1
October, 2026

A News 365Times Venture

1
Thursday
October, 2026

A News 365Times Venture

ಬರ ಪರಿಹಾರ ನೀಡಿಲ್ಲ, ಸರ್ವಪಕ್ಷ ನಿಯೋಗ ಬದಲು ಜನತಾ ನ್ಯಾಯಾಲಯಕ್ಕೆ ಹೋಗುತ್ತೇವೆ: ಆರ್‌.ಅಶೋಕ್

Date:

ಬೆಂಗಳೂರು, ಸೆಪ್ಟೆಂಬರ್‌ 30,2026(www.justkannada.in): ಬರಗಾಲಕ್ಕೆ ಸಂಬಂಧಿಸಿದಂತೆ ರೈತರಿಗಾಗಿ ನಾವು ಇಟ್ಟ ಬೇಡಿಕೆಗಳನ್ನು ಕಾಂಗ್ರೆಸ್‌ ಸರ್ಕಾರ ಈಡೇರಿಸಿಲ್ಲ. ಅದರ ಬದಲು ಕೇವಲ 2,500 ರೂ. ನೀಡಿ ಕೈ ತೊಳೆದುಕೊಳ್ಳಲಾಗಿದೆ. ಆದ್ದರಿಂದ ಕೇಂದ್ರಕ್ಕೆ ನಿಯೋಗ ಹೋಗುವ ಬದಲು ನಾವು ಜನರ ಬಳಿಗೆ, ಜನತಾ ನ್ಯಾಯಾಲಯಕ್ಕೆ ಹೋಗುತ್ತೇವೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ-ಡಿ.ಕೆ.ಶಿವಕುಮಾರ್‌ ಅವರ ಜೋಡಿಯ ಕಾಂಗ್ರೆಸ್‌ ಸರ್ಕಾರ ರಾಜ್ಯವನ್ನು ಮೂರು ಸಂಕಷ್ಟಗಳಿದೆ ದೂಡಿದೆ.  ಬರಗಾಲದಿಂದಾಗಿ ರೈತರು ಸಾಯುವ ಪರಿಸ್ಥಿತಿಗೆ ಹೋಗಿದ್ದಾರೆ. ಎಕರೆಗೆ ಕನಿಷ್ಟ 25,000 ರೂ. ಪರಿಹಾರ ನೀಡಬೇಕೆಂದು ಆಗ್ರಹಿಸಲಾಗಿತ್ತು. ವಿಬಿ ಜಿ ರಾಮ್‌ಜಿ ಮೂಲಕ ವಲಸೆ ಹೋಗುವವರನ್ನು ತಡೆಯಿರಿ ಎಂದು ಆಗ್ರಹಿಸಲಾಗಿತ್ತು. ಆದರೆ ಈ ಯಾವುದೇ ಆಗ್ರಹಗಳನ್ನು ಈಡೇರಿಸಿಲ್ಲ. ಬದಲಾಗಿ 50 ಲಕ್ಷ ಕುಟುಂಬಕ್ಕೆ ತಲಾ 2,500 ರೂ. ನೀಡುವುದಾಗಿ ಸರ್ಕಾರ ಪ್ರಕಟಿಸಿ ರೈತರನ್ನು ಅಪಮಾನಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬರಗಾಲದಲ್ಲಿ ರಾಜಕೀಯ ಬೇಡ

