25
March, 2026

A News 365Times Venture

25
Wednesday
March, 2026

A News 365Times Venture

ಪಾರಂಪರಿಕ ಕಟ್ಟಡಗಳ ಸಂರಕ್ಷಣೆಗೆ ಹೆಚ್ಚಿನ ಅನುದಾನ ಒದಗಿಸಿ –MLC ಕೆ.ಶಿವಕುಮಾರ್ ಆಗ್ರಹ

Date:

ಬೆಂಗಳೂರು,ಮಾರ್ಚ್,24,2026 (www.justkannada.in):  ಮೈಸೂರು ನಗರ ಸೇರಿದಂತೆ ರಾಜ್ಯದಲ್ಲಿರುವ ಪಾರಂಪರಿಕ ಕಟ್ಟಡಗಳ ಸಂರಕ್ಷಣೆಗೆ ಹೆಚ್ಚಿನ ಅನುದಾನ ಒದಗಿಸಬೇಕೆಂದು ವಿಧಾನ ಪರಿಷರಿತ್ ಸದಸ್ಯ ಕೆ.ಶಿವಕುಮಾರ್ ಅವರು ಒತ್ತಾಯಿಸಿದರು.

ವಿಧಾನ ಪರಿಷತ್ ಅಧಿವೇಶನದಲ್ಲಿ ಚುಕ್ಕೆ ಗುರತಿನ ಪ್ರಶ್ನೆಗೆ ಉತ್ತರ ಪಡೆದು ಮಾತನಾಡಿದ ಕೆ.ಶಿವಕುಮಾರ್ ಅವರು, ಮೈಸೂರು ನಗರದಲ್ಲಿ 200ಕ್ಕೂ ಹೆಚ್ಚು ಪಾರಂಪರಿಕ ಕಟ್ಟಡಗಳಿದ್ದವು. ಪ್ರಸ್ತುತ ನೂರಕ್ಕೆ ಇಳಿಕೆ ಕಂಡಿವೆ. ಎಲ್ಲಾ ಕಟ್ಟಡಗಳನ್ನು ಕೆಡುವಲಾಗಿದೆ.  ಸಮರ್ಪಕವಾಗಿ ನಿರ್ವಹಣೆ ಮಾಡುತ್ತಿಲ್ಲ ಎಂದು ಹೇಳಿದರು.

ಮಹಾರಾಜರ ಕಾಲದಲ್ಲಿ ದಸರಾ ವೇಳೆ ಎಲ್ಲಾ ಕಟ್ಟಡಗಳಿಗೂ ಸುಣ್ಣ-ಬಣ್ಣ ಬಳಿದು ನಿರ್ವಹಣೆ ಮಾಡುತ್ತಿದ್ದರು. ಇತ್ತೀಚಿನ ವರ್ಷಗಳಲ್ಲಿ ಅನುದಾನದ ಕೊರತೆಯಿಂದ ನಿರ್ವಹಣೆ ಕುಂಠಿತವಾಗಿದೆ. ಎಲ್ಲಾ ಪ್ರವಾಸಿಗರು ವಿದೇಶಕ್ಕೆ ತೆರಳುವುದು ಅಲ್ಲಿನ ಪಾರಂಪರಿಕ ಕಟ್ಟಡಗಳ ವೀಕ್ಷಣೆ ಮುಖ್ಯ ಉದ್ದೇಶವಾಗಿರುತ್ತದೆ ಎಂದು ತಿಳಿಸಿದರು.

ನಮ್ಮ ಪಾರಂಪರಿಕ ಕಟ್ಟಡಗಳನ್ನು ರಕ್ಷಣೆ ಮಾಡದಿದ್ದರೆ ನಮ್ಮ ಸಂಸ್ಕೃತಿ, ಪರಂಪರೆ ಮತ್ತು ಇತಿಹಾಸವನ್ನು ಮುಂದಿನ ಪೀಳಿಗೆಗೆ ತಿಳಿಸಲು ಸಾಧ್ಯವಾಗುವುದಿಲ್ಲ. ಜಿಲ್ಲಾಡಳಿತದ ಬಳಿ ಇರುವ ಅನುದಾನ ಸಾಲದು. ಆಸ್ತಿ ತೆರಿಗೆಯಲ್ಲಾದರು ಅನುದಾನ ಒದಗಿಸಲು ಮಂತ್ರಿಗಳ ಅವಕಾಶ ಕಲ್ಪಿಸಬೇಕು ಎಂದು ಕೋರಿದರು.

