10
April, 2026

A News 365Times Venture

10
Friday
April, 2026

A News 365Times Venture

ಏಕೀಕೃತ ಓಮಿಕ್ಸ್ ನೆಟ್‌ ವರ್ಕ್‌ ಅನುಷ್ಠಾನಗೊಳಿಸಿದರೆ ಜಾಗತಿಕ ವಿಜ್ಞಾನ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆ- ಪ್ರೊ. ಕೆ.ಎಸ್. ರಂಗಪ್ಪ

Date:

ಮೈಸೂರು,ಏಪ್ರಿಲ್,9,2026 (www.justkannada.in): ಯುನೆಸ್ಕೊದ ದಿ ವರ್ಲ್ಡ್ ಅಕಾಡೆಮಿ ಆಫ್ ಸೈನ್ಸ್ (The World Academy of Sciences) ಸಂಸ್ಥೆಯ ಫೆಲೋ , ಹೆಸರಾಂತ ವಿಜ್ಞಾನಿ ಪ್ರೊ. ಕೆ.ಎಸ್. ರಂಗಪ್ಪ ಅವರು, “ಏಷ್ಯಾ-ಆಫ್ರಿಕಾ ಸಂಶೋಧನಾ ಗುರಿಗಳ ಸಾಧನೆಯಲ್ಲಿ ಏಕೀಕೃತ ಓಮಿಕ್ಸ್ ನೆಟ್‌ವರ್ಕ್‌ನ ಪಾತ್ರ” ಕುರಿತ ಪ್ಯಾನೆಲ್ ಚರ್ಚೆಗೆ ಆಹ್ವಾನಿತರಾಗಿದ್ದರು.

ಈ ಕಾರ್ಯಕ್ರಮವನ್ನು ಇಥಿಯೋಪಿಯಾದ ಅಡಿಸ್ ಅಬಾಬಾ ವಿಶ್ವವಿದ್ಯಾಲಯದಲ್ಲಿ, ಇನೋವೇಷನ್ ಅಂಡ್ ಟೆಕ್ನಾಲಜಿ (Innovation and Technology) ಸಚಿವಾಲಯ, ಬಯೋ ಅಂಡ್ ಎಮರ್ಜಿಂಗ್ ಟೆಕ್ನಾಲಜಿ (Bio and Emerging Technology) ಹಾಗೂ ಸಿಡಿಟಿ ಆಫ್ರಿಕಾ (CDT-Africa) ಸಂಯುಕ್ತವಾಗಿ ಇತ್ತೀಚೆಗೆ ಆಯೋಜಿಸಿತ್ತು.

ಈ ಸಂದರ್ಭದಲ್ಲಿ ಮಾತನಾಡಿದ  ಪ್ರೊ. ರಂಗಪ್ಪ ಅವರು, “ಏಕೀಕೃತ ಓಮಿಕ್ಸ್ ನೆಟ್‌ ವರ್ಕ್‌ ಗಳು ಕೇವಲ ತಂತ್ರಜ್ಞಾನಕ್ಕೆ ಸೀಮಿತವಲ್ಲ; ಅವು ಸಂಪರ್ಕ ಸೇತುವೆ ನಿರ್ಮಿಸುವುದರ ಜೊತೆಗೆ ಸಮಾನತೆ ಸಾಧಿಸಿ, ಏಷ್ಯಾ ಮತ್ತು ಆಫ್ರಿಕಾ ಪ್ರದೇಶಗಳ ವಿಶೇಷ ಸವಾಲುಗಳಿಗೆ ಹೊಂದುವ ಪರಿಹಾರಗಳನ್ನು ಅನಾವರಣಗೊಳಿಸುತ್ತವೆ. ಇದನ್ನು ಸರಿಯಾಗಿ ಅನುಷ್ಠಾನಗೊಳಿಸಿದರೆ ಜಾಗತಿಕ ವಿಜ್ಞಾನ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆಯನ್ನು ತರಬಲ್ಲವು” ಎಂದು ಅಭಿಪ್ರಾಯಪಟ್ಟರು.

ಈ ಪ್ಯಾನೆಲ್ ಚರ್ಚೆಗೆ ಆಹ್ವಾನಿತರಾಗಿ  ಪ್ರೊ. ಸಿದ್ದಬಸವೇಗೌಡ (ಜಪಾನ್), Innovation and Technology ಸಚಿವಾಲಯದ ಪ್ರತಿನಿಧಿಗಳು (ಆಫ್ರಿಕಾ),  ಪ್ರೊ. ಹ್ಯಾಬೋಟ್ಮ್ ರೆಸ್ಸೋಮ್, GTU (ಅಮೆರಿಕಾ), ಡಾ. ಸ್ಯಾಮುಯೆಲ್ ಕಿಫ್ಲೆ, ಅಧ್ಯಕ್ಷರು, AAU, ಡಾ. ಮೊಲಾಲೆಗ್ನ್, BETin,  ಪ್ರೊ. ಎಚ್. ಹಿನೋ (ಜಪಾನ್) ಭಾಗವಹಿಸಿದ್ದರು.

