16
March, 2026

A News 365Times Venture

16
Monday
March, 2026

A News 365Times Venture

ಎಲ್ಲಾ ಸರ್ವೇಯಲ್ಲೂ ನಾನು ನಿರ್ದೋಶಿ: ಒಂದು ಗುಂಟೆ ಜಮೀನನ್ನೂ ನಾನು ಕಬಳಿಸಿಲ್ಲ- ರಮೇಶ್ ಕುಮಾರ್

Date:

ಕೋಲಾರ,ಮಾರ್ಚ್,5,2025 (www.justkannada.in): ಶ್ರೀನಿವಾಸಪುರ ತಾಲೂಕಿನ ಜಿನಗಲಕುಂಟೆ ಸರ್ವೇ ನಂಬರ್ 1 ಮತ್ತು 2 ರಲ್ಲಿ ಅರಣ್ಯ ಒತ್ತುವರಿ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ 4 ಬಾರಿ ಜಮೀನು ಜಂಟಿ ಸರ್ವೇ ಆಗಿದೆ, ಎಲ್ಲಾ ಸರ್ವೇಯಲ್ಲೂ ನಾನು ನಿರ್ದೋಶಿ ಅಂತಾ ಬಂದಿದೆ. ಒಂದು ಗುಂಟೆ ಜಮೀನನ್ನೂ ನಾನು ಕಬಳಿಸಿಲ್ಲ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ತಿಳಿಸಿದರು.

ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅರಣ್ಯ ಭೂಮಿ ಒತ್ತುವರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ಜಿದಾರ ವಕೀಲ ಶಿವಾರೆಡ್ಡಿ  ರಿಟ್ ಪಿಟಿಷನ್ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಈ ಕುರಿತು ಮಾತನಾಡಿದ ರಮೇಶ್ ಕುಮಾರ್, ಇಷ್ಟುದಿನ ನೋಡಿದ್ದು ಬರೀ ಟ್ರಯಲ್, ಇನ್ಮೇಲೆ ಅಸಲೀ ಪಿಕ್ಚರ್ ಬರುತ್ತೆ ಚೌಡೇಶ್ವರಿ ತಾಯಿ ಆಣೆಗೂ ನಾನು ಅರಣ್ಯ ಜಮೀನು ಕಬಳಿಸಿಲ್ಲ ಎಂದರು.

4 ಬಾರಿ ಜಮೀನು ಜಂಟಿ ಸರ್ವೇ ಆಗಿದೆ, ಎಲ್ಲಾ ಸರ್ವೇಯಲ್ಲೂ ನಾನು ನಿರ್ದೋಶಿ, ನನ್ನ ವಿರುದ್ಧ ಅರ್ಜಿ ಸಲ್ಲಿಸಿದ್ದ ಅರ್ಜಿದಾರನಿಗೆ ದೇವರು ಒಳ್ಳೆಯದು ಮಾಡಲಿ. ಅರಣ್ಯ ಇಲಾಖೆಗೆ ಸೇರಿದ ಒಂದು ಗುಂಟೆ ಜಮೀನು ನಾನು ಕಬಳಿಸಿಲ್ಲ. ಶ್ರೀನಿವಾಸಪುರ ತಾಲೂಕಿನ ಸಮಗ್ರ ಅಭಿವೃದ್ಧಿಗೆ ನಾನು ಸಹಕಾರ ನೀಡುತ್ತೇನೆ. ಆರೋಪಗಳ ಬಗ್ಗೆ ನಾನು ತಲೆಕೆಡಿಸಿಕೊಳ್ಳಲ್ಲ ಎಂದು ರಮೇಶ್ ಕುಮಾರ್ ತಿಳಿಸಿದರು.

Key words: Forest land, encroachment case, Ramesh Kumar

 

The post ಎಲ್ಲಾ ಸರ್ವೇಯಲ್ಲೂ ನಾನು ನಿರ್ದೋಶಿ: ಒಂದು ಗುಂಟೆ ಜಮೀನನ್ನೂ ನಾನು ಕಬಳಿಸಿಲ್ಲ- ರಮೇಶ್ ಕುಮಾರ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ಉಪಚುನಾವಣೆಗಳ ಗೆಲುವಿಗೆ ಕಾಂಗ್ರೆಸ್ ಮಹಿಳಾ ಸದಸ್ಯರ ಪಾತ್ರ ಮಹತ್ವವಾದುದು- ಸಿಎಂ ಸಿದ್ದರಾಮಯ್ಯ

ಬೆಂಗಳೂರು, ಮಾರ್ಚ್, 16,2026 (www.justkannada.in): ಬಾಗಲಕೋಟೆ ಹಾಗೂ ದಾವಣಗೆರೆ ಉಪಚುನಾವಣೆಯ...

​​ഇറാനെതിരായ ആക്രമണം പ്രതീക്ഷിച്ചപോലെ മുന്നോട്ട് പോകുന്നിലെന്ന് ഇസ്രഈൽ

ടെൽ അവീവ്: ഇറാന് എതിരേയുള്ള ആക്രമണം പ്രതീക്ഷിച്ചപോലെ മുന്നോട്ട് പോകുന്നില്ലെന്ന് ഇസ്രഈലി...

Trump: "ஹார்முஸ் ஜலசந்தியைத் திறக்க சீனா உதவ வேண்டும்" – ட்ரம்ப்பின் நிபந்தனையும் சீனாவின் பதிலும்

அமெரிக்கா - ஈரான் போரினால் உலகளவில் கச்சா எண்ணெய் விலை விண்ணை...

Israel-Khamenei: ఇరాన్‌పై ఇజ్రాయెల్ దాడులు.. ఖమేనీకి ఇష్టమైన వాటిపై ఎటాక్

పశ్చిమాసియాలో ఉద్రిక్త పరిస్థితులు కొనసాగుతున్నాయి. ఇరాన్‌పై ఇజ్రాయెల్ దాడులు తీవ్ర అవుతున్నాయి....