ದಾವಣಗೆರೆ,ಏಪ್ರಿಲ್,13,2026 (www.justkannada.in): ಟ್ರಸ್ಟಿಗಳಿಗೆ ಲೆಕ್ಕ ಕೇಳಿದ್ದಕ್ಕೆ ವ್ಯವಸ್ಥಿತವಾಗಿ ಷಡ್ಯಂತ್ರ ನಡೆಸಿ ನನ್ನನ್ನು ಉಚ್ಛಾಟನೆ ಮಾಡಿದ್ದಾರೆ ಎಂದು ವಚನಾನಂದ ಸ್ವಾಮೀಜಿ ಕಿಡಿ ಕಾರಿದ್ದಾರೆ.
ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿಗಳನ್ನು ಉಚ್ಛಾಟನೆ ಮಾಡಲಾಗಿದ್ದು, ಶ್ರೀಗಳ ಉಚ್ಛಾಟನೆಗೆ ಭಕ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಮಾತನಾಡಿದ ವಚನಾನಂದ ಸ್ವಾಮೀಜಿ, ನನ್ನ ಉಚ್ಛಾಟನೆ ಹಾಸ್ಯಾಸ್ಪದ. ಟ್ರಸ್ಟ್ ನವರಿಗೆ ಲೆಕ್ಕ ಕೇಳಿದ್ದಕ್ಕೆ ಟಾರ್ಗೆಟ್ ಮಾಡುತ್ತಿದ್ದಾರೆ. ವ್ಯವಸ್ಥಿತವಾಗಿ ಷಡ್ಯಂತ್ರ ಮಾಡಿ ನನ್ನನ್ನು ಉಚ್ಚಾಟನೆ ಮಾಡಿದ್ದಾರೆ ಎಂದರು.
ಶ್ವಾಸಪೀಠದಿಂದಲೇ ನನ್ನನ್ನು ಸಮಾಜ ಗುರುತಿಸಿದೆ. ಪೀಠಾಧ್ಯಕ್ಷರಾದ ಬಳಿಕ ಪೂರ್ವಶ್ರಮಕ್ಕೆ ಒಮ್ಮೆಯೂ ಭೇಟಿ ನೀಡಿಲ್ಲ. ಟ್ರಸ್ಟ್ನ ಸದಸ್ಯರು ಕೋಟ್ಯಂತರ ರೂಪಾಯಿ ಅವ್ಯವಹಾರ ಮಾಡಿದ್ದಾರೆ. ತಮ್ಮ ಅವ್ಯವಹಾರ ಮುಚ್ಚಿ ಹಾಕಿಕೊಳ್ಳಲು ನನ್ನನ್ನು ಟಾರ್ಗೆಟ್ ಮಾಡಿದ್ದಾರೆ. 2008ರಿಂದಲೂ ಪಂಚಮಸಾಲಿ ಗುರುಪೀಠದ ಲೆಕ್ಕವನ್ನು ಕೊಟ್ಟಿಲ್ಲ. ಲೆಕ್ಕ ಕೇಳಿದ್ದಕ್ಕೆ ಈಗ ಷಡ್ಯಂತ್ರ ನಡೆಸಿ ನನ್ನನ್ನು ಉಚ್ಛಾಟನೆ ಮಾಡಿದ್ದಾರೆ. ಎಲ್ಲ ತೀರ್ಮಾನವನ್ನು ಭಕ್ತರಿಗೆ ಬಿಡುತ್ತೇನೆ ಎಂದು ವಚನಾನಂದ ಸ್ವಾಮೀಜಿ ತಿಳಿಸಿದರು.
Key words: Conspiracy, Expulsion, Vachananananda Swamiji
The post ಲೆಕ್ಕ ಕೇಳಿದ್ದಕ್ಕೆ ಷಡ್ಯಂತ್ರ ಮಾಡಿ ಉಚ್ಛಾಟಿಸಿದ್ದಾರೆ: ವಚನಾನಂದ ಸ್ವಾಮೀಜಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.





