13
May, 2026

A News 365Times Venture

13
Wednesday
May, 2026

A News 365Times Venture

ಬೀರೇಶ್ವರ ದೇವಾಲಯದ ಬಸವ ವಿಧಿವಶ: ಭಕ್ತರ ಸಮ್ಮುಖದಲ್ಲಿ ಅಂತ್ಯಸಂಸ್ಕಾರ

Date:

ಮೈಸೂರು,ಮೇ.12,2026 (www.justkannada.in):  ವಯೋಸಹಜ ಸಮಸ್ಯೆಯಿಂದ ಮೃತಪಟ್ಟ ಮೈಸೂರು ತಾಲೂಕಿನ ವರಕೋಡು ಬೀರೇಶ್ವರಸ್ವಾಮಿ ದೇವಾಲಯದ ಬಸವನ ಅಂತ್ಯಕ್ರಿಯೆ ಶಾಸ್ತ್ರೋಕ್ತವಾಗಿ ಸಾಂಪ್ರದಾಯಿಕ ಪೂಜೆಯೊಂದಿಗೆ ಬೀರೇಶ್ವರಸ್ವಾಮಿ ದೇವಾಲಯ ಬಳಿ ಅಪಾರ ಭಕ್ತರ ಸಮ್ಮುಖದಲ್ಲಿ ನೆರವೇರಿತು.

ವರಕೋಡು ಬೀರೇಶ್ವರ ದೇವಾಲಯದ ಆವರಣದಲ್ಲಿಯೇ ಸೋಮವಾರ ಸಂಜೆ ಕುಸಿದು ಬಿದ್ದು ಅಸುನೀಗಿದ ಬಸವನ ಮೃತದೇಹವನ್ನು ತೆರೆದ ವಾಹನದಲ್ಲಿ ವರಕೋಡು, ಬಡಗಲಹುಂಡಿ, ಕೆಂಪೇಗೌಡನಹುಂಡಿ, ಹೊಸಹುಂಡಿ ಹಾಗೂ ಮೂಡಲಹುಂಡಿ ಗ್ರಾಮದಲ್ಲಿ ಮೆರವಣಿಗೆ ಮೂಲಕ ಸಾಗಿತು.  ಗ್ರಾಮದ ನಿವಾಸಿಗಳು ಪೂಜೆ ಸಲ್ಲಿಸಿ ನೆಚ್ಚಿನ ಬಸವನಿಗೆ ವಿದಾಯ ಹೇಳಿದರು.

ಬಳಿಕ ಮತ್ತೆ ವರಕೋಡು ಗ್ರಾಮದ ಮೂಲಕ ಬೀರೇಶ್ವರಸ್ವಾಮಿ ದೇವಾಲಯಕ್ಕೆ ತಂದು ಸಾಂಪ್ರದಾಯಿಕ ಪೂಜೆ ಸಲ್ಲಿಸಲಾಯಿತು. ಅರ್ಚಕ ಗಣೇಶ್ ದೀಕ್ಷಿತ್, ಗುರುಮಠದ ಗುರುಸ್ವಾಮಿ ನೇತೃತ್ವದಲ್ಲಿ  ಬಸವನ ಅಂತ್ಯಕ್ರಿಯೆ ನೆರವೇರಿತು. ಅಂತ್ಯಕ್ರಿಯೆಯಲ್ಲಿ ಐದು ಗ್ರಾಮಗಳ ಗ್ರಾಮಸ್ಥರು ಸೇರಿದಂತೆ ವಿವಿಧೆಡೆ ಭಕ್ತರು ಆಗಮಿಸಿ ಪೂಜೆ ಸಲ್ಲಿಸಿ ಅಂತಿಮ ನಮನ ಸಲ್ಲಿಸಿದರು.

ಬೀರೇಶ್ವರ ದೇವಾಲಯದ ಕಳಸ ಪ್ರತಿಷ್ಠಾಪನಾ ಜಾತ್ರಾ ಮಹೋತ್ಸವ ಹಾಗೂ 48 ದಿನಗಳ ಮಂಡಲ ಪೂಜಾ ಕೈಂಕರ್ಯದಲ್ಲಿ ಬಸವ ಪಾಲ್ಗೊಂಡು ಎಲ್ಲರ ಗಮನ ಸೆಳೆದಿತ್ತು.

Key words: Beereshwar temple, Basava,  passes away, funaral

The post ಬೀರೇಶ್ವರ ದೇವಾಲಯದ ಬಸವ ವಿಧಿವಶ: ಭಕ್ತರ ಸಮ್ಮುಖದಲ್ಲಿ ಅಂತ್ಯಸಂಸ್ಕಾರ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

"அந்த கட்டட தொழிலதிபராலத்தான் இத்தனை குழப்பம்.!" – பொங்கும் அ.தி.மு.க கிளர்ச்சியாளர்கள்

அ.தி.மு.க-வுக்குள் உச்சக்கட்ட குழப்பம் வெடித்திருக்கிறது. அக்கட்சியின் பொதுச் செயலாளரான எடப்பாடி பழனிசாமியின்...

Piyush Goyal: అందరం కలిసి ముందుకెళ్లాల్సిన సమయం వచ్చింది.. పరిశ్రమలకు పీయూష్ గోయల్ హెచ్చరిక

పశ్చిమాసియా సంక్షోభం కారణంగా ఇప్పటికే దేశ ప్రజలు పొదుపు మంత్రం పాటించాలని...

മുഖ്യമന്ത്രി പ്രഖ്യാപനം: പുറത്തിറങ്ങാന്‍ കഴിയാത്ത അവസ്ഥയെന്ന് ടി.വി. ഇബ്രാഹിം; കോണ്‍ഗ്രസിനെതിരെ കടുത്ത അതൃപ്തി

തിരുവനന്തപുരം: കേരളത്തില്‍ നിയമസഭാ തെരഞ്ഞെടുപ്പില്‍ യു.ഡി.എഫ് മികച്ച വിജയം കൈവരിച്ചിട്ടും മുഖ്യമന്ത്രി...