶಕರು ಯಾರೆಂದು ತಿಳಿಯಲಿ ಎಂದು ಒತ್ತಾಯಿಸಿದರು.

ಉನ್ನತ ಮಟ್ಟದ ತನಿಖೆಗೆ ಆದೇಶಿಸುವೆ -ಗೃಹ ಸಚಿವ ಪರಮೇಶ್ವರ್

ಈ ಕುರಿತು ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್,  ರಾಜಣ್ಣ ಅವರು ಲಿಖಿತ ದೂರು ನೀಡುವುದಾಗಿ ಹೇಳಿದ್ದಾರೆ. ಲಿಖಿತ ದೂರು ನೀಡಿದರೆ ಉನ್ನತ ಮಟ್ಟದ ತನಿಖೆಗೆ ಆದೇಶಿಸುವೆ ಎಂದು ಸ್ಪಷ್ಟಪಡಿಸಿದರು.

ಇನ್ನು ಇದೇ ವೇಳೆ ನನ್ನ ಮೇಲಿನ ಪ್ರಕರಣ ಏನು ಮಾಡುತ್ತೀರಿ ಎಂದು ರಾಜರಾಜೇಶ್ವರಿ ನಗರ ಬಿಜೆಪಿ ಶಾಸಕ ಮುನಿರತ್ನ ಅವರ ಗೃಹ ಸಚಿವ ಪರಮೇಶ್ವರ್​ ಅವರನ್ನು ಪ್ರಶ್ನಿಸಿದರು. ಈ ವೇಳೆ ಮಧ್ಯೆ ಪ್ರವೇಶಿಸಿದ ಸ್ಪೀಕರ್, ನೀವು ಲಿಖಿತವಾಗಿ ದೂರು ಕೊಡಿ ಎಂದು ಸಲಹೆ ನೀಡಿದರು.

Key words: Honeytrap, Discussion, session, Minister, KN Rajanna

The post ಹನಿಟ್ರ್ಯಾಪ್ ಚರ್ಚೆ: 48 ಜನರ ಪೆನ್ ಡ್ರೈವ್ ಮಾಡಿಕೊಂಡಿದ್ದಾರೆ ಎಂದ ಸಚಿವ ರಾಜಣ್ಣ: ಉನ್ನತ ಮಟ್ಟದ ತನಿಖೆಗೆ ಗೃಹ ಸಚಿವರ ಆದೇಶ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

താനൂരില്‍ നിന്നും തിരൂരിലേക്ക്; വി. അബ്ദുറഹിമാന്‍ മണ്ഡലം മാറി

മലപ്പുറം: താനൂര്‍ മണ്ഡലത്തില്‍ എല്‍.ഡി.എഫ് സ്ഥാനാര്‍ത്ഥിയായി പ്രഖ്യാപിച്ചിരുന്ന വി. അബ്ദുറഹിമാന്‍ മണ്ഡലം...

'6 சீட்டுனா பேசுறதுக்கு கூப்பிடுங்க, இல்லன்னா..!'- கறார் சி.பி.எம்; இறங்கி வராத திமுக? பின்னணி என்ன?

திமுக - சி.பி.எம் இடையேயான தொகுதி பங்கீட்டில் இழுபறி ஓய்ந்தபாடில்லை. மூன்று...

Off The Record: గుంటూరు నియోజకవర్గంలో పెరిగిపోతున్న అసమ్మతి సెగలు

Off The Record: గుంటూరు తూర్పు నియోజకవర్గంలో మైనార్టీల ఓట్లు ఎక్కువ....

കോണ്‍ഗ്രസിന്റെ രണ്ടാംഘട്ട സ്ഥാനാര്‍ത്ഥി പട്ടിക പ്രഖ്യാപിച്ചു; കണ്ണൂരില്‍ ടി.ഒ മോഹനന്‍, അബിന്‍ വര്‍ക്കിയും സന്ദീപ് വാര്യരും പട്ടികയില്‍

തിരുവനന്തപുരം: ഏറെ അനിശ്ചിതത്വത്തിനും ചര്‍ച്ചകള്‍ക്കുമൊടുവില്‍ നിയമസഭാ തെരഞ്ഞെടുപ്പിനുള്ള കോണ്‍ഗ്രസിന്റെ രണ്ടാം ഘട്ട...