19
April, 2026

A News 365Times Venture

19
Sunday
April, 2026

A News 365Times Venture

ಮಹಿಳಾ ಮೀಸಲಾತಿ ಮಸೂದೆ ಸೋಲು: ಪ್ರಜಾಪ್ರಭುತ್ವ, ವಿಪಕ್ಷಗಳ ಏಕತೆಯ ಗೆಲುವು- ಪ್ರಿಯಾಂಕ ಗಾಂಧಿ

Date:

ನವದೆಹಲಿ, ಏಪ್ರಿಲ್,18,2026 (www.justkannada.in): ಮಹಿಳಾ ಮೀಸಲಾತಿ ಮಸೂದೆ ಸೋತಿರುವುದು ಸಂವಿಧಾನ, ಪ್ರಜಾಪ್ರಭುತ್ವ ಹಾಗೂ ವಿರೋಧ ಪಕ್ಷಗಳ ಏಕತೆಯ ಗೆಲುವಾಗಿದೆ ಎಂದು ಕಾಂಗ್ರೆಸ್‌‍ ನಾಯಕಿ ಹಾಗೂ ಸಂಸದೆ ಪ್ರಿಯಾಂಕ ಗಾಂಧಿ ನುಡಿದರು.

ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಿಯಾಂಕ ಗಾಂಧಿ, ಮಹಿಳಾ ಮೀಸಲಾತಿಯ ಹೆಸರಿನಲ್ಲಿ ಕೇಂದ್ರ ಸರ್ಕಾರ ದೇಶದ ಒಕ್ಕೂಟ ವ್ಯವಸ್ಥೆಯನ್ನು ಬದಲಾವಣೆ ಮಾಡಲು ಸಂಚು ರೂಪಿಸಿತ್ತು. ಆದರೆ ನಿನ್ನೆ ನಡೆದದ್ದು ಪ್ರಜಾಪ್ರಭುತ್ವದ ದೊಡ್ಡ ಗೆಲುವು. 2023ರ ಮಹಿಳಾ ಮೀಸಲಾತಿ ಕಾಯ್ದೆಯನ್ನು ಪ್ರಸ್ತುತ ಲೋಕಸಭೆಯ ಸದಸ್ಯರ ಸಂಖ್ಯೆಯ ಆಧಾರದ ಮೇಲೆ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.

2029ರೊಳಗೆ ಕ್ಷೇತ್ರ ಮರುವಿಂಗಡಣೆಯಾಗದಿದ್ದರೆ ತಮ ರಾಜಕೀಯ ಲಾಭಕ್ಕೆ ಧಕ್ಕೆಯಾಗುತ್ತದೆ ಎಂಬ ಕಾರಣದಿಂದ ಮಹಿಳಾ ಮೀಸಲಾತಿಯೊಂದಿಗೆ ಸಂಸತ್‌ ಕ್ಷೇತ್ರಗಳ ಸಂಖ್ಯೆಯನ್ನು ಹೆಚ್ಚಿಸುವ ಕ್ರಮ ಕೈಗೊಂಡಿದ್ದರು. ಮಹಿಳಾ ಮೀಸಲಾತಿ ಮಸೂದೆಗೆ ವಿರೋಧ ಪಕ್ಷಗಳು ಬೆಂಬಲ ನೀಡಲು ಸಾಧ್ಯವಾಗಲಿಲ್ಲ. ಆದರೆ, ಏಕತೆಯಿಂದ ಇದ್ದರೆ ಸರ್ಕಾರವನ್ನು ಸೋಲಿಸಬಹುದು ಎಂಬುದನ್ನು ಇದು ತೋರಿಸಿದೆ ಎಂದು ಪ್ರಿಯಾಂಕ್ ಗಾಂಧಿ ತಿಳಿಸಿದರು.

Key words: Defeat, Women’s Reservation Bill, Priyanka Gandhi

The post ಮಹಿಳಾ ಮೀಸಲಾತಿ ಮಸೂದೆ ಸೋಲು: ಪ್ರಜಾಪ್ರಭುತ್ವ, ವಿಪಕ್ಷಗಳ ಏಕತೆಯ ಗೆಲುವು- ಪ್ರಿಯಾಂಕ ಗಾಂಧಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

തൃണമൂലിനല്ലാതെ മറ്റാർക്ക്നൽകുന്ന വോട്ടും ബി.ജെ.പിക്കുള്ളത്: അഭിഷേക് ബാനർജി

കൊൽക്കത്ത: തൃണമൂൽ കോൺഗ്രസ് അല്ലാത്ത മറ്റേതൊരു പാർട്ടിക്ക് നൽകുന്ന വോട്ടും ബിജെപിക്കുള്ള...

’தேசிய ஜனநாயக கூட்டணி தலைவர்கள் பொய்யர்கள்’ – கோவையில் தேஜஸ்வி யாதவ் காட்டம்

ராஷ்டிரிய ஜனதா தளம் தலைவர் தேஜஸ்வி யாதவ் திருப்பூர் மற்றும் மேட்டுப்பாளையம்...

SRH vs CSK: కాటేరమ్మ కొడుకుల కసివేట.. సీఎస్‌కేపై ఎస్‌ఆర్‌హెచ్ సూపర్ విక్టరీ..

SRH vs CSK: సన్‌రైజర్స్ హైదరాబాద్ (SRH), చెన్నై సూపర్ కింగ్స్...

ನೂತನ ಜನಗಣತಿಯ ಆಧಾರದಲ್ಲಿ ಮಹಿಳಾ ಮೀಸಲಾತಿ ಜಾರಿಗೊಳಿಸಿ: ಎಂ‌ಎಲ್‌ ಸಿ ಕೆ.ಶಿವಕುಮಾರ್

ಮೈಸೂರು,ಏಪ್ರಿಲ್, 18,2026 (www.justkannada.in): ಲೋಕಸಭೆಯಲ್ಲಿ ಮಹಿಳೆಯರಿಗೆ ಶೇ.33 ರಷ್ಟು ಮೀಸಲಾತಿ...