5
April, 2026

A News 365Times Venture

5
Sunday
April, 2026

A News 365Times Venture

ಅನುದಾನ ಕಡಿತ : ಯಾವ ಮುಖ ಇಡ್ಕೊಂಡು ವೋಟ್ ಕೇಳ್ತಾರೆ-ಆರ್.ಅಶೋಕ್

Date:

ಬಾಗಲಕೋಟೆ, ಏಪ್ರಿಲ್, 4,2026 (www.justkannada.in):   ಹಿಂದುಳಿದ ಜಾತಿಗಳು ಹಾಗೂ ಪರಿಶಿಷ್ಟ ಜಾತಿಗಳ ನಿಗಮಗಳಿಗೆ ಅನುದಾನ ಕಡಿತ ಮಾಡಿದ ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ನಾಯಕರು ಚುನಾವಣೆಯ ಸಮಯದಲ್ಲಿ ಹಿಂದುಳಿದ ವರ್ಗಗಳು ಹಾಗೂ ದಲಿತ ಮುಖಂಡರ ಜೊತೆ ಸಭೆಗಳನ್ನು ನಡೆಸುತ್ತಿದ್ದಾರೆ. ಯಾವ ಮುಖ ಇಟ್ಟುಕೊಂಡು ಅವರ ಬಳಿ ಮತ ಯಾಚಿಸುತ್ತಿದ್ದಾರೆ? ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್  ಪ್ರಶ್ನೆ ಮಾಡಿದರು.

ಸಂಸದ ಬಸವರಾಜ ಬೊಮ್ಮಾಯಿ ಅವರೊಂದಿಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಆರ್.ಅಶೋಕ್, ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಮುಖ್ಯಮಂತ್ರಿ ಕುರ್ಚಿಗಾಗಿ ಕಿತ್ತಾಟ ಹಾಗೂ ಮೂರು ವರ್ಷದಲ್ಲಿ ಮೂವತ್ತು ಹಗರಣಗಳು ನಡೆದಿವೆ. ವಾಲ್ಮೀಕಿ ನಿಗಮದ ಹಗರಣ, ಗುತ್ತಿಗೆದಾರರು ಮಾಡಿರುವ 60% ಕಮಿಶನ್ ಆರೋಪ, ಲಿಕ್ಕರ್ ಲಾಬಿ ಮಾಡಿ ಸಚಿವರು ಕೋಟಿಗಟ್ಟಲೆ ಹಣವನ್ನು ದೆಹಲಿಗೆ ಕಳಿಸಿರುವುದು ಸೇರಿದಂತೆ ಮೊದಲಾದ ಹಗರಣ ನಡೆದಿವೆ ಎಂದರು.

ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದಾಗ ನಾಲ್ಕು ಮೆಡಿಕಲ್ ಕಾಲೇಜು ನಿರ್ಮಿಸಲಾಗಿತ್ತು. ಈಗ ಮೆಡಿಕಲ್ ಕಾಲೇಜು ಅಲ್ಲ, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರನ್ನೇ ವರ್ಗಾಯಿಸಲಾಗಿದೆ. ಔಷಧಿ ಪೂರೈಕೆಗೆ ಟೆಂಡರ್ ಕರೆದಿಲ್ಲ. ಕೃಷ್ಣೆಯ ಕಣ್ಣೀರು ಒರೆಸುತ್ತೇನೆಂದು ಹೇಳಿ ಯಾವುದೇ ನೀರಾವರಿ ಯೋಜನೆಗೂ ಹಣ ನೀಡಿಲ್ಲ ಎಂದರು.

ಪ್ರಧಾನಿ ನರೇಂದ್ರ ಮೋದಿ ಅನ್ನ ಕೊಟ್ಟರೆ, ಸಿದ್ದರಾಮಯ್ಯ ಚೀಲ ಕೊಟ್ಟು ಹೆಸರು ಮಾಡುತ್ತಿದ್ದಾರೆ. ಗೃಹಲಕ್ಷ್ಮಿಯ 5,000 ಕೋಟಿ ಹಣವನ್ನು ಎರಡು ತಿಂಗಳಲ್ಲಿ ನೀಡಿಲ್ಲ. ಆ ಹಣ ಎಲ್ಲಿ ಹೋಯಿತು ಎಂದು ಸದನದಲ್ಲಿ ಪ್ರಶ್ನಿಸಿದಾಗ ಉತ್ತರ ನೀಡಿಲ್ಲ ಎಂದು ಹೇಳಿದರು.

ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ, ಸಂಸದ ಬಸವರಾಜ ಬೊಮ್ಮಾಯಿ, ಸಂಸದ ಗೋವಿಂದ ಕಾರಂಜೋಳ, ಜಿಲ್ಲಾಧ್ಯಕ್ಷ ಎನ್.ರಾಜಶೇಖರ್ ಸೇರಿದಂತೆ ಇತರ ಪ್ರಮುಖ ನಾಯಕರು ಉಪಸ್ಥಿತರಿದ್ದರು.

Key words: Bagalkote, By-election, R. Ashok

The post ಅನುದಾನ ಕಡಿತ : ಯಾವ ಮುಖ ಇಡ್ಕೊಂಡು ವೋಟ್ ಕೇಳ್ತಾರೆ-ಆರ್.ಅಶೋಕ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ಗ್ಯಾಸ್ ಸಿಗದೆ ಆಟೋ ಚಾಲಕರ ಪರದಾಟ: ಕೇಂದ್ರದ ವಿರುದ್ದ ಡಿಕೆ ಶಿವಕುಮಾರ್ ಕಿಡಿ

ಬೆಂಗಳೂರು,ಏಪ್ರಿಲ್,4,2026 (www.justkannada.in):  ಗ್ಯಾಸ್ ಸಿಗದೆ ಆಟೋ ಚಾಲಕರು ಪರದಾಡುತ್ತಿರುವ ಹಿನ್ನೆಲೆಯಲ್ಲಿ...

ഹോര്‍മുസ് തുറന്നില്ലെങ്കില്‍ ഇറാന്‍ നരകം കാണും; അല്ലാഹുവിന് സ്തുതിക്കൊപ്പം അസഭ്യവും തെറിവിളിയുമായി വീണ്ടും ട്രംപിന്റെ ഭീഷണി

വാഷിങ്ടണ്‍: ഹോര്‍മുസ് കടലിടുക്ക് തുറക്കുന്നതുമായി ബന്ധപ്പെട്ട് വീണ്ടും പ്രകോപനവുമായി അമേരിക്കന്‍ പ്രസിഡന്റ്...

“என் மகன் அல்ல, நானே வேட்பாளர்; நாளை மனு தாக்கல் செய்கிறேன்’’ – ராணிப்பேட்டை காந்தி எக்ஸ்க்ளூசிவ்!

ராணிப்பேட்டை தொகுதி சிட்டிங் எம்.எல்.ஏ-வாக இருப்பவர் கைத்தறித்துறை அமைச்சர் ஆர்.காந்தி. இவர்,...

Yamaha Ray ZR: యమహా రే జెడ్ఆర్ స్కూటర్ ధర పెంపు.. 125cc FI హైబ్రిడ్ ఇంజన్‌

టూవీలర్ తయారీదారు యమహా తన యమహా రే జెడ్ఆర్ స్కూటర్ ధరను...