12
June, 2026

A News 365Times Venture

12
Friday
June, 2026

A News 365Times Venture

ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ASI

Date:

ಮಂಡ್ಯ,ಜೂನ್,11,2026 (www.justkannada.in): ಆರೋಪಿಯೊಬ್ಬರ ಬಳಿ 10 ಸಾವಿರ ರೂ. ಲಂಚ ಸ್ವೀಕರಿಸುವ ವೇಳೆ ರೆಡ್ ಹ್ಯಾಂಡ್ ಆಗಿ ಸಹಾಯಕ ಎಎಸ್ ಐ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಮಳವಳ್ಳಿಯಲ್ಲಿ ನಡೆದಿದೆ.

ಮಳವಳ್ಳಿ ಗ್ರಾಮಾಂತರ ಠಾಣೆ ಸಹಾಯಕ ಸಬ್‌ ಇನ್ ಸ್ಪೆಕ್ಟರ್ ಶಿವಕುಮಾರ್ ಲೋಕಾಯುಕ್ತ ಬಲೆಗೆ ಬಿದ್ದವರು.  ಆರೋಪಿಯೊಬ್ಬನನ್ನು ‘ಸ್ಟೇಷನ್ ಬೇಲ್’ ಮೇಲೆ ಬಿಡುಗಡೆ ಮಾಡಲು 10 ಸಾವಿರ ರೂ. ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತಕ್ಕೆ ಸಿಕ್ಕಿಬಿದ್ದಿದ್ದಾರೆ.

ಗಲಾಟೆ ಪ್ರಕರಣದಲ್ಲಿ ಮಳವಳ್ಳಿ ರಾಜೇಗೌಡ ಎಂಬುವವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಠಾಣೆಯಲ್ಲೇ ಜಾಮೀನು ನೀಡುವ ಮೂಲಕ ಪ್ರಕರಣ ಇತ್ಯರ್ಥಗೊಳಿಸುತ್ತೇವೆ ಎಂದು ಎಎಸ್‌ ಐ ಶಿವಕುಮಾರ್ ಕರೆ ಮಾಡಿ ರಾಜೇಗೌಡ ಅವರಿಗೆ ಆಮಿಷ ಒಡ್ಡಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.

ಈ ಮಧ್ಯೆ ರಾಜೇಗೌಡ ಕರೆಯನ್ನು ರೆಕಾರ್ಡ್ ಮಾಡಿಕೊಂಡಿದ್ದು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ನಿನ್ನೆ ರಾತ್ರಿ ಪೊಲೀಸ್ ಠಾಣೆಯಲ್ಲೇ ಲಂಚ ಪಡೆಯುವ ವೇಳೆ ಎಎಸ್‌ ಐ ಶಿವಕುಮಾರ್  ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.

Key words: ASI, caught, Lokayukta, trap, bribe, Mandya

The post ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ASI appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ഏഴ് മാസം പ്രായമുള്ള കുഞ്ഞിനെ ഇസ്രഈല്‍ സൈനികന്‍ കൊലപ്പെടുത്തിയതിനെ അപലപിച്ച് യൂറോപ്യന്‍ യൂണിയന്‍

ബ്രസല്‍സ്: വെസ്റ്റ്ബാങ്കില്‍ ഏഴ് മാസം പ്രായമുള്ള കുഞ്ഞിനെ ഇസ്രഈല്‍ സൈനികന്‍ വെടിവെച്ച്...

“தென்தமிழகத்தில் சாதிய வன்முறைகளும் ஆணவக்கொலைகளும்" – பா.ரஞ்சித்தின் அழுத்தமான கோரிக்கை!

``சாதியவாத சக்திகள் சாதிப் பெருமையைப் பரப்புவதால் ஏற்படும் விளைவுகளால் தமிழ்நாட்டின் பல்வேறு...

ಅಕ್ರಮ ಗಣಿಗಾರಿಕೆ ಪ್ರಕರಣ: ಉಪ ಲೋಕಾಯುಕ್ತರ ಹಸ್ತಕ್ಷೇಪದಿಂದ ಮೃತ ಚಾಲಕನ ಪತ್ನಿಗೆ ₹30 ಲಕ್ಷ ಪರಿಹಾರ

ಮಂಡ್ಯ,ಜೂನ್,11,2026 (www.justkannada.in): ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಅಕ್ರಮ ಗಣಿಗಾರಿಕೆ...