7
August, 2026

A News 365Times Venture

7
Friday
August, 2026

A News 365Times Venture

ಮೈಸೂರು: ಕಬಿನಿ ನೀರು ಕಲುಷಿತ; ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಲಿ: ‘ಸೇವ್ ಕಬಿನಿ’ ತಂಡ ಆಗ್ರಹ

Date:

ಮೈಸೂರು,ಆಗಸ್ಟ್,5,2026 (www.justkannada.in):  ಕಬಿನಿ ನದಿಗೆ ಎಚ್.ಡಿ.ಕೋಟೆ ಹಾಗೂ ಸರಗೂರು ಭಾಗಗಳಿಂದ ಮಾನವ ತ್ಯಾಜ್ಯ, ಒಳಚರಂಡಿ ನೀರು, ಕೋಳಿ ಫಾರಂ ಹಾಗೂ ಇತರೆ ಕಲುಷಿತ ನೀರು ಸೇರುತ್ತಿದ್ದು, ನದಿಯ ನೀರಿನ ಗುಣಮಟ್ಟ ಗಂಭೀರವಾಗಿ ಹದಗೆಟ್ಟಿದೆ ಎಂದು ‘ಸೇವ್ ಕಬಿನಿ’ ತಂಡ ಆರೋಪಿಸಿದೆ.

ಐದು ಸ್ಥಳಗಳಿಂದ ಸಂಗ್ರಹಿಸಿದ ನೀರಿನ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಿದ ಬಳಿಕ ಬಂದ ವರದಿಯಲ್ಲಿ ನೀರು ಕುಡಿಯಲು ಹಾಗೂ ಸ್ನಾನಕ್ಕೆ ಯೋಗ್ಯವಿಲ್ಲ ಎಂಬ ಆತಂಕಕಾರಿ ಅಂಶಗಳು ಬೆಳಕಿಗೆ ಬಂದಿವೆ ಎಂದು ತಂಡ ತಿಳಿಸಿದೆ. ಶುದ್ಧೀಕರಣವಿಲ್ಲದೆ ಈ ನೀರನ್ನು ಬಳಸಿದರೆ ಕಿಡ್ನಿ ಸಮಸ್ಯೆ, ಕಿಡ್ನಿ ಸ್ಟೋನ್ ಸೇರಿದಂತೆ ವಿವಿಧ ಗಂಭೀರ ಆರೋಗ್ಯ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ ಎಂದು ತಜ್ಞರ ವರದಿ ಉಲ್ಲೇಖಿಸಿದೆ.

ಎಚ್.ಡಿ.ಕೋಟೆ ಮತ್ತು ಸರಗೂರು ತಾಲೂಕುಗಳಲ್ಲಿ ಎಸ್‌ ಟಿಪಿ (STP) ಹಾಗೂ ಸಮರ್ಪಕ ಒಳಚರಂಡಿ ವ್ಯವಸ್ಥೆಯ ಕೊರತೆಯಿಂದ ಕಲುಷಿತ ನೀರು ನೇರವಾಗಿ ಕಬಿನಿಗೆ ಸೇರುತ್ತಿದೆ. ಕೆಲವು ರೆಸಾರ್ಟ್‌ಗಳೂ ತ್ಯಾಜ್ಯವನ್ನು ನದಿಗೆ ಬಿಡುತ್ತಿವೆ ಎಂದು ಆರೋಪಿಸಿರುವ ತಂಡ, ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷ್ಯವನ್ನು ಖಂಡಿಸಿದೆ.

ಕಬಿನಿ ನೀರನ್ನು ಸಮರ್ಪಕವಾಗಿ ಶುದ್ಧೀಕರಿಸಿ ಮಾತ್ರ ಕುಡಿಯುವ ನೀರಾಗಿ ಬಳಸಬೇಕು. ಸರ್ಕಾರ ತಕ್ಷಣ ಎಸ್‌ಟಿಪಿ ಘಟಕಗಳನ್ನು ಸ್ಥಾಪಿಸಿ ನದಿ ಮಾಲಿನ್ಯ ತಡೆಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿದೆ.

ಈ ಕುರಿತು ಕರ್ನಾಟಕ ಮುಖ್ಯಮಂತ್ರಿ, ತಮಿಳುನಾಡು ಮುಖ್ಯಮಂತ್ರಿ ಹಾಗೂ ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿಗಳಿಗೆ ಮನವಿ ಸಲ್ಲಿಸಿರುವ ‘ಸೇವ್ ಕಬಿನಿ’ ತಂಡ, ಕಬಿನಿ ಜಲಾಶಯವನ್ನು ರಕ್ಷಿಸಲು ತುರ್ತು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ. ಜೊತೆಗೆ ನೀರಿನ ಮಾದರಿಗಳನ್ನು ಪ್ರದರ್ಶಿಸಿ ಸಾರ್ವಜನಿಕರಿಗೆ ಕಲುಷಿತ ನೀರಿನ ಬಗ್ಗೆ ಎಚ್ಚರಿಕೆ ನೀಡಿತು.

Key words: Mysore,  Kabini water, polluted, ‘Save Kabini,  team

The post ಮೈಸೂರು: ಕಬಿನಿ ನೀರು ಕಲುಷಿತ; ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಲಿ: ‘ಸೇವ್ ಕಬಿನಿ’ ತಂಡ ಆಗ್ರಹ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ಕಾಮನ್‌ವೆಲ್ತ್ ಗೇಮ್ಸ್‌ ; ಪ್ಯಾರಾ ಅಥ್ಲೀಟ್ ಶಿಲ್ಪಾ ಅವರನ್ನು ಗೌರವಿಸಿದ  ಕೇಂದ್ರ ಸಚಿವ HDK

ನವದೆಹಲಿ,5 ,ಆಗಸ್ಟ್‌. 2026 (www.justkannada.in): 2026ರ ಕಾಮನ್‌ವೆಲ್ತ್ ಗೇಮ್ಸ್‌ ಕ್ರೀಡಾಕೂಟದ...

മുഖ്യമന്ത്രിയുടെ ഹെലികോപ്റ്റര്‍ യാത്രയെ വിമര്‍ശിച്ച് ഫേസ്ബുക്ക് പോസ്റ്റ്; കോഴിക്കോട് സ്വദേശിയെ പൊലീസ് അറസ്റ്റ് ചെയ്തു

കോഴിക്കോട്: മുഖ്യമന്ത്രി വി.ഡി. സതീശന്റെ ഹെലികോപ്റ്റര്‍ യാത്രയെ വിമര്‍ശിച്ച യുവാവിനെ പൊലീസ്...

புதிய அரசின் முதல் பட்ஜெட்… எதிர்பார்ப்பும் நிதர்சனமும்!

மிகுந்த எதிர்பார்ப்புக்கு மத்தியில் ‘மாற்றம்’ என்ற முழக்கத்தோடு ஆட்சிக்கு வந்த...