ಹಾವೇರಿ,ಏಪ್ರಿಲ್,11,2026 (www.justkannada.in): ಸಚಿವ ಸಂಪುಟ ವಿಸ್ತರಣೆ ವಿಚಾರ ಸಿಎಂ ಮತ್ತು ಪಕ್ಷದ ವರಿಷ್ಠರಿಗೆ ಬಿಟ್ಟಿದ್ದು ಎಂದು ಸಕ್ಕರೆ ಸಚಿವ ಶಿವಾನಂದ ಪಾಟೀಲ್ ತಿಳಿಸಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಶಿವಾನಂದ ಪಾಟೀಲ್, ಸಚಿವರಾಗಬೇಕು ಎಂದು ಎಲ್ಲರಿಗೂ ಆಸೆ ಇರುತ್ತದೆ. ನಾನು ಸಂಪುಟ ಸೇರಲು 20 ವರ್ಷಗಳ ಕಾಲ ಕಾದಿದ್ದೇನೆ. ಸಂಫುಟ ವಿಸ್ತರಣೆ ಮಾಡುವಂತೆ ಒತ್ತಾಯ ಮಾಡುವುದರಲ್ಲಿ ತಪ್ಪೇನಿದೆ? ನ್ಯಾಯಾಕೆ ಒತ್ತಾಯ ಮಾಡಲಿ. ಒತ್ತಾಯ ಮಾಡೋರು ಮಾಡಲಿ ಎಂದರು.
ಸಂಪುಟಕ್ಕೆ ಹಳಬರು ಹೊಸಬರನ್ನು ಸೇರಿಸುವ ಬಗ್ಗೆ ವರಿಷ್ಠರು ನಿರ್ಧಾರ ಮಾಡುತ್ತಾರೆ ಎಂದು ಸಚಿವ ಶಿವಾನಂದ ಪಾಟೀಲ್ ತಿಳಿಸಿದರು.
Key words: Cabinet, expansion, Minister, Shivanand Patil
The post ಸಂಪುಟ ವಿಸ್ತರಣೆ ಸಿಎಂ, ವರಿಷ್ಠರಿಗೆ ಬಿಟ್ಟಿದ್ದು : ಒತ್ತಾಯ ಮಾಡೋರು ಮಾಡ್ಲಿ- ಸಚಿವ ಶಿವಾನಂದ ಪಾಟೀಲ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.





