16
March, 2026

A News 365Times Venture

16
Monday
March, 2026

A News 365Times Venture

ಚಾಂಪಿಯನ್ಸ್ ಟ್ರೋಫಿ ಸೋಲಿನ ಬೆನ್ನಲ್ಲೆ ಏಕದಿನ ಕ್ರಿಕೆಟ್ ಗೆ ಸ್ಟೀವ್ ಸ್ಮಿತ್ ವಿದಾಯ

Date:

ದುಬೈ,ಮಾರ್ಚ್,5,2025 (www.justkannada.in):  ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್ ಪಂದ್ಯದಲ್ಲಿ ಭಾರತದ ವಿರುದ್ಧ ಆಸ್ಟ್ರೇಲಿಯಾ ಸೋತ  ಬೆನ್ನಲ್ಲೇ ಇದೀಗ ಆಸ್ಟ್ರೇಲಿಯಾ ತಂಡದ ಕ್ಯಾಪ್ಟನ್ ಆಗಿದ್ದ ಸ್ಟೀವ್ ಸ್ಮಿತ್ ಏಕದಿನ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ.

ನಿನ್ನೆ ಚಾಂಪಿಯನ್ಸ್ ಟ್ರೋಫಿಯ ಮೊದಲ ಸೆಮಿ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಎದುರಾಗಿದ್ದವು. ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡವು ಆಸ್ಟ್ರೇಲಿಯಾವನ್ನು ಬಗ್ಗು ಬಡಿದು ಫೈನಲ್ ಗೇರಿದೆ.

ಈ ಮಧ್ಯೆ  ಪಂದ್ಯದ ಮುಗಿದ ಬಳಿಕ ಆಸ್ಟ್ರೇಲಿಯಾ ಕ್ಯಾಪ್ಟನ್ ಸ್ಟೀವ್ ಸ್ಮಿತ್ ಅವರು ಏಕದಿನ ಕ್ರಿಕೆಟ್  ನಿಂದ ನಿವೃತ್ತರಾಗುವುದಾಗಿ ತಿಳಿಸಿದ್ದಾರೆ. ಸ್ಟೀವ್ ‍ಸ್ಮಿತ್ ಅವರು ಟೆಸ್ಟ್ ಮತ್ತು ಟಿ 20 ಅಂತರರಾಷ್ಟ್ರೀಯ ಪಂದ್ಯಗಳಿಗೆ ಲಭ್ಯವಿರಲಿದ್ದಾರೆ.

ಲೆಗ್ ಸ್ಪಿನ್ ಆಲ್ ರೌಂಡರ್ ಆಗಿ 2010 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಪಾದಾರ್ಪಣೆ ಮಾಡಿದ  ಸ್ಟೀವ್  ಸ್ಮಿತ್ 170 ಏಕದಿನ ಪಂದ್ಯಗಳಲ್ಲಿ 43.28 ಸರಾಸರಿಯಲ್ಲಿ 5800 ರನ್ ಗಳಿಸಿದ್ದಾರೆ ಮತ್ತು 12 ಶತಕಗಳು ಮತ್ತು 35 ಅರ್ಧಶತಕಗಳು ಮತ್ತು 28 ವಿಕೆಟ್ ಗಳನ್ನು ಪಡೆದಿದ್ದಾರೆ.

ಸ್ಟೀವ್ ಸ್ಮಿತ್ ಆಸ್ಟ್ರೇಲಿಯಾದ 2015 ಮತ್ತು 2023 ರ ಐಸಿಸಿ ವಿಶ್ವಕಪ್ ವಿಜೇತ ತಂಡಗಳ ಸದಸ್ಯರಾಗಿದ್ದರು. ಪ್ಯಾಟ್ ಕಮಿನ್ಸ್ ಗಾಯಗೊಂಡಿದ್ದ ಹಿನ್ನೆಲೆಯಲ್ಲಿ 2025ರ ಚಾಂಪಿಯನ್ಸ್ ಟ್ರೋಫಿಗೆ ಸ್ಟೀವ್ ಸ್ಮಿತ್ ಅವರನ್ನ ಆಸ್ಟ್ರೇಲಿಯಾ ತಂಡದ ನಾಯಕರನ್ನಾಗಿ ಮಾಡಲಾಗಿತ್ತು.

Key words: Steve Smith, retires, ODI cricket

The post ಚಾಂಪಿಯನ್ಸ್ ಟ್ರೋಫಿ ಸೋಲಿನ ಬೆನ್ನಲ್ಲೆ ಏಕದಿನ ಕ್ರಿಕೆಟ್ ಗೆ ಸ್ಟೀವ್ ಸ್ಮಿತ್ ವಿದಾಯ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ಮೊಬೈಲ್ ಕ್ಯಾಂಟಿನ್ ಗೆ ಸಹಾಯಧನ: ಅರ್ಜಿ ಸಲ್ಲಿಸಲು ಅವಧಿ ವಿಸ್ತರಣೆ

ಬೆಂಗಳೂರು ಗ್ರಾಮಾಂತರ, ಮಾರ್ಚ್,16,2026 (www.justkannada.in): ಪ್ರವಾಸೋದ್ಯಮ ಇಲಾಖೆ ವತಿಯಿಂದ ಎಸ್.ಸಿ.ಎಸ್.ಪಿ/ಟಿ.ಎಸ್.ಪಿ...

സി.പി.ഐ.എം വിട്ട് ടി.കെ. ഗോവിന്ദന്‍; തളിപ്പറമ്പില്‍ പി.കെ. ശ്യാമളക്കെതിരെ മത്സരിക്കും

കണ്ണൂര്‍: സ്ഥാനാര്‍ത്ഥി പ്രഖ്യാപനത്തിന് പിന്നാലെ പാര്‍ട്ടി വിട്ട് കണ്ണൂരിലെ മുതിര്‍ന്ന സി.പി.ഐ.എം...

ஒரே நேரத்தில் 3 சிறுமிகள் பாலியல் வன்கொடுமை; குற்றவாளிக்கு தூக்கு தண்டனை விதித்த போக்சோ நீதிமன்றம்!

நெல்லை மாவட்டம், மேலப்பாளையம் அருகிலுள்ள அழகிரிபுரம் பகுதியைச் சேர்ந்தவர் ஆனந்தசேகர். பெயிண்டரான...

Gas Cylinder: ఒక ఇంట్లో ఎన్ని గ్యాస్ సిలిండర్లు ఉండాలి..? ఈ నిబంధనలు తెలియకపోతే జైలుకే..

ప్రస్తుతం మన దేశంలోని పలు నగరాల్లో వంటగ్యాస్ (LPG) సరఫరాపై ఒత్తిడి...