ಪಾರಂಪರಿಕ ಕಟ್ಟಡಗಳ 100 ಮೀ. ವ್ಯಾಪ್ತಿಯಲ್ಲಿ ಬ್ರಿಗೇಡ್ ಸಂಸ್ಥೆಯವರು 14 ಹಂತಸ್ತಿನ ಕಟ್ಟಡ ನಿರ್ಮಾಣ ಮಾಡಿದ್ದಾರೆ. ಇದಕ್ಕೆ ಅನುಮತಿ ನೀಡಿದವರ ವಿರುದ್ಧ ತನಿಖೆ ಮಾಡಿಸಿ, ನಿಯಮ ಉಲ್ಲಂಘಿಸದಂತೆ ಕ್ರಮವಹಿಸಬೇಕು ಎಂದು ಕೆ.ಶಿವಕುಮಾರ್ ಒತ್ತಾಯಿಸಿದರು.

ಈ ಕುರಿತು ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಅವರು ಮಾತನಾಡಿ, ಪಾರಂಪರಿಕ ಕಟ್ಟಡಗಳ ಸಂರಕ್ಷಣೆಗೆ ಅಯಾ ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ. ಅಲ್ಲದೆ, ಪಾರಂಪರಿಕ ಕಟ್ಟಡ ಸಂರಕ್ಷಣಾ ಸಮಿತಿಯನ್ನು ರಚಿಸಲಾಗಿದೆ. ಶಿಥಿಲಾವಸ್ಥೆಯಲ್ಲಿರುವ ಪಾರಂಪರಿಕ ಕಟ್ಟಡಗಳನ್ನು ಗುರುತಿಸಿ ರಕ್ಷಣೆ ಮಾಡಲಾಗುತ್ತಿದೆ ಎಂದರು.

ಜಿಲ್ಲಾಡಳಿತ ಹಾಗೂ ಸ್ಥಳೀಯ ಸಂಸ್ಥೆಯಲ್ಲಿ ಅನುದಾನ ಲಭ್ಯವಿದೆ. ಪಾರಂಪರಿಕ ಕಟ್ಟಡದ 100 ಮೀ. ಬಳಿ ಕಾಮಗಾರಿ ನಿಷೇಧಿಸಲಾಗಿದೆ. ಈ ನಿಯಮ ಉಲ್ಲಂಘಿಸದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಶಿಥಿಲಾವಸ್ಥೆಯಲ್ಲಿರುವ ಲ್ಯಾನ್ಸ್ ಡೌನ್ ಕಟ್ಟಡ ನಿರ್ಮಾಣಕ್ಕೆ ಸರ್ಕಾರ ಮುಂದಾಗಿತ್ತು, ಪ್ರಸ್ತುತ ನ್ಯಾಯಾಲಯದಲ್ಲಿ ಪ್ರಕರಣವಿದ್ದು, ಬಗೆಹರಿದ ಕೂಡಲೇ ನೂತನ ಕಟ್ಟಡ ನಿರ್ಮಾಣ ಮಾಡಲಾಗವುದು ಎಂದು ತಿಳಿಸಿದರು.

