ಬೆಂಗಳೂರು,ಮೇ,12,2026 (www.justkannada.in): ಪ್ರಧಾನಿ ನರೇಂದ್ರ ಮೋದಿ ಹೇಳಿದ್ದನ್ನ ಫಾಲೋ ಮಾಡುವುದು ಕಷ್ಟಸಾಧ್ಯ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.
ಪ್ರಧಾನಿ ಮೋದಿ ಸಂದೇಶ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ, ಪೆಟ್ರೋಲ್ ಡೀಸೆಲ್ ಕಡಿಮೆ ಮಾಡಲು ಯಾವತ್ತೂ ಸಾಧ್ಯವಿಲ್ಲ. ಚಿನ್ನದ ದರ ಏರಿಕೆ ಅಗುತ್ತೆ ಎಂದು ಕೆಲವರು ಸ್ಟಾಕ್ ಮಾಡಿಕೊಂಡಿದ್ದಾರೆ. ಪ್ರಧಾನಿ ಮೋದಿ ಹೇಳಿದ್ದನ್ನು ಫಾಲೋ ಮಾಡುವುದಕ್ಕೆ ಕಷ್ಟಸಾಧ್ಯ ಎಂದರು.
ಸಿಎಂ ಕುರ್ಚಿ ಕಾಳಗ ಬಗ್ಗೆ ಪ್ರಧಾನಿ ಮೋದಿ ಪ್ರಸ್ತಾಪ ವಿಚಾರ ಕುರಿತು ಪ್ರತಿಕ್ರಿಯಿಸಿದ ಸತೀಶ್ ಜಾರಕಿಹೊಳಿ, ಅದು ನಮ್ಮ ಆಂತರಿಕ ವಿಚಾರ. ಬೇರೆ ಪಕ್ಷದವರಿಗೆ ಏಕೆ ಬೇಕು. ನಮ್ಮ ಸಮಸ್ಯೆ ನಾವು ಬಗೆಹರಿಸಿಕೊಳ್ಳುತ್ತೇವೆ ಎಂದರು.
ಸಿಎಂ ಸ್ಥಾನದ ಬಗ್ಗೆ ಹೈಕಮಾಂಡ್ ಆದಷ್ಟು ಬೇಗ ತೀರ್ಮಾನ ಮಾಡಲಿ. ಮುಖ್ಯಮಂತ್ರಿಗಳನ್ನು ಹೈಕಮಾಂಡ್ ಆಯ್ಕೆ ಮಾಡಿದೆ. ಬಳಿಕ ಶಾಸಕರು ಆಯ್ಕೆ ಮಾಡುತ್ತಾರೆ .ಆಗ ಸಂದರ್ಭ ಬಂದಿಲ್ಲ ಈಗ ಆ ಸಂದರ್ಭ ಬಂದಿದೆ ಎಲ್ಲವೂ ಹೈಕಮಾಂಡ್ ತೀರ್ಮಾನ ಮಾಡುತ್ತೆ ಎಂದರು.
Key words: difficult, follow, PM Modi, says, Minister, Sathish Jarkiholi
The post ಪ್ರಧಾನಿ ಮೋದಿ ಹೇಳಿದ್ದನ್ನು ಫಾಲೋ ಮಾಡುವುದು ಕಷ್ಟಸಾಧ್ಯ- ಸಚಿವ ಸತೀಶ್ ಜಾರಕಿಹೊಳಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.