ಸಂಚಾಲಕರಾಗಿ ಪ್ರೊ. ಸೊಲೊಮನ್, ಅಡಿಸ್ ಅಬಾಬಾ ವಿಶ್ವವಿದ್ಯಾಲಯ (ಇಥಿಯೋಪಿಯಾ) ಕಾರ್ಯನಿರ್ವಹಿಸಿದರು. ಈ ಚರ್ಚೆ ಏಷ್ಯಾ-ಆಫ್ರಿಕಾ ಸಹಯೋಗವನ್ನು ಮತ್ತಷ್ಟು ಬಲಪಡಿಸುವ ಮಹತ್ವದ ವೇದಿಕೆಯಾಗಲಿದೆ.

ENGLISH SUMMARY.

Prof. K. S. Rangappa, Fellow of UNESCO’s The World Academy of Sciences and a renowned scientist, was invited to participate in a panel discussion on “The Role of Integrated Omics Networks in Achieving Asia–Africa Research Goals.”

The event was recently organized at Addis Ababa University, Ethiopia, jointly by the Ministry of Innovation and Technology, Bio and Emerging Technology, and CDT-Africa.

Speaking on the occasion, Prof. Rangappa said, “Integrated omics networks are not limited to technology alone; they build bridges of connectivity, promote equity, and help uncover solutions tailored to the unique challenges of Asia and Africa. If implemented effectively, they can bring significant transformation to the global scientific landscape.”

Other distinguished panelists included Prof. Siddabasavegowda (Japan), representatives from the Ministry of Innovation and Technology (Africa), Prof. Habtom Ressom (GTU, USA), Dr. Samuel Kifle (President, AAU), Dr. Molalegn (BETin), and Prof. H. Hino (Japan).

The session was moderated by Prof. Solomon from Addis Ababa University (Ethiopia).

The discussion is expected to serve as an important platform to further strengthen Asia–Africa collaboration.

Key words: Prof. K. S. Rangappa, panel discussion, Omics Networks in Achieving Asia–Africa Research Goals

The post ಏಕೀಕೃತ ಓಮಿಕ್ಸ್ ನೆಟ್‌ ವರ್ಕ್‌ ಅನುಷ್ಠಾನಗೊಳಿಸಿದರೆ ಜಾಗತಿಕ ವಿಜ್ಞಾನ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆ- ಪ್ರೊ. ಕೆ.ಎಸ್. ರಂಗಪ್ಪ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ಗ್ಯಾಸ್ ಅಭಾವ : ನಮ್ಮ ಮನವಿಗೆ ಕೇಂದ್ರ ಸ್ಪಂದಿಸಬೇಕು- ಗೃಹ ಸಚಿವ ಪರಮೇಶ್ವರ್ ಆಗ್ರಹ

ಬೆಂಗಳೂರು,ಏಪ್ರಿಲ್,10,2026 (www.justkannada.in):  ರಾಜ್ಯದಲ್ಲಿ ಎಲ್ ಪಿಜಿ ಗ್ಯಾಸ್ ಅಭಾವ ವಿಚಾರಕ್ಕೆ...

വനിതാ സംവരണ നിയമത്തിലെ യൂ ടേണ്‍; പ്രധാനമന്ത്രി രാജ്യത്തെ സ്ത്രീകളോട് മാപ്പ് പറയണം: കോണ്‍ഗ്രസ്

ന്യൂദല്‍ഹി: വനിതാ സംവരണ നിയമം നടപ്പിലാക്കുന്നതിലുള്ള മോദി സര്‍ക്കാരിന്റെ യൂ ടേണ്‍...

'என்னுடைய பணம் இல்லை' முதல் ராஜினாமா வரை: யஷ்வந்த் வர்மா 'கட்டுக்கட்டான' பண வழக்கு|Timeline

வீட்டில் கட்டுக்கட்டாக பணம் கண்டுபிடிக்கப்பட்ட குற்றச்சாட்டு எழுந்தும், ஓராண்டு கழித்து இன்று...

Samsung Smartphones: మళ్లీ ధరలు పెంచిన శాంసంగ్‌.. ఏ ఫోన్ ఎంత ధర పెరిగిందంటే..

భారత మార్కెట్లో శాంసంగ్ తన పాపులర్ గెలాక్సీ A మరియు F...