ರೈತರಿಗೆ ಭಿಕ್ಷೆ ನೀಡಿದಂತೆ ನೀಡುತ್ತಾರೆ ಆದರೆ ಗ್ಯಾರಂಟಿ ಸಮಿತಿಗಳಿಗೆ ಸಾವಿರಾರು ಕೋಟಿ ರೂ. ಖರ್ಚು ಮಾಡಲಾಗುತ್ತಿದೆ. ಭಾರತ್‌ ಜೋಡೋ ಸಮಿತಿಗಳಿಗೆ 1,110 ಕೋಟಿ ರೂ. ನೀಡಲಾಗುತ್ತಿದೆ. ಈ ಸಮಿತಿಗಳು ಕಾಂಗ್ರೆಸ್‌ ಕಾರ್ಯಕರ್ತರಿಗೆ ಸೀಮಿತವಾಗಿರಲಿದೆ. ಕಾಂಗ್ರೆಸ್‌ ಪಕ್ಷದವರಿಗೆ ಸಾವಿರಾರು ಕೋಟಿ ರೂ. ಖರ್ಚು ಮಾಡಿ ಗಂಜಿ ಕೇಂದ್ರ ಆರಂಭಿಸುತ್ತಾರೆ. ಆದರೆ, ರೈತರಿಗೆ ಬಿಡಿಗಾಸು ನೀಡಲಾಗುತ್ತಿದೆ. ಈಗ ಸಿಎಂ ಡಿ.ಕೆ.ಶಿವಕುಮಾರ್‌ ನಮಗೆ ಪತ್ರ ಬರೆದು ಕೇಂದ್ರಕ್ಕೆ ನಿಯೋಗ ಹೋಗೋಣ ಎಂದು ಮನವಿ ಮಾಡಿದ್ದಾರೆ.  ನಾವು ಕೇಂದ್ರಕ್ಕೆ ಹೋಗಲು ಸಿದ್ಧವಿದ್ದೇವೆ. ಆದರೆ ಸರ್ಕಾರದಿಂದ ನಮ್ಮ ಬೇಡಿಕೆಗಳನ್ನು ಈಡೇರಿಸಿಯೇ ಇಲ್ಲ. ಕುಡಿಯುವ ನೀರಿಗೂ ಹಣ ಬಿಡುಗಡೆ ಮಾಡಿಲ್ಲ. ಸರ್ವಪಕ್ಷ ನಿಯೋಗ ಹೋಗಬೇಕೆಂದರೆ ಬರಗಾಲದ ಬಗ್ಗೆ ನಮ್ಮ ಜೊತೆ ಚರ್ಚಿಸಬೇಕಿತ್ತು. ಅದನ್ನು ಬಿಟ್ಟು ಏಕಪಕ್ಷೀಯವಾಗಿ ತೀರ್ಮಾನ ಕೈಗೊಂಡು ರಾಜಕೀಯ ಮಾಡಲಾಗಿದೆ ಎಂದು ದೂರಿದರು.

ಹಣಕಾಸಿನ ಪರಿಸ್ಥಿತಿ ಏನು?

ಬರಗಾಲ ಸಂದರ್ಭದಲ್ಲಿ ಕುಡಿಯುವ ನೀರಿಗಾಗಿ ಪ್ರತಿ ಕ್ಷೇತ್ರಕ್ಕೆ ಒಂದು ಕೋಟಿ ರೂ. ಘೋಷಿಸಲಾಗಿದೆ. ಇನ್ನೂ ಬಿಡುಗಡೆ ಮಾಡಿಲ್ಲ. ಕ್ರಿಯಾ ಯೋಜನೆ ಸಲ್ಲಿಸುವಂತೆ ಸೂಚನೆ ನೀಡಲಾಗಿದೆ. ಬರ ಬಂದು ಇಷ್ಟು ತಿಂಗಳಾದರೂ ಇನ್ನೂ ಅಂದಾಜು ಮಾಡುವುದರಲ್ಲೇ ಇದ್ದಾರೆ. ಸರ್ಕಾರ ಪಾಪರ್‌ ಆಗಿದೆ ಎಂದು ನಾನು ಹೇಳುತ್ತಿದ್ದೇನೆ. ಹಾಗಾದರೆ ಹಣಕಾಸಿನ ಪರಿಸ್ಥಿತಿ ಏನಿದೆ ಎಂಬುದನ್ನು ತಿಳಿಸಲಿ. ಯಾವುದೇ ಮುಖ್ಯಮಂತ್ರಿ ಮಾಡದಷ್ಟು ಸಾಲವನ್ನು ಇವರು ಮಾಡಿ ರಾಹುಲ್‌ ಗಾಂಧಿಗೆ ಕಳುಹಿಸಿದ್ದಾರೆ. ಈ ಹಣಕಾಸು ವರ್ಷದಲ್ಲಿ ಒಂದೂವರೆ ಲಕ್ಷ ಕೋಟಿ ರೂ. ಸಾಲ ಮಾಡಬೇಕಿದೆ. ಸಾಲದ ಮಿತಿ 2.94% ದಾಟಿದೆ ಆದರೂ ಸರ್ಕಸ್ ಮಾಡಿ ಮಿತಿಯಲ್ಲಿ ಇಟ್ಟಿದ್ದಾರೆ.  ಆದರೆ ವಾಸ್ತವದಲ್ಲಿ ಅದನ್ನು ಮೀರಿ ಹೋಗಿದೆ ಎಂದರು.

