ಬೆಳಗಾವಿ,ಜೂನ್,26,2026 (www.justkannada.in): ಬಿಡದಿ ಟೌನ್ ಶಿಪ್ ಬಗ್ಗೆ ಗೊಂದಲ ಇರುವುದು ನಿಜ. ಈ ಬಗ್ಗೆ ವರಿಷ್ಠರು ಚರ್ಚಿಸಿ ಪರಿಹಾರ ನೀಡುತ್ತಾರೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ, ಬಿಡದಿ ಟೌನ್ ಶಿಪ್ ಈ ಬಗ್ಗೆ ಚರ್ಚೆ ಆಗಬೇಕು. ಸಿಎಂ, ಅಧ್ಯಕ್ಷರು ಇದ್ದಾರೆ. ವರಿಷ್ಠರು ಚರ್ಚೆ ಮಾಡಿ ನಿರ್ಧಾರ ಕೈಗೊಳ್ಳಬೇಕು. ಬಿಡದಿ ಟೌನ್ ಶಿಪ್ ಬಗ್ಗೆ ಪರ ವಿರೋಧ ಚರ್ಚೆಯಾಗುತ್ತಿದೆ. ಹಿಂದಿನ ಸರ್ಕಾರದಲ್ಲಿ ಯಾಕೆ ಮಾಡಿಲ್ಲವೆಂದು ನಮ್ಮ ಸಿಎಂ ವಾದ. ನೀವು ಯೋಜನೆ ರದ್ದು ಮಾಡಬೇಕೆಂದು ಇವರ ವಾದ. ಬಿಡದಿ ಟೌನ್ ಶಿಪ್ ವಿವಾದಕ್ಕೆ ವರಿಷ್ಠರು ಪರಿಹಾರ ನೀಡುತ್ತಾರೆ ಎಂದು ಸ್ಪಷ್ಟಪಡಿಸಿದರು. 
ತಮ್ಮ ಸಂಬಂಧಿ ಮನೆ ಮೇಲೆ ಇಡಿ ದಾಳಿಯಾದ ಕುರಿತು ಪ್ರತಿಕ್ರಿಯಿಸಿದ ಸಚಿವ ಸತೀಶ್ ಜಾರಕಿಹೊಳಿ, ಭ್ರಷ್ಟಾಚಾರ ಹಿನ್ನೆಲೆ, ಇಡಿ ರೇಡ್ ಆಗಿದ್ದು ಇದೇ ಫಸ್ಟ್ ಟೈಮ್. ನಮಗೂ ಗೊಂದಲ ಇದೆ. ನೋಡೋಣ ಯಾವ ರೀತಿ ತನಿಖೆ ಆಗುತ್ತೆ. ಹೈಕೋರ್ಟ್ ಲೋಕಾಯುಕ್ತದಲ್ಲಿ ದಾಖಲಾಗಿದ್ದ ಎಫ್ ಐಆರ್ ರದ್ದು ಮಾಡಿತ್ತು. ತನಿಖೆ ನೋಡಿಕೊಂಡು ಏನು ಆಗಿದೆ ಅಂತಾ ಹೇಳಬಹುದು ಎಂದು ತಿಳಿಸಿದರು.
Key words: Bidadi Township, Problem, solving, Minister, Satish Jarkiholi
The post ಬಿಡದಿ ಟೌನ್ ಶಿಪ್ ಬಗ್ಗೆ ವರಿಷ್ಠರು ಪರಿಹಾರ ನೀಡ್ತಾರೆ- ಸಚಿವ ಸತೀಶ್ ಜಾರಕಿಹೊಳಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.





