23
March, 2026

A News 365Times Venture

23
Monday
March, 2026

A News 365Times Venture

ಜಮೀರ್ ರಾಜೀನಾಮೆ ಹೇಳಿಕೆಗೆ ಕಾಂಗ್ರೆಸ್ ಸೊಪ್ಪು ಹಾಕಿಲ್ಲ-ಛಲವಾದಿ ನಾರಾಯಣಸ್ವಾಮಿ

Date:

ಬೆಂಗಳೂರು,ಮಾರ್ಚ್,21,2026 (www.justkannada.in):  ದಾವಣಗೆರೆ ದಕ್ಷಿಣ ಕ್ಷೇತ್ರದ ಟಿಕೆಟ್ ಮುಸ್ಲಿಂಮರಿಗೆ ಕೊಡಬೇಕು. ಇಲ್ಲವಾದರೇ ರಾಜೀನಾಮೆ ನೀಡುತ್ತೇನೆ ಎಂದು ಸಚಿವ ಜಮೀರ್ ಹೇಳಿದ್ದಾರೆ. ಆದರೆ ಕಾಂಗ್ರೆಸ್ ಜಮೀರ್ ಹೇಳಿಕೆಗೆ ಸೊಪ್ಪು ಹಾಕಿಲ್ಲ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಲೇವಡಿ ಮಾಡಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಛಲವಾದಿ ನಾರಾಯಣಸ್ವಾಮಿ.  ದಾವಣಗೆರೆ ದಕ್ಷಿಣ  ಕ್ಷೇತ್ರದಲ್ಲಿ ಮುಸ್ಲೀಮರಿಗೆ ಟಿಕೆಟ್ ನೀಡಬೇಕು ಇಲ್ಲವಾದರೇ ರಾಜೀನಾಮೆ ನೀಡೋದಾಗಿ ಸಚಿವ ಜಮೀರ್ ಹೇಳಿದ್ದಾರೆ. ಆದರೆ ಜಮೀರ್ ಹೇಳಿಕೆಗೆ ಕಾಂಗ್ರೆಸ್ ಸೊಪ್ಪು ಹಾಕಿಲ್ಲ ಸುರ್ಜೇವಾಲ ರಾಜೀನಾಮೆ ಕೊಟ್ಟು ಹೋಗಿ ಅಂತಾ ಹೇಳಿದ್ದಾರೆ. ಹಿಂದೆ ಕಾಂಗ್ರೆಸ್   ಜಿಲ್ಲೆಗಳಲ್ಲಿ ಮುಸ್ಲೀಮರಿಗೆ ಟಿಕೆಟ್ ಕೊಡುತ್ತಿತ್ತು. ಕಾಂಗ್ರೆಸ್ ಮುಸ್ಲೀಂರನ್ನ ಗುಲಾಮರಂತೆ ಕಾಣುತ್ತಿದೆ. ಮುಸ್ಲೀಂರಿಗೆ ಬಿಜೆಪಿಯನ್ನ ತೋರಿದರೇ ಸಾಕು ನಮಗೆ ಮತ ಹಾಕುತ್ತಾರೆ ಅಂತಾ ಕಾಂಗ್ರೆಸ್ ಅಂದುಕೊಂಡಿದೆ.  ಬಿಜೆಪಿ  ಜೊತೆ ಮುಸ್ಲೀಮರಿಗೆ ವಿರೋಧ ಇರಬಹುದು ನಾವು ಮುಸ್ಲಿಂ ವಿರೋಧಿ ಅಲ್ಲ ಎಂದರು.