ದಾಖಲೆ ಸಾಲ

ಮಾಜಿ ಸಿಎಂ ಸಿದ್ದರಾಮಯ್ಯ ಒಬ್ಬರೇ 4,36,803 ರೂ. ಸಾಲ ಮಾಡಿದ್ದಾರೆ. ಜೆ.ಎಚ್‌.ಪಟೇಲ್‌ 5,664 ರೂ., ಬಿ.ಎಸ್‌.ಯಡಿಯೂರಪ್ಪ ಇಡೀ ಅವಧಿಯಲ್ಲಿ 1,63,713 ರೂ., ಎಚ್‌.ಡಿ.ಕುಮಾರಸ್ವಾಮಿ 1,01,419 ರೂ. ಸಾಲ ಮಾಡಿದ್ದರು. ಬಸವರಾಜ ಬೊಮ್ಮಾಯಿ 67,000 ರೂ., ಡಿ.ವಿ.ಸದಾನಂದಗೌಡರು 24,525 ರೂ., ಎಸ್‌.ಎಂ.ಕೃಷ್ಣ 20,576 ರೂ., ಧರ್ಮಸಿಂಗ್‌ 16,974 ರೂ., ಸಾಲ ಮಾಡಿದ್ದರು. ಎಲ್ಲ ಮುಖ್ಯಮಂತ್ರಿಗಳಿಗೆ ಹೋಲಿಸಿದರೆ ಸಿದ್ದರಾಮಯ್ಯ ಒಬ್ಬರೇ 52.33% ಸಾಲ ಮಾಡಿದಾರೆ, ಉಳಿದೆಲ್ಲ ಮುಖ್ಯಮಂತ್ರಿಗಳು 47% ಸಾಲ ಮಾಡಿದ್ದರು. ಕಳೆದ ಬಜೆಟ್‌ನಲ್ಲಿ 8,34,677 ಲಕ್ಷ ಕೋಟಿ ರೂ. ಸಾಲವಿದ್ದು, ಅದರಲ್ಲಿ ಸಿದ್ದರಾಮಯ್ಯನವರ ಪಾಲು ದೊಡ್ಡದಿದೆ. ಕಾಂಗ್ರೆಸ್‌ ಪಕ್ಷದಿಂದ 5,66,970 ಲಕ್ಷ ಕೋಟಿ ರೂ. ಸಾಲ ಮಾಡಿದೆ. ಅಂದ್ರೆ ಇದು 68% ಆಗುತ್ತದೆ. ಬಿಜೆಪಿ ಅವಧಿಗಳಲ್ಲಿ 2,62,000 ಲಕ್ಷ ಕೋಟಿ ರೂ. ಸಾಲ ಮಾಡಿದೆ. ಜೆಡಿಎಸ್‌ ಅವಧಿಯಲ್ಲಿ 5,664 ಕೋಟಿ ರೂ. ಸಾಲ ಮಾಡಲಾಗಿದೆ ಎಂದು ವಿವರಿಸಿದರು.

ಕೆಆರ್‌ಐಡಿಎಲ್‌ ಅಧಿಕಾರಿ ನಾಪತ್ತೆ

ಕೆಆರ್‌ಐಡಿಎಲ್‌ ಅಧಿಕಾರಿ ಫರ್ವೇಜ್‌ ಪತ್ರ ಬರೆದಿಟ್ಟು ಕಾಣೆಯಾಗಿದ್ದಾರೆ. “ಅನುದಾನ ಬಿಡುಗಡೆ ಬಗ್ಗೆ ಪತ್ರ ಬರೆದರೂ ಬಿಡುಗಡೆಯಾಗಿಲ್ಲ. ಪ್ರತಿ ನಿತ್ಯ ನನಗೆ ಹಿಂಸೆ ನೀಡುವುದು ಹಾಗೂ ಕಚೇರಿಯಲ್ಲಿ ಕೂಗಾಡುವುದರಿಂದ ನನಗೆ ಬೇಸರವಾಗಿದೆ. ನನ್ನ ಮಾನಸಿಕ ಆರೋಗ್ಯ ಹಾಳಾಗಿದೆ. ಆದ್ದರಿಂದ ನನ್ನ ಜೀವನವನ್ನು ಕೊನೆ ಮಾಡುತ್ತಿದ್ದೇನೆ” ಎಂದು ಬರೆದಿದ್ದಾರೆ. ಇದರಿಂದ ಆರ್ಥಿಕ ಇಲಾಖೆ ಯೋಗ್ಯತೆ ಗೊತ್ತಾಗಿದೆ. ಇದರ ಜೊತೆಗೆ ಕಾಂಟ್ರಾಕ್ಟ್‌ ಅಸೋಸಿಯೇಶನ್‌ನವರು ಪತ್ರ ಬರೆದಿದ್ದು, 38,000 ಕೋಟಿ ರೂ. ಬಿಡುಗಡೆ ಮಾಡಲು ಕ್ರಮ ವಹಿಸಬೇಕೆಂದು ಆಗ್ರಹಿಸಲಾಗಿದೆ. ರೈತರಿಗೆ ರಾಗಿ ಖರೀದಿ ಬಾಕಿ 260 ಕೋಟಿ ರೂ. ಇದೆ. ಸರ್ಕಾರ ದಿವಾಳಿಯಾಗಿದೆ ಎಂಬುದಕ್ಕೆ ಇದೇ ದಾಖಲೆ ಎಂದರು.

