29
March, 2026

A News 365Times Venture

29
Sunday
March, 2026

A News 365Times Venture

ಪತಿ ಮರಣದ ನಡುವೆಯೂ ಕರ್ತವ್ಯ ನಿಭಾಯಿಸಿದ ಶಿಕ್ಷಕಿ: ಶಾಸಕರಿಂದ ಶ್ಲಾಘನೆ

Date:

 

ಮೈಸೂರು, March.29,2026: ವೈಯಕ್ತಿಕ ದುಃಖದ ನಡುವೆಯೂ ಕರ್ತವ್ಯಕ್ಕೆ ಆದ್ಯತೆ ನೀಡಿದ ಶಿಕ್ಷಕಿಯೊಬ್ಬರ ಮಾನವೀಯತೆ ಹಾಗೂ ನಿಷ್ಠೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

ಹೆಗ್ಗಡದೇವನಕೋಟೆ ತಾಲೂಕಿನ ಜಿ.ಬಿ. ಸರಗೂರು ಸರ್ಕಾರಿ ಪ್ರೌಢಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ಹಾಗೂ ಗಣಿತ ಶಿಕ್ಷಕಿ ಜ್ಯೋತಿ ಅವರು, ಪತಿಯ ಮರಣದ ಮರುದಿನವೇ ಶಾಲೆಗೆ ಹಾಜರಾಗಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪಾಠ ಬೋಧನೆ ಮಾಡಿರುವುದು ಗಮನಾರ್ಹವಾಗಿದೆ.

ಶಾಸಕ ಅನಿಲ್ ಚಿಕ್ಕಮಾದು ಅವರು ಮೈಸೂರಿನ ದಟ್ಟಗಳ್ಳಿಯಲ್ಲಿರುವ ಜ್ಯೋತಿ ಅವರ ನಿವಾಸಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಈ ವೇಳೆ ಶಿಕ್ಷಕಿಯ ಕರ್ತವ್ಯನಿಷ್ಠೆಯನ್ನು ಶ್ಲಾಘಿಸಿ, “ನಿಮ್ಮಂತ ಶಿಕ್ಷಕರ ಸೇವೆ ಕ್ಷೇತ್ರದ ಸರ್ಕಾರಿ ಶಾಲೆಗಳಿಗೇ ಮಾದರಿ,” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ದುಃಖದ ಸಮಯದಲ್ಲೂ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ತೋರಿದ ಅವರ ಸಮರ್ಪಣಾಭಾವ ಎಲ್ಲರಿಗೂ ಪ್ರೇರಣೆಯಾಗಿದೆ. ಭಗವಂತ ಅವರು ಈ ದುಃಖವನ್ನು ಸಹಿಸುವ ಶಕ್ತಿ ನೀಡಲಿ ಎಂದು ಆಶಿಸಿ ಶಾಸಕರು ಧೈರ್ಯ ತುಂಬಿದರು.

Key words:  Teacher’s Dedication, Wins Praise, Amid Personal Tragedy, mysore, Jyothi, in-charge headmistress, h.d.kote

SUMMARY:

Teacher’s Dedication Wins Praise Amid Personal Tragedy

Mysuru: In a deeply moving gesture of commitment, Jyothi, an in-charge headmistress and mathematics teacher at the Government High School in G.B. Saraguru, reported to duty just a day after her husband’s death to teach SSLC students.

Heggadadevanakote MLA Anil Chikkamadu visited her residence in Dattagalli, Mysuru, and consoled the bereaved family. He lauded Jyothi’s extraordinary dedication, calling it “commendable and exemplary.”

“Teachers like you are an inspiration to the entire education system,” he said, praising her sense of responsibility towards students even in the face of personal grief. The MLA also offered prayers for strength and expressed solidarity with the family during their difficult time.

 

 

 

The post ಪತಿ ಮರಣದ ನಡುವೆಯೂ ಕರ್ತವ್ಯ ನಿಭಾಯಿಸಿದ ಶಿಕ್ಷಕಿ: ಶಾಸಕರಿಂದ ಶ್ಲಾಘನೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ಟಾರ್ಚು – ಮರೆಯಲಾಗದ ಒಂದು ಪ್ರಯಾಣ

  ಬೆಂಗಳೂರು: ಇತ್ತೀಚೆಗೆ, ಆಹ್ವಾನದ ಮೇರೆಗೆ ನಾನು ಪ್ರಯೋಗಾತ್ಮಕ ಕನ್ನಡ ಚಲನಚಿತ್ರ...

എഥനോള്‍ ചേര്‍ത്ത പെട്രോളുള്ളതുകൊണ്ട് നമുക്ക് ഇന്ധന പ്രതിസന്ധിയുണ്ടായില്ല, E20 പെട്രോളിനെ ന്യായീകരിച്ച് മോദി

ലഖ്‌നൗ: കേന്ദ്ര സര്‍ക്കാരിന്റെ എഥനോള്‍ മിശ്രിത പെട്രോളിനെ ന്യായീകരിച്ച് പ്രധാനമന്ത്രി നരേന്ദ്ര...

"சிறுபான்மையினர் வாக்குகளை அவ்வளவு எளிதாகக் கவர முடியாது" – விஜய்யை விமர்சிக்கும் கருணாஸ்

தமிழக வெற்றிக் கழகத்தின் தலைவர் விஜய், வருகிற சட்டமன்றத் தேர்தலில் போட்டியிடப்...