22
September, 2026

A News 365Times Venture

22
Tuesday
September, 2026

A News 365Times Venture

ಮೈಸೂರಿನಲ್ಲಿ MIT ನ್ಯಾಚುರೋಪತಿ ಮತ್ತು ಯೋಗ ವಿಜ್ಞಾನ ಕಾಲೇಜು ಆರಂಭ

Date:

ಮೈಸೂರು,ಸೆಪ್ಟಂಬರ್‌,21,2026 (www.justkannada.in) : ಮಹಾರಾಜ ಎಜುಕೇಶನ್ ಟ್ರಸ್ಟ್‌ (ರಿ) ವತಿಯಿಂದ ಮೈಸೂರಿನಲ್ಲಿ ತನ್ನ 17ನೇ ಶಿಕ್ಷಣ ಸಂಸ್ಥೆಯಾಗಿ MIT ನ್ಯಾಚುರೋಪತಿ ಮತ್ತು ಯೋಗ ವಿಜ್ಞಾನ ಕಾಲೇಜು ಮತ್ತು ಆಸ್ಪತ್ರೆ ಆರಂಭಿಸಲಾಗಿದೆ.

ಸಂಸ್ಥೆಯಲ್ಲಿ ಬ್ಯಾಚುಲರ್ ಆಫ್ ನ್ಯಾಚುರೋಪತಿ ಅಂಡ್ ಯೋಗಿಕ್ ಸೈನ್ಸಸ್ (BNYS) ಐದು ವರ್ಷದ ವೃತ್ತಿಪರ ಪದವಿ ಕೋರ್ಸ್‌ ನೀಡಲಾಗುತ್ತಿದ್ದು, ನಾಲ್ಕು ವರ್ಷಗಳ ಶೈಕ್ಷಣಿಕ ಅಧ್ಯಯನದ ಬಳಿಕ ಒಂದು ವರ್ಷದ ಕಡ್ಡಾಯ ಕ್ಲಿನಿಕಲ್ ಇಂಟರ್ನ್‌ಶಿಪ್‌ ಇರಲಿದೆ.

ನ್ಯಾಚುರೋಪತಿ, ಯೋಗ, ಆಧುನಿಕ ವೈದ್ಯಕೀಯ ವಿಜ್ಞಾನ, ಪೌಷ್ಟಿಕಾಂಶ, ಯೋಗ ಚಿಕಿತ್ಸೆ, ಜಲಚಿಕಿತ್ಸೆ, ಮಣ್ಣಿನ ಚಿಕಿತ್ಸೆ, ಅಕ್ಯುಪಂಕ್ಚರ್, ಅಕ್ಯುಪ್ರೆಶರ್, ಗಿಡಮೂಲಿಕೆ ಆಧಾರಿತ ಚಿಕಿತ್ಸೆ, ಸಮಾಲೋಚನೆ ಹಾಗೂ ಸಂಶೋಧನಾ ವಿಧಾನ ಸೇರಿದಂತೆ ವಿವಿಧ ವಿಷಯಗಳನ್ನು ಪಠ್ಯಕ್ರಮದಲ್ಲಿ ಒಳಗೊಂಡಿದೆ. ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಮತ್ತು ಕ್ಲಿನಿಕಲ್ ತರಬೇತಿಗೂ ಒತ್ತು ನೀಡಲಾಗುತ್ತದೆ.

10+2/ದ್ವಿತೀಯ ಪಿಯುಸಿ ಶಿಕ್ಷಣದಲ್ಲಿ PCB ವಿಷಯಗಳಲ್ಲಿ ಕನಿಷ್ಠ 45% ಅಂಕ ಪಡೆದಿರುವ ವಿದ್ಯಾರ್ಥಿಗಳು ಪ್ರವೇಶಕ್ಕೆ ಅರ್ಹರಾಗಿದ್ದು, NEET ಕಡ್ಡಾಯವಲ್ಲ ಎಂದು ಸಂಸ್ಥೆ ತಿಳಿಸಿದೆ.

