4
October, 2026

A News 365Times Venture

4
Sunday
October, 2026

A News 365Times Venture

ಮೈಸೂರು ದಸರಾ ಚಿತ್ರಕಲಾ ಸ್ಪರ್ಧೆ: ವಿಜೇತ ಮಕ್ಕಳಿಗೆ ಬಹುಮಾನವಾಗಿ ಸೈಕಲ್ ವಿತರಣೆ

Date:

ಮೈಸೂರು,ಅಕ್ಟೋಬರ್,3,2026 (www.justkannada.in):  ನಾಡಹಬ್ಬ ಮೈಸೂರು ದಸರಾ-2026 ಅಂಗವಾಗಿ ದಸರಾ ಚಿತ್ರಸಂತೆ ಸಮಿತಿ ವತಿಯಿಂದ ಮೈಸೂರು ದೃಷ್ಯ ಕಲಾವಿದರ ಸಂಘದ ಸಹಯೋಗದೊಂದಿಗೆ 8 ರಿಂದ 12 ನೇ ತರಗತಿ ಮಕ್ಕಳಿಗೆ ಆಯೋಜಿಸಿದ್ದ ಚಿತ್ರಕಲಾಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನವಾಗಿ ಸೈಕಲ್ ವಿತರಿಸಲಾಯಿತು.

ಇಂದು ಮೈಸೂರು ವಿಶ್ವವಿದ್ಯಾನಿಲಯ ಆವರಣದಲ್ಲಿ  “ನಮ್ಮ ಮೈಸೂರು ದಸರಾ” “ಸ್ವಚ್ಛ ಮೈಸೂರು ದಸರಾ” ಎಂಬ ವಿಷಯ ಆಧಾರಿತ ಚಿತ್ರಗಳನ್ನು ಬಿಡಿಸಲು ಮಕ್ಕಳಿಗೆ ತಿಳಿಸಲಾಗಿತ್ತು. ಅದರಂತೆ. ಸುಮಾರು 70 ಮಂದಿ ವಿದ್ಯಾರ್ಥಿಗಳು ಅವರವರ ಪೋಷಕರ ಜೊತೆ ಆಗಮಿಸಿ ಉತ್ಸಾಹ ಮತ್ತು ಸಂತೋಷದಿಂದ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿ. ವಿವಿಧ ರೀತಿಯ ಚಿತ್ರಕಲೆಗಳನ್ನು ಬಿಡಿಸಿದರು.

ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಕು. ಹೆಚ್.ಪಿ.ಪಾವನಿ, 9ನೇ ತರಗತಿ. ಕ್ಯಾಪಿಟಲ್ ಪಬ್ಲಿಕ್ ಸ್ಕೂಲ್ ಹಾಗೂ ದ್ವಿತೀಯ ಬಹುಮಾನ ಡಿ.ರೋಮಿತ್ ಆರ್ಯ, ಪ್ರಥಮ ಪಿಯುಸಿ. ವಿಜಯ ವಿಟ್ಠಲ ಕಾಲೇಜು ಮತ್ತು ತೃತೀಯ ಬಹುಮಾನ ಕು. ಎಸ್ ಶಿತಿ. ಎಸ್.ಜೆ.ಸಿ ಶಾಲೆ ಇವರು ಪಡೆದುಕೊಂಡರು.

ಕಲಾನಿಕೇತನ ಸ್ಕೂಲ್ ಆಫ್ ಹಾರ್ಟ್ ಶಾಲೆಯ ಪ್ರಾಂಶುಪಾಲ ಮಹದೇವಶೆಟ್ಟಿ ಹಾಗೂ ದೃಷ್ಯ ಕಲಾವಿದರ ಸಂಘದ ಅಧ್ಯಕ್ಷ ಬಾಲಸ್ವಾಮಿ ಮತ್ತು ಕಾರ್ಯದರ್ಶಿ  ಎಸ್.ಜೆ ಗಣೇಶ್ ತೀರ್ಪುಗಾರರಾಗಿ ಮತ್ತು ಚಿತ್ರಕಲಾ ಸ್ಪರ್ಧೆಯ ಮೇಲ್ವಿಚಾರಕರಾಗಿ ಕಾರ್ಯನಿರ್ವಹಿಸಿದರು.

