21
March, 2026

A News 365Times Venture

21
Saturday
March, 2026

A News 365Times Venture

ರೂಪಾಯಿ ಮೌಲ್ಯ ಕುಸಿದ್ರೆ ಪ್ರಧಾನಿ ವರ್ಚಸ್ಸು ಕುಸಿದಂತೆ- ರಣದೀಪ್ ಸಿಂಗ್ ಸುರ್ಜೇವಾಲ ಕಿಡಿ

Date:

ಬೆಂಗಳೂರು,ಮಾರ್ಚ್,20,2026 (www.justkannada.in): ಡಾಲರ್ ಎದುರು ರೂಪಾಯಿ ಮೌಲ್ಯ  ಐತಿಹಾಸಿಕ ಕುಸಿತ ಕಂಡಿದ್ದು ಇತಿಹಾಸದಲ್ಲೇ ಮೊದಲ ಬಾರಿಗೆ, ಅಮೆರಿಕದ ಒಂದು ಡಾಲರ್‌ ಗೆ ರೂಪಾಯಿ ಮೌಲ್ಯ 93ರ ಗಡಿ ದಾಟಿದೆ.  ಈ ಸಂಬಂಧ ಪ್ರಧಾನಿ ಮೋದಿ ವಿರುದ್ದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಕಿಡಿಕಾರಿದ್ದಾರೆ.

ಈ ಕುರಿತು ಮಾತನಾಡಿರುವ ರಣದೀಪ್ ಸಿಂಗ್ ಸುರ್ಜೇವಾಲ, ಎಲ್ ಪಿ ಜಿ ಇಲ್ಲದೆ ದೇಶದ ಜನರು ಪರದಾಡುತ್ತಿದ್ದಾರೆ.  ರೂಪಾಯಿ ಬೆಲೆ ಸಹ ಕುಸಿಯುತ್ತಿದೆ.  ರೂಪಾಯಿ ಬೆಲೆ ಕುಸಿದರೆ ಪ್ರಧಾನಿ ವರ್ಚಸ್ಸು  ಕುಸಿದಂತೆ. ಕೇಂದ್ರ ಸಚಿವ  ಹೆಚ್ ಡಿಕೆ ಏನು ಮಾಡುತ್ತಿದ್ದಾರೆ.  ಬಿಜೆಪಿ ಸಂಸದರು ಯಾಕೆ ಈ ಕುರಿತು ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದರು.

ಉಪಚುನಾವಣೆ ಟಿಕೆಟ್ ಕಗ್ಗಂಟು ಕುರಿತು ಪ್ರತಿಕ್ರಿಯಿಸಿದ ರಣದೀಪ್ ಸಿಂಗ್ ಸುರ್ಜೇವಾಲ, ಟಿಕೆಟ್ ಬೇಕೆಂದು ಎಲ್ಲರಿಗೂ ಆಸೆ ಆಸಕ್ತಿ ಇದ್ದೇ ಇರುತ್ತೆ. ನ್ಯಾಯ ಕೊಡಿಸುವ ಕೆಲಸ ಕಾಂಗ್ರೆಸ್ ಪಕ್ಷ ಮಾಡುತ್ತದೆ. ಕರ್ನಾಟಕ ಜನ ನಮ್ಮ ಪರ ಇದ್ದಾರೆ.  ಹಿಂದೆಯೂ ಚುನಾವಣೆ ಗೆದ್ದಿದ್ದೇವೆ.  ಈಗಲೂ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Key words:  rupee value, falls, PM, reputation, Randeep Singh Surjewala

The post ರೂಪಾಯಿ ಮೌಲ್ಯ ಕುಸಿದ್ರೆ ಪ್ರಧಾನಿ ವರ್ಚಸ್ಸು ಕುಸಿದಂತೆ- ರಣದೀಪ್ ಸಿಂಗ್ ಸುರ್ಜೇವಾಲ ಕಿಡಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ಉಪಚುನಾವಣೆ: ತಮ್ಮ ಆಸ್ತಿ ವಿವರ ಘೋಷಿಸಿಕೊಂಡ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ

ಬಾಗಲಕೋಟೆ,ಮಾರ್ಚ್,20,2026 (www.justkannada.in): ಬಾಗಲಕೋಟೆ ವಿಧಾನಸಭೆ ಉಪಚುನಾವಣೆಯ ಬಿಜೆಪಿ ಅಭ್ಯರ್ಥಿಯಾಗಿ ಇಂದು...

പശ്ചിമേഷ്യന്‍ പ്രതിസന്ധി അവസാനിപ്പിക്കാന്‍ ഒരുമിച്ച് പ്രവര്‍ത്തിക്കണം; ഫ്രാന്‍സിനോട് ചൈന

ബീജിങ്: ഇറാനെതിരായ യു.എസ്-ഇസ്രഈല്‍ കടന്നാക്രമണത്തിന് പിന്നാലെ ആരംഭിച്ച പശ്ചിമേഷ്യയിവെ സംഘര്‍ഷം അവസാനിപ്പിക്കാന്‍...

`9 நாள்களுக்குப் பிறகு தகனம் செய்யப்பட்ட மாணவியின் உடல்' – கண்ணீரில் வேடநத்தம் கிராமம்!

தூத்துக்குடியில் கொலை செய்யப்பட்ட பள்ளி மாணவியின் உடல் இன்று பெற்றோர்களிடம் ஒப்படைக்கப்பட்டது....

AP IAS Transfers: ఏపీలో కీలక ఐఏఎస్ అధికారుల బదిలీలు..

AP IAS Transfers: ఆంధ్రప్రదేశ్ ప్రభుత్వం రాష్ట్రంలోని వివిధ విభాగాల్లో కీలక...