BNYS ಪದವೀಧರರಿಗೆ ಕ್ಲಿನಿಕಲ್ ಪ್ರಾಕ್ಟೀಸ್, AYUSH ಆಸ್ಪತ್ರೆಗಳು, ವೆಲ್‌ನೆಸ್ ಕೇಂದ್ರಗಳು, ಸಂಶೋಧನಾ ಸಂಸ್ಥೆಗಳು ಹಾಗೂ ಆರೋಗ್ಯ ಮತ್ತು ವೆಲ್‌ನೆಸ್ ಉದ್ಯಮಗಳಲ್ಲಿ ವಿವಿಧ ವೃತ್ತಿ ಅವಕಾಶಗಳಿವೆ.

ಮೈಸೂರಿನ MITM ಕ್ಯಾಂಪಸ್‌ ನಲ್ಲಿ ಸ್ಥಾಪನೆಯಾಗಿರುವ ಸಂಸ್ಥೆಗೆ ಗ್ರಾಮೀಣ ಮತ್ತು ನಗರ ಪ್ರದೇಶಗಳ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ 80 ಕಿ.ಮೀ. ವ್ಯಾಪ್ತಿಯ ಪ್ರದೇಶಗಳನ್ನು ಸಂಪರ್ಕಿಸುವ 100ಕ್ಕೂ ಹೆಚ್ಚು ಬಸ್‌ಗಳ ಸಾರಿಗೆ ವ್ಯವಸ್ಥೆ ಕಲ್ಪಿಸುವ ಉದ್ದೇಶ ಹೊಂದಲಾಗಿದೆ. ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ವಸತಿ ನಿಲಯ ಸೌಲಭ್ಯವೂ ಇರಲಿದೆ.

ವೃತ್ತಿಪರ ಶಿಕ್ಷಣದ ಜೊತೆಗೆ ಸಮಗ್ರ ಆರೋಗ್ಯ ಮತ್ತು ಆರೈಕೆ ಕ್ಷೇತ್ರದಲ್ಲಿ ಹೊಸ ಶೈಕ್ಷಣಿಕ ಅವಕಾಶಗಳನ್ನು ಸೃಷ್ಟಿಸುವುದು ಸಂಸ್ಥೆಯ ಉದ್ದೇಶವಾಗಿದೆ ಎಂದು MET (ರಿ) ಉಪಾಧ್ಯಕ್ಷ ಡಾ. ಜಿ. ಹೇಮಂತಕುಮಾರ್ ತಿಳಿಸಿದ್ದಾರೆ.

 

Source link

LEAVE A REPLY

Please enter your comment!
Please enter your name here

Share post:

Popular

More like this
Related

സ്വകാര്യ സര്‍വകലാശാലകള്‍ ലാഭം ലക്ഷ്യമിട്ട് പ്രവര്‍ത്തിക്കരുത്; അഞ്ച് വര്‍ഷത്തെ സാമ്പത്തിക കണക്കുകള്‍ തേടി സുപ്രീം കോടതി

ന്യൂദല്‍ഹി: സ്വകാര്യ സര്‍വകലാശാലകള്‍ ലാഭം ലക്ഷ്യമിട്ട് പ്രവര്‍ത്തിക്കുന്ന സ്ഥാപനമായി മാറാന്‍ അനുവദിക്കില്ലെന്ന്...

அரசியல் மேடைகளில் பெண் இழிவு வார்த்தைகள்… கடுமையான எதிர்வினைகளால் வைப்போம் முற்றுப்புள்ளி!

அரசியல் சச்சரவுகளில் எதிர்த்தரப்பினரை சீண்ட பெண்களை ஆபாசமாகப் பேசுவது ஒரு கலாசாரமாகவே...

Story Board: కరువు కోరల్లో తెలుగు రాష్ట్రాలు.. పడిపోతున్న భూగర్భజలాలు.. తాగునీటికీ తప్పని కటకట

Story Board: నైరుతి రుతుపవనాల తిరోగమనం ప్రారంభమైంది. ఈ ఏడాది నైరుతి...

ಕಬಿನಿ ನಾಲೆಗಳಿಗೆ  ನೀರು ಹರಿಸುವಂತೆ ರೈತರಿಂದ  ಬೃಹತ್ ಪ್ರತಿಭಟನೆ, ಆಕ್ರೋಶ

ಮೈಸೂರು,ಸೆಪ್ಟಂಬರ್‌, 21,2026 (www.justkannada.in): ಕಬಿನಿ  ಜಲಾಶಯದಿಂದ ನಾಲೆಗಳಿಗೆ  ನೀರು ಹರಿಸುವಂತೆ...