16
June, 2026

A News 365Times Venture

16
Tuesday
June, 2026

A News 365Times Venture

ಹಿರಿಯ ಪತ್ರಿಕಾ ಛಾಯಾಗ್ರಾಹಕ ಪ್ರಗತಿ ಗೋಪಾಲ ಕೃಷ್ಣರಿಗೆ ಕರ್ನಾಟಕ ಛಾಯಾ ರತ್ನ ಪ್ರಶಸ್ತಿ

Date:

ಮೈಸೂರು,ಜೂನ್,10,2026 (www.justkannada.in): ಕಳೆದ 45 ವರ್ಷಗಳಿಂದ ಪತ್ರಿಕಾ ಛಾಯಾಗ್ರಾಹಕರಾಗಿ ನಿರಂತರ ಸೇವೆ ಸಲ್ಲಿಸುತ್ತಿರುವ ಹಿರಿಯ  ಪತ್ರಿಕಾ ಛಾಯಾಗ್ರಾಹಕ ಪ್ರಗತಿ ಗೋಪಾಲ ಕೃಷ್ಣ ಅವರಿಗೆ ಪ್ರತಿಷ್ಠಿತ ಕರ್ನಾಟಕ ಛಾಯಾ ರತ್ನ ಪ್ರಶಸ್ತಿ ಲಭಿಸಿದೆ.

ಬೆಂಗಳೂರುದಲ್ಲಿ ಇದೇ ತಿಂಗಳ 12ರಂದು ನಡೆಯಲಿರುವ ವಿಶೇಷ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು. ಛಾಯಾಗ್ರಹಣ ಕ್ಷೇತ್ರದಲ್ಲಿ ಅವರು ಸಲ್ಲಿಸಿರುವ ದೀರ್ಘಕಾಲದ ಸೇವೆ, ವೃತ್ತಿಪರ ನಿಷ್ಠೆ ಹಾಗೂ ಸಮಾಜಮುಖಿ ಛಾಯಾಚಿತ್ರಗಳ ಮೂಲಕ ಮಾಡಿದ ಕೊಡುಗೆಯನ್ನು ಪರಿಗಣಿಸಿ ಈ ಗೌರವಕ್ಕೆ ಆಯ್ಕೆ ಮಾಡಲಾಗಿದೆ.

ಮೈಸೂರಿನಲ್ಲಿ ಕಳೆದ ನಾಲ್ಕೂವರೆ ದಶಕಗಳಿಂದ ಪತ್ರಿಕಾ ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸುತ್ತಿರುವ ಪ್ರಗತಿ ಗೋಪಾಲ ಕೃಷ್ಣ ಅವರು ಅನೇಕ ಪ್ರಮುಖ ಘಟನೆಗಳು, ಸಾಮಾಜಿಕ ಕಾರ್ಯಕ್ರಮಗಳು ಹಾಗೂ ಸಾರ್ವಜನಿಕ ಜೀವನದ ಅಪರೂಪದ ಕ್ಷಣಗಳನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದು ಪತ್ರಿಕೋದ್ಯಮ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ.

2026  ರಾಜರ್ಷಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್  ಪ್ರಶಸ್ತಿಗೂ  ಪ್ರಗತಿ ಗೋಪಾಲ ಕೃಷ್ಣ ಭಾಜನರಾಗಿದ್ದರು.

ಪ್ರಗತಿ ಗೋಪಾಲ ಕೃಷ್ಣ ಅವರಿಗೆ ಕರ್ನಾಟಕ ಛಾಯಾ ರತ್ನ ಪ್ರಶಸ್ತಿ ಲಭಿಸಿರುವ ಹಿನ್ನೆಲೆಯಲ್ಲಿ ಛಾಯಾಗ್ರಹಣ ಹಾಗೂ ಪತ್ರಿಕೋದ್ಯಮ ವಲಯದ ಗಣ್ಯರು, ಸ್ನೇಹಿತರು ಮತ್ತು ಅಭಿಮಾನಿಗಳು ಅಭಿನಂದನೆ ಸಲ್ಲಿಸಿದ್ದಾರೆ.

Key words: Senior photojournalist, Pragati Gopala Krishna, receives, Karnataka Chhaya Ratna Award

The post ಹಿರಿಯ ಪತ್ರಿಕಾ ಛಾಯಾಗ್ರಾಹಕ ಪ್ರಗತಿ ಗೋಪಾಲ ಕೃಷ್ಣರಿಗೆ ಕರ್ನಾಟಕ ಛಾಯಾ ರತ್ನ ಪ್ರಶಸ್ತಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ഇന്ത്യയില്‍ ടെലിഗ്രാമിന് താത്കാലിക നിയന്ത്രണം; നീറ്റ് പുനപരീക്ഷാ തട്ടിപ്പ് തടയാനെന്ന് എന്‍.ടി.എ

ന്യൂദല്‍ഹി: നീറ്റ് പുനപരീക്ഷയ്ക്ക് മുന്നോടിയായി ഇന്ത്യയില്‍ ടെലിഗ്രാം പ്ലാറ്റ്‌ഫോമിന് താത്കാലിക നിയന്ത്രണം...

கோயிலில் வைத்து மருத்துவம்; பூட்டி கிடக்கும் சுகாதார நிலையம் – அலட்சியத்தில் கூத்தாநல்லூர் நகராட்சி!

திருவாரூர் மாவட்டம், கூத்தாநல்லூர் சார்பதிவாளர் அலுவலகம் அருகே பொதுமக்களின் நீண்டநாள் கோரிக்கையின்...

Vaibhav Sooryavanshi: విరాట్ సలహాను పట్టించుకోని వైభవ్.. కెరీర్ ఆరంభంలో కోహ్లీ కూడా ఇంతే!

Vaibhav Sooryavanshi: రెండు వారాల క్రితం అహ్మదాబాద్‌లో ఒక ఆసక్తికరమైన దృశ్యం...

ಶಾಸಕ ಯಶವಂತರಾಯಗೌಡ ಪಾಟೀಲ್ ಗೆ ಸಚಿವ ಸ್ಥಾನಕ್ಕೆ ಆಗ್ರಹ: ಸಿಎಂ ಮನೆ ಮುಂದೆ ಪ್ರತಿಭಟನೆ

ಬೆಂಗಳೂರು,ಜೂನ್,16,2026 (www.justkannada.in): ಕಾಂಗ್ರೆಸ್ ನಲ್ಲಿ ಸಚಿವ ಸ್ಥಾನಕ್ಕಾಗಿ ಲಾಬಿ ತೀವ್ರಗೊಂಡಿದ್ದು...