3
April, 2026

A News 365Times Venture

3
Friday
April, 2026

A News 365Times Venture

ಸಿಎಂ ಸಿದ್ದರಾಮಯ್ಯ ಬಿಜೆಪಿ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ- ಆರ್.ಅಶೋಕ್

Date:

ದಾವಣಗೆರೆ,ಏಪ್ರಿಲ್,2,2026 (www.justkannada.in): ಬಡವರನ್ನ ಗೆಲ್ಲಿಸಿ ಎಂದು ಸಿದ್ದರಾಮಯ್ಯ ಪ್ರಚಾರ ಮಾಡಿದ್ದಾರೆ. ಈ ಮೂಲಕ ಸಿಎಂ ಸಿದ್ದರಾಮಯ್ಯ ಬಿಜೆಪಿ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಲೇವಡಿ ಮಾಡಿದರು.

ಇಂದು ದಾವಣಗೆರೆಯಲ್ಲಿ ಮಾತನಾಡಿದ ಆರ್.ಅಶೋಕ್,ಈ ಉಪಚುನಾವಣೆಯಲ್ಲಿ ಸಾಮಾನ್ಯ ಕಾರ್ಯಕರ್ತರನ್ನ ಗೆಲ್ಲಿಸಬೇಕು.  ಸಿಎಂ ಸಿದ್ದರಾಮಯ್ಯ ಬಿಜೆಪಿ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ ಬಡವರನ್ನ ಗೆಲ್ಲಿಸಿ ಎಂದು ಸಿದ್ದರಾಮಯ್ಯ ಪ್ರಚಾರ ಮಾಡಿದ್ದಾರೆ. ಶ್ರೀಮಂತರಿಗೆ ಯಾರೂ ಮತ ಹಾಕಬೇಡಿ ಎಂದು ಹೇಳಿದ್ದಾರೆ. ಅಂದ್ರೆ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ದಾಸ ಕರಿಯಪ್ಪಗೆ ವೋಟ್ ಹಾಕಿ ಎಂದರ್ಥ ಎಂದರು.

ಅನ್ನಭಾಗ್ಯ ಯೋಜನೆಗೆ ಅಕ್ಕಿ ಕೊಡುತ್ತಿರುವುದು ಕೇಂದ್ರ ಸರ್ಕಾರ ಮಾತ್ರ.  2 ರೂ. ಚೀಲ ಕೊಡುತ್ತಿರುವುದು ಸಿದ್ದರಾಮಯ್ಯ ಸರ್ಕಾರ. ಸಾಮಾನ್ಯ ಕಾರ್ಯಕರ್ತನ ವಿರುದ್ದ ಇಡೀ ಸರ್ಕಾರವೇ ಬಂದಿದೆ.  ಅವೆರೆಲ್ಲರೂ ಬರಿಗೈಯಲ್ಲಿ ಬಂದಿಲ್ಲ. ಚೀಲದಲ್ಲಿ ಹಣ ತಂದಿದ್ದಾರೆ. ಒಂದೊಂದು ಬೂತ್ ನಲ್ಲಿ ಮೂವರು ಸಚಿವರು ಶಾಸಕರು ಇದ್ದಾರೆ ಎಂದು ಆರ್.ಅಶೋಕ್ ವಾಗ್ದಾಳಿ ನಡೆಸಿದರು.

Key words: CM Siddaramaiah, campaigning, BJP, R. Ashok

The post ಸಿಎಂ ಸಿದ್ದರಾಮಯ್ಯ ಬಿಜೆಪಿ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ- ಆರ್.ಅಶೋಕ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ದುಬೈ: ಕನ್ನಡಿಗರ ಕೂಟದ ಅಧ್ಯಕ್ಷರಾಗಿ ಅರುಣ್ ಕುಮಾರ್ ಎಂ.ಕೆ.  ಪುನರಾಯ್ಕೆ

ದುಬೈ,ಏಪ್ರಿಲ್,2,2026 (www.justkannada.in): ಮಧ್ಯಪ್ರಾಚ್ಯದ ಪ್ರತಿಷ್ಠಿತ ಹಾಗೂ ಹಿರಿಯ ಕನ್ನಡ ಸಂಘಟನೆಗಳಲ್ಲಿ...

ബീഫും പോര്‍ക്കും വേണ്ട; ഇറ്റാനഗറിലെ ഹോട്ടല്‍ ബോര്‍ഡുകളില്‍ ഇറച്ചി പേരുകള്‍ നിരോധിച്ച് മുന്‍സിപ്പല്‍ കോര്‍പ്പറേഷന്‍

ഇറ്റാനഗര്‍: അരുണാചല്‍പ്രദേശിലെ ഇറ്റാ നഗറില്‍ ഹോട്ടലുകള്‍, റെസ്‌റ്റോറന്റുകള്‍ എന്നിവയടെ സൈന്‍ ബോര്‍ഡില്‍...

'செங்கேணி அம்மன் கோவிலில் வழிபாடு.!' – தொகுதிக்குள் சென்டிமென்டாக பிரசாரத்தை தொடங்கிய உதயநிதி!

திமுக சார்பில் துணை முதல்வர் உதயநிதி சேப்பாக்கம் - திருவல்லிக்கேணி தொகுதியில்...

Liquor Sales: ఏరులై పారుతున్న మద్యం.. 70% పెరిగిన బీర్ల అమ్మకాలు.. కానీ ఆదాయం మాత్రం!

Liquor Sales: తెలంగాణ రాష్ట్రంలో మద్యం వినియోగం మునుపెన్నడూ లేని విధంగా...