19
March, 2026

A News 365Times Venture

19
Thursday
March, 2026

A News 365Times Venture

ಕೆಪಿಎಸ್ ಸಿಯಲ್ಲಿ ಅಕ್ರಮ : ವಿಧಾನಸಭೆಯಲ್ಲಿ ಉತ್ತರ ನೀಡಿದ ಸರ್ಕಾರ

Date:

ಬೆಂಗಳೂರು,ಮಾರ್ಚ್,18,2026 (www.justkannada.in): ಕೆಪಿಎಸ್ ಸಿ ನಡೆಸಿದ ಕೆಎಎಸ್ ನಲ್ಲಿ ಅಕ್ರಮ ಆರೋಪ ಕೇಳಿ ಬಂದಿದ್ದು ಈ  ಹಿನ್ನೆಲೆಯಲ್ಲಿ ಕೆಪಿಎಸ್ ಸಿ ಸುಧಾರಣೆಗೆ ನಿರ್ಧಾರ ಮಾಡಲಾಗಿದೆ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ತಿಳಿಸಿದ್ದಾರೆ.

ಕೆಪಿಸಿ ಅಕ್ರಮ ಸಂಬಂಧ  ವಿಧಾನಸಭೆಯಲ್ಲಿ  ಉತ್ತರ ನೀಡಿದ ಸಚಿವ  ಕೃಷ್ಣಭೈರೇಗೌಡ, ಕೆಪಿಎಸ್ ಸಿ ಯಲ್ಲಿ ಮಾತ್ರ ಸಮಸ್ಯೆಯಾಗುತ್ತಿದೆ.  ಕೆಇಎನಲ್ಲಿ ಯಾವುದೇ ಸಮಸ್ಯೆ ಆಗುತ್ತಿಲ್ಲ .ಕೆಇಎನಲ್ಲಿ 2000 ಪ್ರಶ್ನೆ ಸಿದ್ದಪಡಿಸಿ ಕನ್ನಡಕ್ಕೆ ಭಾಷಾಂತರ ಮಾಡಲಾಗುತ್ತದೆ.  ಪ್ರಶ್ನಾವಳಿ ಮಾಡುವಾಗ 20-30 ಪ್ರಶ್ನೆ ಆಯ್ಕೆ ಮಾಡುತ್ತಾರೆ. ಆಗಲೇ ಭಾಷಾಂತರ ಮಾಡಿರುವುದರಿಂದ ಲೋಪದೋಷ ಕಡಿಮೆ.  ಇದನ್ನೇ ಕೆಪಿಎಸ್ ಸಿಯಲ್ಲಿ ಅನುಷ್ಠಾನ ಮಾಡಲು ಚರ್ಚೆ ಆಗುತ್ತಿದೆ ಎಂದರು.

ಪ್ರತಿವರ್ಷ  ಇಂತಹ ತಿಂಗಳು ಇಂತಹ ದಿನ ಪರೀಕ್ಷೆ ನಡೆಸಬೇಕು ನಿಗದಿತ ದಿನದಲ್ಲಿ ಕಡ್ಡಾಯವಾಗಿ ಕೆಪಿಎಸ್ ಸಿ ಪರೀಕ್ಷೆ ನಡೆಸಬೇಕು. ಸಿ ಗ್ರೂಪ್ ಹಾಗೂ ಗೆಜೆಟೆಡ್ ಪ್ರೊಬೆಷನರಿ ಪರೀಕ್ಷೆಯನ್ನ  ಯುಪಿಎಸ್ ಸಿ ಮಾದರಿಯಲ್ಲಿ ಮಾಡಲು ತೀರ್ಮಾನಿಸಲಾಗಿದೆ. 5 ವರ್ಷಕ್ಕೆ ಎಷ್ಟು ಹುದ್ದೆಗಳ ನೇಮಕಾತಿಯಾಗಲಿದೆ  ಈ ಬಗ್ಗೆ ಮುಂಗಡವಾಗಿ ಕ್ಯಾಲೆಂಡರ್ ಸಿದ್ದಪಡಿಸಲು ಸೂಚನೆ ನೀಡಲಾಗಿದೆ. ಅಲ್ಲದೆ ಕೆಪಿಎಸ್ ಸಿಯಲ್ಲಿ ಇನ್ನೂ ಸುಧಾರಣೆ ಮಾಡಲು ನಿರ್ಧಾರ ಮಾಡಲಾಗಿದ್ದು ಸರ್ವಪಕ್ಷ ಸದಸ್ಯರನ್ನೊಳಗೊಂಡ ಸಮಿತಿ ರಚನೆಗೆ ಸಿಎಂ ಸೂಚನೆ ನೀಡಿದ್ದಾರೆ.  ಮುಂದಿನ  ಅಧಿವೇಶನದೊಳಗೆ ಸಮಿತಿ ವರದಿ ಕೊಟ್ಟರೆ ಅದನ್ನು ಅನುಷ್ಠಾನ ಮಾಡಲು ಸರ್ಕಾರ ಸಿದ್ದ ಎಂದು ತಿಳಿಸಿದರು.

Key words:  KPSC, Illegal recruitment, Government, Assembly

The post ಕೆಪಿಎಸ್ ಸಿಯಲ್ಲಿ ಅಕ್ರಮ : ವಿಧಾನಸಭೆಯಲ್ಲಿ ಉತ್ತರ ನೀಡಿದ ಸರ್ಕಾರ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ಪಾರಂಪರಿಕ ಕಟ್ಟಡಗಳ ಎದುರು ಜಾಹೀರಾತು ಫಲಕ ಅಳವಡಿಕೆ ನಿಯಂತ್ರಿಸಿ: ಎಂಎಲ್‌ಸಿ ಕೆ.ಶಿವಕುಮಾರ್

  ಬೆಂಗಳೂರು, ಮಾ.೧೯: ಪಾರಂಪರಿಕ ಕಟ್ಟಡಗಳ ಎದುರು ಯಾವುದೇ ಕಾರಣಕ್ಕೂ ಜಾಹೀರಾತು...

സമസ്തയെപ്പോലെ ജമാഅത്തെ ഇസ്‌ലാമിയും ഒരു മതസംഘടനയാണ്: പി.എം.എ. സലാം

കോഴിക്കോട്: ജമാഅത്തെ ഇസ്‌ലാമി സമസ്തയെ പോലെ ഒരു മതസംഘടനയാണെന്ന് മുസ്‌ലിം ലീഗ്...

தேமுதிக-வுக்கு எவ்வளவு ஓட்டு? விஜய்யின் தாக்கம் என்ன? – நேர்காணலில் ஸ்டாலின் கேட்ட முக்கிய கேள்வி!

சட்டமன்றத் தேர்தலில் திமுக சார்பில் போட்டியிட விருப்ப மனு அளித்தவர்களிடம் முதல்வர்...

iPhone 17e.. చౌకగా అత్యుత్తమ స్మార్ట్‌ఫోన్.. పనితీరు ఎలా ఉందంటే..?

iPhone 17e: యాపిల్‌ సంస్థ తయరు చేసే ఐఫోన్‌ కోసం ఎదురుచూసేవాళ్లు...