26
September, 2026

A News 365Times Venture

26
Saturday
September, 2026

A News 365Times Venture

ದಸರಾ ಮಹೋತ್ಸವ ರಥ ಮುಂದೆಯೂ ಸಾಂಗವಾಗಿ ಸಾಗಲಿ- ಲೇಖಕಿ ವೈದೇಹಿ

Date:

ಉಡುಪಿ,ಸೆಪ್ಟಂಬರ್‌,25,2026 (www.justkannada.in) ವಿಜಯನಗರ ಸಾಮ್ರಾಜ್ಯ ಕಾಲದಿಂದ ದಸರಾ ಮಹೋತ್ಸವದ ರಥ ಸಾಗುತ್ತಿದೆ. ಅದು ಕನ್ನಡದ ರಥವಾಗಿದ್ದು, ಮುಂದೆಯೂ ಸಾಂಗವಾಗಿ ಸಾಗಲಿ ಎಂದು ಹಿರಿಯ ಲೇಖಕಿ ವೈದೇಹಿ ಅಭಿಪ್ರಾಯಪಟ್ಟರು.

ದಸರಾ ಮಹೋತ್ಸವ ಅಂಗವಾಗಿ ಮೈಸೂರಿನಲ್ಲಿ ನಡೆಯುವ ಕವಿಗೋಷ್ಠಿ ಉದ್ಘಾಟನೆಗೆ ದಸರಾ ಕವಿಗೋಷ್ಠಿ ಉಪಸಮಿತಿಯು ಲೇಖಕಿ ವೈದೇಹಿ ಅವರಿಗೆ ಆಹ್ವಾನಿಸಿತು. ನಂತರ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು,   ಐದು ಕವಿಗೋಷ್ಠಿಗಳಿಗೆ ಜನರು ಹೆಚ್ಚು ನೆರೆಯುತ್ತಾರೆ. ಕೇಳುವವರೂ ಹೆಚ್ಚಿದ್ದಾರೆ. ಶ್ರವಣ ಮುಖ್ಯ. ಇದರಿಂದ ವಿವಿಧ ಕವಿಗಳ ಕವನಗಳನ್ನು ಆಲಿಸಲು ಸಹೃದಯರು ಹೆಚ್ಚುವುದು ಸಹಜ. ನನಗಂತೂ ಹೊಸ ತಲೆಮಾರಿನ ಕವಿಗಳು ಕಾವ್ಯಕ್ಕೆ ಹೇಗೆ ಸ್ಪಂದಿಸುತ್ತಾರೆ ಎನ್ನುವ ಕುತೂಹಲವಿದೆ ಎಂದು ಹೇಳಿದರು.

ದಸರಾ ಮಹೋತ್ಸವವು ಶಕ್ತಿದೇವತೆಯಾದ ಚಾಮುಂಡೇಶ್ವರಿ ದೇವಿಯ ಕೃಪೆಯಿಂದ ಚೆನ್ನಾಗಿ ನಡೆಯಲಿ. ಯಾವ ಲೋಪದೋಷಗಳಾಗದಿರಲಿ. ಮಳೆಯಾಗಿ, ಚೆನ್ನಾಗಿ ಬೆಳೆ ಬಂದು ನಮ್ಮ ರೈತರ ಜೊತೆಗೆ ನಾಡಿನ ಜನತೆ ಖುಷಿಯಿಂದ ಇರುವಂತಾಗಲಿ ಎಂದು ಹಾರೈಸಿದರು.

೨೦೦೭ರಲ್ಲಿ ಮೈಸೂರಿನ ಜಗನ್ಮೋಹನ ಅರಮನೆಯಲ್ಲಿ ನಡೆದ ದಸರಾ ಕವಿಗೋಷ್ಠಿ ಅಧ್ಯಕ್ಷತೆ ವಹಿಸಿದ್ದೆ. ಇದಕ್ಕೂ ಮೊದಲೊಮ್ಮೆ ದಸರಾ ಕವಿಗೋಷ್ಠಿಯಲ್ಲಿ ಕವಿತೆ ವಾಚಿಸಿದ್ದೆ ಎಂದು ಸ್ಮರಿಸಿದರು.

ಕವಿಗೋಷ್ಠಿ ಉಪಸಮಿತಿಯ ಉಪವಿಶೇಷಾಧಿಕಾರಿ ಡಾ.ಎಂ.ದಾಸೇಗೌಡ, ಕಾರ್ಯಾಧ್ಯಕ್ಷರಾದ ಪ್ರೊ.ನಂಜಯ್ಯ ಹೊಂಗನೂರು, ಕಾರ್ಯದರ್ಶಿ ಆನಂದ್‌ ಎಂ.ಬಿ., ಕವಿಗೋಷ್ಠಿ ಉಪಸಮಿತಿಯ ಸಮನ್ವಯಾಧಿಕಾರಿ ಡಾ.ಉಮೇಶ ಬೇವಿನಹಳ್ಳಿ, ಡಾ.ತ್ರಿವೇಣಿ, ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಸಂಶೋಧಕ ಸಿದ್ದನಾಗಪ್ಪ ಬಿ.ಬಿ. ಹಾಗೂ ಚಂದನಾ, ವೈದೇಹಿ ಪುತ್ರಿ ಚಿತ್ರಕಲಾವಿದೆ ಪಲ್ಲವಿ ಅನಿಲ್ ಹಾಗೂ ಅವರ ಅಳಿಯ ಟಿ.ಅನಿಲಕುಮಾರ್ ಉಪಸ್ಥಿತರಿದ್ದರು.

 

Source link

LEAVE A REPLY

Please enter your comment!
Please enter your name here

Share post:

Popular

More like this
Related

ഇന്ത്യയുമായുള്ള സംഘര്‍ഷത്തില്‍ സമയോചിതമായ ഇടപെടലിന് ട്രംപിനോട് നന്ദി പറഞ്ഞ് പാക് പ്രധാനമന്ത്രി

ന്യൂയോര്‍ക്ക്: 2025ലെ ഇന്ത്യയുമായുള്ള സംഘര്‍ഷത്തില്‍ യു.എസ് പ്രസിഡന്റ് ഡൊണാള്‍ഡ് ട്രംപിന്റെ ‘സമയോചിതമായ...

“தீவிரவாத நாடு, என்னிடம் கேள்வி கேட்கிறீர்களா?" – பாக்., ஊடகவியலாளர் கேள்விக்கு அமைச்சர் ஜெய்சங்கர்

நியூயார்க்கில் ஐநா பொதுச் சபையின் 81-வது கூட்டத்தொடர் நடைபெற்றது. இந்தக் கூட்டத்...

ADR Report: 4 ఏళ్లలో పార్టీలు మారిన 111 మంది ఎంపీలు, ఎమ్మెల్యేలు.. ఎక్కువ మంది చేరిన పార్టీ ఏదంటే..

ADR Report: 2022-2026 మధ్య కాలం నాలుగేళ్లలో పార్లమెంట్, అసెంబ్లీలకు గెలిచిన...

ദല്‍ഹിയില്‍ ഭജന്‍ ക്ലബ്ബിങ്ങില്‍ പങ്കെടുത്ത് മോദി; വിമര്‍ശനവുമായി ദീപ്‌കെ

ന്യൂദല്‍ഹി: ദല്‍ഹിയില്‍ ഭജന്‍ ക്ലബ്ബിങ്ങില്‍ പ്രധാനമന്ത്രി നരേന്ദ്ര മോദി പങ്കെടുക്കുന്നതിന്റെ വീഡിയോ...