ಜಿಬಿಎ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಛಲವಾದಿ ನಾರಾಯಣಸ್ವಾಮಿ, ಕಾಂಗ್ರೆಸ್ ನವರಿಗೆ ಮತ ಹಾಕುವಾಗ ಸಿಕ್ಕಿ ಬಿದ್ದಿದ್ದಾರೆ.  ಅಧಿಕಾರಿಯನ್ನ ಪೊಲೀಸರೇ ಬಚಾವ್ ಮಾಡಿದ್ದಾರೆ.  ಹಿಡಿದುಕೊಟ್ಟವನನ್ನ ಹೊಡೆದಿದ್ದಾನೆ ಎಂದು ಕೇಸ್ ಹಾಕಿದ್ದಾರೆ. ಹೀಗಾಗಿ ಕಾಂಗ್ರೆಸ್ ನವರಿಗೆ ಬ್ಯಾಲೆಟ್ ಪೇಪರ್ ಬೇಕಿದೆ.  ಘಟನೆ ಹಿಂದೆ ಯಾರು ಇದ್ದಾರೋ ಅವರನ್ನ ಬಂಧಿಸಬೇಕು. ಹಿಡಿದುಕೊಟ್ಟವನ ಮೇಲಿನ ಎಫ್ ಐಆರ್ ರದ್ದಾಗಬೇಕು.  ಚುನಾವಣೆಯಲ್ಲಿ ಭಾಗಿಯಾದ ಅಧಿಕಾರಿಯನ್ನ ಸಸ್ಪೆಂಡ್ ಮಾಡಬೇಕು ಈ ಘಟನೆ ಬ್ಯಾಲೆಟ್ ಪೇಪರ್ ಚುನಾವಣೆಗೆ ಒಂದು ಉದಾಹರಣೆ. ಇದರ ಹಿಂದೆ ಶಾಶಕ ಡಾ.ರಂಗನಾಥ್ ಇದ್ದು ಅವರನ್ನ ಬಂಧಿಸಬೇಕು ಎಂದು ಆಗ್ರಹಿಸಿದರು.

Key words: Congress, Jameer’s, resignation, statement, Chalawadi Narayanaswamy

The post ಜಮೀರ್ ರಾಜೀನಾಮೆ ಹೇಳಿಕೆಗೆ ಕಾಂಗ್ರೆಸ್ ಸೊಪ್ಪು ಹಾಕಿಲ್ಲ-ಛಲವಾದಿ ನಾರಾಯಣಸ್ವಾಮಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

സാദിഖലി തങ്ങള്‍ക്കെതിരായ ആരോപണം; പരാതി നല്‍കി ലീഗ്, വ്യാജപ്രചാരണങ്ങളില്‍ വഞ്ചിതരാകരുതെന്ന് കുഞ്ഞാലിക്കുട്ടി

കോഴിക്കോട്: മുസ്‌ലിം ലീഗ് അധ്യക്ഷന്‍ സാദിഖലി ശിഹാബ് തങ്ങള്‍ക്കെതിരെ ഉയര്‍ന്ന ആരോപണത്തില്‍...

'என்னுடைய பொறுமைக்கும் எல்லை உண்டு.!' – பாஜகவுக்கு கெடு விதித்த சரத்குமார்

இரண்டாண்டுகளுக்கு முன்பு தன்னுடைய சமத்துவ மக்கள் கட்சியை கலைத்துவிட்டு பாஜகவில் இணைந்த...

Chairman’s Desk : మోడీని సుదీర్ఘకాలం అధికారంలో ఉంచిన ఆ రహస్యం ఏంటి.?

ప్రధాని మోడీ సరికొత్త రికార్డును నెలకొల్పారు. ప్రభుత్వాధినేతగా అత్యధిక కాలం పని...

ബി.ജെ.പി തെരഞ്ഞെടുപ്പ് കമ്മിഷനുമായി ഒത്തുകളിച്ചാലും ബംഗാളിൽ മമത ചരിത്ര വിജയം നേടും; പിന്തുണച്ച് അഖിലേഷ്

ലഖ്‌നൗ: പശ്ചിമ ബംഗാൾ തെരഞ്ഞെടുപ്പിൽ മുഖ്യമന്ത്രി മമത ബാനർജി ചരിത്ര ഭൂരിപക്ഷത്തിൽ...