ಇಂತಹ ಪರಿಸ್ಥಿತಿಯಲ್ಲಿ ಯಾವ ಮುಖ ಇಟ್ಟುಕೊಂಡು ಕಾಂಗ್ರೆಸ್‌ ನಾಯಕರು ಕೇಂದ್ರ ಸರ್ಕಾರದ ಬಳಿ ಹೋಗುತ್ತಾರೆ? ಕೇಂದ್ರ ಸರ್ಕಾರಕ್ಕೆ ಬರಗಾಲಕ್ಕೆ ಕಾಲಕಾಲಕ್ಕೆ ಪರಿಹಾರ ನೀಡುತ್ತಾ ಬಂದಿದೆ. ಆದರೆ ರಾಜ್ಯ ಸರ್ಕಾರದಿಂದ ಪರಿಹಾರ ನೀಡಿಲ್ಲ. ಗ್ಯಾರಂಟಿಗಳನ್ನು ನೀಡಿದ ನಂತರ ಇದರಿಂದ ಅಭಿವೃದ್ಧಿಯಾಗುತ್ತಿಲ್ಲ ಎಂದು ಕಾಂಗ್ರೆಸ್ ಸಚಿವ ಬಾಲಕೃಷ್ಣ ಹೇಳಿದ್ದಾರೆ. ಸಿಎಂ ಡಿ.ಕೆ.ಶಿವಕುಮಾರ್‌ ಆರ್ಥಿಕ ಸ್ಥಿತಿಯನ್ನು ಪಾತಾಳಕ್ಕೆ ತಳ್ಳಿದ್ದಾರೆ. ನಾವು ಮತ್ತೆ ರೈತರ ಬಳಿಗೆ ಹೋಗಿ ಅವರ ಕಷ್ಟಗಳನ್ನು ಆಲಿಸುತ್ತೇವೆ ಎಂದರು.

Drought relief, all-party delegation, ‘people’s court, R. Ashok

Source link

LEAVE A REPLY

Please enter your comment!
Please enter your name here

Share post:

Popular

More like this
Related

തലസ്ഥാനത്ത് യുവജന വിദ്യാര്‍ത്ഥി സംഘടനകളുടെ സംഘര്‍ഷം: ഹോസ്റ്റലില്‍ കയറി ലാത്തിച്ചാര്‍ജ് നടത്തി പൊലീസ്

തിരുവനന്തപുരം: തിരുവനന്തപുരത്ത് എസ്.എഫ്.ഐ- യൂത്ത് കോണ്‍ഗ്രസ് പ്രവര്‍ത്തകര്‍ തമ്മില്‍ ഏറ്റുമുട്ടല്‍. തെരഞ്ഞെടുപ്പ്...

தேர்தல் ஆணையம்: “இதுவே தவறு நடந்திருக்கிறது என்பதற்கான சான்று" – திருமாவளவன்

டெல்லியில் இன்று (30-ம் தேதி) 'இந்தியா கூட்டணி' தலைவர்களின் கூட்டம் நடைபெற்றது....

Jammu Kashmir: CISF క్యాంపులో కలకలం..హెడ్ కానిస్టేబుల్ కాల్పుల్లో నలుగురు జవాన్లు మృతి

Jammu Kashmir: జమ్మూ కాశ్మీర్ కథువా జిల్లాలోని బసోలిలోని CISF క్యాంపులో...

ಶಿಕಾರಿಪುರದಿಂದಲೇ ರಾಜಕೀಯ ‘ಶಿಕಾರಿ’ ಆರಂಭ- ಸಚಿವ ಮಧು ಬಂಗಾರಪ್ಪ

ಶಿವಮೊಗ್ಗ  ಸೆಪ್ಟೆಂಬರ್, 30,2026 (www.justkannada.in): ಶಿಕಾರಿಪುರದಿಂದ ರಾಜಕೀಯ ‘ಶಿಕಾರಿ’ ಇಂದಿನಿಂದಲೇ...