14
March, 2026

A News 365Times Venture

14
Saturday
March, 2026

A News 365Times Venture

SSLC ಪೂರ್ವ ಸಿದ್ಧತಾ ಪರೀಕ್ಷೆ ಪರಿಷ್ಕೃತ ವೇಳಾಪಟ್ಟಿ ಪ್ರಕಟ

Date:

ಬೆಂಗಳೂರು,ಫೆಬ್ರವರಿ,12,2025 (www.justkannada.in): 2024-25ನೇ ಸಾಲಿನ ರಾಜ್ಯಮಟ್ಟದ ಎಸ್ ಎಸ್ ಎಲ್ ಸಿ ಪೂರ್ವಸಿದ್ಧತಾ ಪರೀಕ್ಷೆಯ ಪರಿಷ್ಕೃತ ವೇಳಾಪಟ್ಟಿಯನ್ನು ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಪ್ರಕಟಿಸಿದೆ.

ದಿನಾಂಕ 25-02-2025ರಿಂದ 04-03-2025ರವರೆಗೆ ಎಸ್ ಎಸ್ ಎಲ್ ಸಿ ಪೂರ್ವಸಿದ್ಧತಾ ಪರೀಕ್ಷೆ ನಡೆಯಲಿದ್ದು ಸದರಿ ಪೂರ್ವ ಸಿದ್ಧತಾ ಪರೀಕ್ಷೆಯ ಕೆಲವು ವಿಷಯಗಳ ಸಮಯವನ್ನು ಮಾರ್ಪಾಡು ಮಾಡಿ, ಪರಿಷ್ಕೃತ ವೇಳಾಪಟ್ಟಿಯನ್ನು ಮಂಡಳಿಯ ಜಾಲತಾಣದಲ್ಲಿ ಪ್ರಕಟಿಸಲಾಗಿದೆ.

ಎಲ್ಲಾ ಪ್ರೌಢ ಶಾಲಾ ಮುಖ್ಯ ಶಿಕ್ಷಕರು ಎಸ್ ಎಸ್ ಎಲ್ ಸಿ ಪೂರ್ವಸಿದ್ಧತಾ ಪರೀಕ್ಷೆಯ ವೇಳಾಪಟ್ಟಿಯನ್ನು ಮಂಡಳಿಯ ಜಾಲತಾಣ www.kseab.karnataka.gov.in ಇಲ್ಲಿ ಪಡೆದುಕೊಂಡು, ತಮ್ಮ ಶಾಲಾ ಸೂಚನಾ ಫಲಕದಲ್ಲಿ ಪ್ರಕಟಿಸುವಂತೆ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಸೂಚಿಸಿದೆ.

ಫೆಬ್ರವರಿ 25 ರಂದು ಪ್ರಥಮ ಭಾಷೆ ಕನ್ನಡ, ಫೆ. 27 ರಂದು ಗಣಿತ, ಫೆಬ್ರವರಿ 28 ರಂದು ದ್ವಿತೀಯ ಭಾಷೆ (ಇಂಗ್ಲಿಷ್‌, ಕನ್ನಡ), ಮಾರ್ಚ್ 1 ರಂದು ಹಿಂದಿ ಅಥವಾ ತೃತೀಯ ಭಾಷೆ, ಮಾರ್ಚ್ 3ರಂದು ವಿಜ್ಞಾನ, ಮಾರ್ಚ್  4 ರಂದು ಸಮಾಜ ವಿಜ್ಞಾನ ಪರೀಕ್ಷೆ ಇರಲಿದೆ.

ಮೊದಲ 3 ಪರೀಕ್ಷೆ ಬೆಳಗ್ಗೆ 10ರಿಂದ ಮಧ್ಯಾಹ್ನ 1.15ರ ವರೆಗೆ ನಡೆಯಲಿವೆ. ಅನಂತರದ 3 ಪರೀಕ್ಷೆಗಳು ಮಧ್ಯಾಹ್ನ 2 ಗಂಟೆಯಿಂದ ಸಂಜೆ 5 ಅಥವಾ 5.15ರ ವರೆಗೆ ನಡೆಯಲಿವೆ ಎಂದು ಎಂದು ಮಂಡಳಿ ಅಧ್ಯಕ್ಷರು ತಿಳಿಸಿದ್ದಾರೆ.

Key words: Revised, schedule, SSLC Preparatory Exam, announced

The post SSLC ಪೂರ್ವ ಸಿದ್ಧತಾ ಪರೀಕ್ಷೆ ಪರಿಷ್ಕೃತ ವೇಳಾಪಟ್ಟಿ ಪ್ರಕಟ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ಕೃಷ್ಣ ಮೇಲ್ದಂಡೆ ಯೋಜನೆ: ಸರ್ವಪಕ್ಷ ಸಭೆ ಕರೆದಿದ್ದೇವೆ- ಡಿಸಿಎಂ ಡಿಕೆ ಶಿವಕುಮಾರ್

ಬಾಗಲಕೋಟೆ,ಮಾರ್ಚ್,14,2026 (www.justkannada.in) : ಕೃಷ್ಣ ಮೇಲ್ದಂಡೆ ಯೋಜನೆ ಸಂಬಂಧ ನವದೆಹಲಿಯಲ್ಲಿ...

കരുതലിന്റെ കാതല്‍; വയനാട് ടൗണ്‍ഷിപ്പിലെ താമസക്കാര്‍ക്ക് സാധന സാമഗ്രികള്‍ വാങ്ങാന്‍ ഒരു ലക്ഷം വീതം

തിരുവനന്തപുരം: ഒരുക്കിയ വയനാട് ടൗണ്‍ഷിപ്പിലെ താമസക്കാര്‍ക്ക് കൂടുതല്‍ ധനസഹായവുമായി സംസ്ഥാന സര്‍ക്കാര്‍....

"தேர்தலில் போட்டியிடும்படி மோடியின் பிரதிநிதி என்னை சந்தித்தார்" – எம்.பி ஆக ஆசைப்படும் ஐ.எம்.விஜயன்

கேரளாவில் விரைவில் சட்டசபை தேர்தல் நடைபெற உள்ளது. கேரளாவைச் சேர்ந்த இந்தியக்...

War Effect : తెలంగాణలో వార్ ఎఫెక్ట్.. చరిత్ర సృష్టించిన విద్యుత్ శాఖ

తెలంగాణ రాష్ట్ర విద్యుత్ రంగం సరికొత్త చరిత్రను లిఖించింది. రాష్ట్ర చరిత్రలో...