13
April, 2026

A News 365Times Venture

13
Monday
April, 2026

A News 365Times Venture

ಕಿಡ್ನಾಪ್ ಮಾಡಿ ಮಂಗಳಮುಖಿ ವೇಷ,  ಸೆಕ್ಸ್ ರಾಕೆಟ್‌ಗೆ ಬಳಕೆ ಆರೋಪ: ಆಘಾತಕಾರಿ ಪ್ರಕರಣ.

Date:

 

ಮೈಸೂರು, April.12,2026: ಯುವಕನೊಬ್ಬನನ್ನು ಕಿಡ್ನಾಪ್ ಮಾಡಿ ಮಂಗಳಮುಖಿ ವೇಷ ಹಾಕಿಸಿ ಕಲೆಕ್ಷನ್ ಹಾಗೂ ಸೆಕ್ಸ್ ವರ್ಕ್‌ಗೆ ಬಳಸಿದ ಆರೋಪಕ್ಕೆ ಸಂಬಂಧಿಸಿದಂತೆ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ.

ನಂಜನಗೂಡು ತ್ಯಾಗರಾಜ ಕಾಲೋನಿಯ ಅನಿಲ್ ಕುಮಾರ್ @ ಅಕ್ಷತಾ ಎಂಬ ಯುವಕನನ್ನು ಮಂಗಳೂರು ಮೂಲದ ಅನಿತಾ ಎಂಬ ಮಂಗಳಮುಖಿ ಮತ್ತು ತಂಡ ನಾಲ್ಕು ತಿಂಗಳ ಹಿಂದೆ ಮೈಸೂರು ಗ್ರಾಮಾಂತರ ಬಸ್ ನಿಲ್ದಾಣದ ಬಳಿ ಕಿಡ್ನಾಪ್ ಮಾಡಿದ್ದಾಗಿ ಆರೋಪಿಸಲಾಗಿದೆ. ಬಳಿಕ ಬಲವಂತವಾಗಿ ಸೀರೆ, ಆಭರಣ ಧರಿಸಿ ಬೀದಿಗಳಲ್ಲಿ ಕಲೆಕ್ಷನ್ ಮಾಡಿಸಿ, ದಿನಕ್ಕೆ 2 ರಿಂದ 3 ಸಾವಿರ ರೂ. ವಸೂಲಿ ಮಾಡಿಸಿಕೊಂಡಿದ್ದಾರೆ ಎನ್ನಲಾಗಿದೆ. ಜೊತೆಗೆ ರೀಲ್ಸ್ ತಯಾರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಿದ್ದು, ಮಂಗಳೂರು ಹಾಗೂ ಕೇರಳ ಭಾಗಗಳಲ್ಲಿ ಸೆಕ್ಸ್ ವರ್ಕ್‌ಗೂ ಬಳಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇದರ ನಡುವೆ ಆಧಾರ್‌ನಲ್ಲಿ ಟ್ರಾನ್ಸ್ಜೆಂಡರ್ ಎಂದು ನಮೂದಿಸಿ ಸಮಾಜ ಕಲ್ಯಾಣ ಇಲಾಖೆಯಿಂದ ಸರ್ಟಿಫಿಕೇಟ್ ಕೂಡ ಪಡೆದಿರುವುದಾಗಿ ತಿಳಿದುಬಂದಿದೆ. ಮುಂದಾಗಿ ಶಸ್ತ್ರಚಿಕಿತ್ಸೆ ಮೂಲಕ ಶಾಶ್ವತ ಲಿಂಗ ಬದಲಾವಣೆ ಮಾಡಲು ಯೋಜನೆ ರೂಪಿಸಿದ್ದರೆಂದು ಹೇಳಲಾಗಿದೆ.

ಈ ಪರಿಸ್ಥಿತಿಯಿಂದ ತಪ್ಪಿಸಿಕೊಳ್ಳಲು ನಂಜನಗೂಡಿಗೆ ಮರಳಿದ ಅನಿಲ್ ಕುಮಾರ್, ಮೈಸೂರಿನ ಲಷ್ಕರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆರೋಪಿಗಳು ಮತ್ತೆ ದಂಧೆಗೆ ಮರಳುವಂತೆ ಒತ್ತಡ ಹೇರುತ್ತಿದ್ದು, ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಪ್ರಕರಣದಿಂದ ಟ್ರಾನ್ಸ್ಜೆಂಡರ್ ಸರ್ಟಿಫಿಕೇಟ್ ನೀಡುವ ಪ್ರಕ್ರಿಯೆ ಹಾಗೂ ನಿಯಮ ಪಾಲನೆಯ ಕುರಿತು ಪ್ರಶ್ನೆಗಳು ಮೂಡಿವೆ. ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

Key words: transgender, disguise, for extortion and sex work, Mysore

SUMMARY:  

Mysuru: A shocking case has surfaced where a youth was allegedly kidnapped and forced into transgender disguise for extortion and sex work.

Anil Kumar, a resident of Nanjangud, claimed that a group led by a transgender person named Anita abducted him near the Mysuru rural bus stand four months ago. He was allegedly forced to wear women’s attire and made to collect money in public, earning ₹2,000–₹3,000 daily. He was also reportedly used for social media reels and forced into sex work in Mangaluru and parts of Kerala.

The complaint further states that a transgender certificate was obtained in his name, and there were plans to subject him to gender reassignment surgery.

After escaping, Anil Kumar filed a complaint at Lashkar Police Station in Mysuru, alleging continued threats and harassment to return to the racket.

The case has raised serious questions about the verification process for issuing transgender certificates. Police are investigating.

The post ಕಿಡ್ನಾಪ್ ಮಾಡಿ ಮಂಗಳಮುಖಿ ವೇಷ,  ಸೆಕ್ಸ್ ರಾಕೆಟ್‌ಗೆ ಬಳಕೆ ಆರೋಪ: ಆಘಾತಕಾರಿ ಪ್ರಕರಣ. appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ബംഗാളിനെ മൂന്നായി വിഭജിക്കാനാണ് ബി.ജെ.പി പദ്ധതിയിടുന്നത്, അതിനാണ് ആ ബില്‍; വിമര്‍ശിച്ച് മമത

  കൊല്‍ക്കത്ത: മണ്ഡല പുനര്‍നിര്‍ണയം വഴി പശ്ചിമ ബംഗാളിനെ മൂന്നായി ഭാഗങ്ങളായി...

சேலம்: பிரசாரத்தின்போது மேடையிலேயே மயங்கிய ராமதாஸ்; என்ன நடந்தது?

பாமக நிறுவனர் ராமதாஸ் சேலம் பள்ளப்பட்டியில் பரப்புரையில் ஈடுபட்டிருந்தபோது திடீரென மயங்கி...

ಸಂಪುಟ ಪುನರ್ರಚನೆ ಹೈಕಮಾಂಡ್ ಗೆ ಬಿಟ್ಟಿದ್ದು ; ಮುಖ್ಯಮಂತ್ರಿ ಸಿದ್ದರಾಮಯ್ಯ

  ಚಿಕ್ಕಮಗಳೂರು, ಏಪ್ರಿಲ್ 12: ಸಚಿವ ಸ್ಥಾನದ ಆಕಾಂಕ್ಷಿ ಶಾಸಕರು ನವದೆಹಲಿಗೆ...