ಬಹುಮಾನ ವಿತರಿಸಿದ ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಎಂ.ಕೆ.ಸವಿತಾ

ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಿ ಮಾತನಾಡಿದ ಚಿತ್ರಸಂತೆ ಕಾರ್ಯಕ್ರಮದ ಅಧ್ಯಕ್ಷರು ಹಾಗೂ ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಎಂ.ಕೆ.ಸವಿತಾ ಅವರು, ನಮ್ಮ ಮೈಸೂರು ಸ್ವಚ್ಛವಾಗಿರಲು ಎಲ್ಲಾ ಮನೆ ಮನೆಗಳಲ್ಲೂ ಸಹ ತ್ಯಾಜ್ಯ ವಸ್ತುಗಳನ್ನು ಬೇರ್ಪಡಿಸಿ ನೀಡುವುದಕ್ಕೆ ಮಕ್ಕಳು ಸಹ ಅರಿತುಕೊಂಡು ಪೋಷಕರಿಗೆ ನೆರವಾಗಲು ಮತ್ತು ಸುತ್ತಮುತ್ತಲ ಪರಿಸರ ಸ್ವಚ್ಛವಾಗಿರುವಂತೆ ನೋಡಿಕೊಳ್ಳಲು ತಿಳಿಸಿ ಸೇಫ್ ವೀಲ್ ಸಂಸ್ಥೆಯವರು ಬಹುಮಾನ ರೂಪದಲ್ಲಿ ಮಕ್ಕಳಿಗೆ ಬೈಸಿಕಲ್ ಕೊಟ್ಟಿದ್ದಾರೆ. ಇಂದಿನ ಯುವ ಪೀಳಿಗೆ ಮೊಬೈಲ್ ಫೋನ್ ಹೆಚ್ಚಾಗಿ ಬಳಸುವ ಮೂಲಕ ಹಲವಾರು ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಮೊಬೈಲ್ ಬಿಟ್ಟು ದಿನನಿತ್ಯ ಬೈಸಿಕಲ್ ಪ್ರಯಾಣ ಮಾಡುವ ಮೂಲಕ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಜೊತೆಗೆ ವಾಯುಮಾಲಿನ್ಯ ತಡೆಗಟ್ಟಿ ಉತ್ತಮ ಪರಿಸರವನ್ನು ಸೃಷ್ಟಿಸಿಕೊಳ್ಳುವ ಮುಖ್ಯ ಉದ್ದೇಶವಾಗಿರುತ್ತದೆ ಎಂದು ತಿಳಿಸಿದರು.

Key words: Mysuru Dasara, Art Competition, Bicycles, distributed, prizes, winning, children.

Source link

LEAVE A REPLY

Please enter your comment!
Please enter your name here

Share post:

Popular

More like this
Related

Producers Council : మళ్లీ రానున్న ‘నంది’ జాతర…. సీఎంకు థాంక్స్ చెప్పిన నిర్మాతల మండలి

తెలుగు చలనచిత్ర పరిశ్రమకు, తెలుగు ప్రజల సంస్కృతికి ఎంతో భావోద్వేగమైన అనుబంధం...

ശ്രീലേഖക്ക് ആരോഗ്യ പ്രശ്നങ്ങള്‍, ജനപ്രതിനിധിയായി പ്രവര്‍ത്തിക്കാന്‍ കഴിയില്ലെന്ന ഉത്കണ്ഠ അവര്‍ക്കുണ്ട്: ബാക്കിയെല്ലാം മാധ്യമസൃഷ്ടി: എസ്. സുരേഷ്

തിരുവനന്തപുരം: ആര്‍. ശ്രീലേഖയ്ക്ക് ആരോഗ്യപ്രശ്‌നങ്ങളാണെന്നും അവര്‍ രാജിവെച്ചുവെന്ന വാര്‍ത്ത മാധ്യമ സൃഷ്ടിയാണെന്നും...

“இடைத்தேர்தலில் ஆளுங்கட்சி வெற்றி பெறுவது தான் வழக்கம்..!” – சபாநாயகர் ஜேசிடி பிரபாகர்

திண்டுக்கல்லில் தனியார் நிகழ்ச்சியில் கலந்து கொள்ள வந்த தமிழ்நாடு சபாநாயகர் ஜே.சி.டி.பிரபாகர்...

CJP Protest: కాక్రో‌చ్‌లపై ముంబై పోలీసుల యాక్షన్.. నిర్వాహకులతో పాటు 400-500 మందిపై కేసు

CJP Protest: ముంబైలో కాక్రోచ్ జనతా పార్టీ(CJP) నిర్వహించిన నిరసన కార్యక్రమంపై...