Key words: more funds, conservation, heritage buildings, MLC, K. Shivakumar

The post ಪಾರಂಪರಿಕ ಕಟ್ಟಡಗಳ ಸಂರಕ್ಷಣೆಗೆ ಹೆಚ್ಚಿನ ಅನುದಾನ ಒದಗಿಸಿ –MLC ಕೆ.ಶಿವಕುಮಾರ್ ಆಗ್ರಹ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ನಮಗೂ ಅಧಿಕಾರ ಸಿಗಬೇಕು: ದೆಹಲಿಗೆ ಹೋಗಿ ಬರ್ತೇವೆ- ಶಾಸಕ ಬೇಳೂರು ಗೋಪಾಲಕೃಷ್ಣ

ಬೆಂಗಳೂರು,ಮಾರ್ಚ್,24,2026 (www.justkannada.in):  ಸಂಪುಟ ಪುನಾರಚನೆ ವಿಚಾರ ಸಂಬಂಧ ಏಪ್ರಿಲ್ 11...

70 ലക്ഷം ലോണെടുത്തു, 60 ലക്ഷം അടച്ചു, ഇനിയും 59 ലക്ഷം ബാക്കി; ജപ്തി ഭീഷണിയില്‍ മുനീര്‍

കോഴിക്കോട്: വീടിന്റെ പുനര്‍നിര്‍മാണത്തിനായി വായ്പയെടുത്തതില്‍ പലിശയും മറ്റും ഉള്‍പ്പടെ ഇനിയും 59...

'என் மகனுக்கு இல்லை என்றால் எனக்கு..!'-கணக்கு போடும் திருநாவுக்கரசர்; கல்தா கொடுக்கிறதா கட்சி தலைமை?

அ.தி.மு.க-வில் எம்.ஜி.ஆர் காலத்தில் அமைச்சராகவும், காங்கிரஸ் கட்சியில் முன்னாள் மாநில தலைவராகவும் இருந்தவர் திருநாவுக்கரசர். திருச்சி நாடாளுமன்றத் தொகுதி எம்.பி-யாக இருந்த இவருக்கு கடந்த நாடாளுமன்ற தேர்தலில் சீட் மறுக்கப்பட்டது. அதேபோல், புதுக்கோட்டை மாவட்டத்தில் உள்ள அறந்தாங்கி தொகுதியில் இவரது மகன் எஸ்.டி.ராமச்சந்திரன் எம்.எல்.ஏ-வாக இருந்து வருகிறார். அங்குள்ள தி.மு.க-வினர், 'இந்தமுறை தி.மு.க-வுக்கு ஒதுக்க வேண்டும்' என்று போர்க்கொடி தூக்கி வருகிறார்கள். இந்நிலையில், திருச்சி கிழக்கு தொகுதியை காங்கிரஸூக்கு ஒதுக்க வேண்டும் என்று திருநாவுக்கரசர் ஆதரவாளரான மாநகர் மாவட்ட தலைவர் ரெக்ஸ் தீர்மானம் போட்டு, தலைமைக்கு அனுப்பியிருக்கிறார்."காங்கிரஸ் கட்சிக்கு திருச்சியில் ஏதாவது ஒரு தொகுதியை கேட்போம். ஆனால், நான் திருச்சி கிழக்கு தொகுதியை கேட்கிறேன் என்பது தவறான தகவல். நான்தான் எம்.எல்.ஏ தேர்தலில் நிற்கவில்லை என்று சொல்லிவிட்டேனே. என் மகன்தான் அறந்தாங்கி தொகுதியில் எம்.எல்.ஏ-வாக இருக்கிறார். பேச்சுவார்த்தை நடக்கிறது. அது முடிந்ததும், தெரியும். ஏன் அவருக்கு கிடைக்காமல் போக போகிறது?. என்னைப் பொறுத்தவரையில் நான் நிற்கவில்லை" என்றார்.திருநாவுக்கரசரின் சீட் பெறும் 'ஆடுபுலி ஆட்டம்' என்னவாக போகிறது என்று பொறுத்திருந்து பார்ப்போம்! Source link

Meta Fined 375 Million: మార్క్ జుకర్‌బర్గ్ కు యూఎస్ కోర్టు బిగ్ షాక్.. మెటాపై రూ. 3100 కోట్ల జరిమానా

ఫేస్‌బుక్, ఇన్‌స్టాగ్రామ్, వాట్సాప్‌లను కలిగి ఉన్న సోషల్ మీడియా దిగ్గజం మెటా,...