18
March, 2026

A News 365Times Venture

18
Wednesday
March, 2026

A News 365Times Venture

ಹೊಸ ಬಸ್ ಖರೀದಿಗೆ ಟೆಂಡರ್: ಕೊರತೆ ಇರುವ ಕಡೆ ಬಸ್ ಗಳನ್ನು ಒದಗಿಸುತ್ತೇವೆ- ಸಚಿವ ರಾಮಲಿಂಗರೆಡ್ಡಿ

Date:

ಬೆಂಗಳೂರು,ಮಾರ್ಚ್,18,2026 (www.justkannada.in): ನಾವು ಬಂದ ಮೇಲೆ ಸುಮಾರು 6 ಸಾವಿರ ಹೊಸ ಬಸ್‌‍ ಖರೀದಿ ಮಾಡಲು ತೀರ್ಮಾನಿಸಿದ್ದೇವೆ. ಹೊಸ ಬಸ್‌‍ ಖರೀದಿಗೆ ಟೆಂಡರ್‌ ಕರೆಯಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗರೆಡ್ಡಿ ತಿಳಿಸಿದರು.

ವಿಧಾನಪರಿಷತ್ ನಲ್ಲಿ ಶಕ್ತಿ ಯೋಜನೆ ಹಣ ಸರ್ಕಾರದಿಂದ ಬಾಕಿ  ಮತ್ತು ಬಸ್ ಖರೀದಿ ಬಗ್ಗೆ ಪರಿಷತ್ ಸದಸ್ಯರಾದ ಭಾರತಿ ಶೆಟ್ಟಿ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಸಚಿವ ರಾಮಲಿಂಗರೆಡ್ಡಿ, ಹೊಸ ಬಸ್‌‍ ಖರೀದಿಗೆ ಟೆಂಡರ್‌ ಕರೆಯಲಾಗಿದ್ದು, ಎಲ್ಲೆಲ್ಲಿ ಕೊರತೆ ಇದೆಯೋ ಅಂತಹ ಕಡೆ ಆದ್ಯತೆ ಮೇರೆಗೆ ಬಸ್‌‍ಗಳನ್ನು ಒದಗಿಸುತ್ತೇವೆ. ಸುಮಾರು 6 ಸಾವಿರ ಹೊಸ ಬಸ್‌‍ ಖರೀದಿ ಮಾಡಲು ತೀರ್ಮಾನಿಸಿದ್ದೇವೆ. ಇದರ ಮೊದಲ ಭಾಗವಾಗಿ ಹೊಸ ಬಸ್‌‍ ಖರೀದಿಗೆ ಟೆಂಡರ್‌ ಕರೆಯಲಾಗಿದೆ, ಪ್ರಕ್ರಿಯೆಯಿಂದ ತಡವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2 ಸಾವಿರ ಕೋಟಿ ರೂ. ಸಾಲ ಕೊಟ್ಟಿದ್ದಾರೆ, ಅದನ್ನ ಕೆ ಎಸ್‌‍ ಆರ್‌ ಟಿಸಿ ತೀರಿಸುತ್ತಿದೆ. ಇಲಾಖೆಯಲ್ಲಿ ಒಟ್ಟು 6 ಸಾವಿರ ಕೋಟಿ ರೂ. ಸಾಲ ಇದೆ. ಇದನ್ನು ಸರ್ಕಾರವೇ ತೀರಿಸಲಿದೆ ಎಂದರು.

ನಮ್ಮ ಸರ್ಕಾರ ಬಂದ ಮೇಲೆ ಸುಮಾರು 6 ಸಾವಿರ ಹೊಸ ಬಸ್‌‍ ನಾವು ಖರೀದಿ  ಮಾಡುತ್ತಿದ್ದು ಅವಧಿ ಮೀರಿರುವ ಯಾವುದೇ ಬಸ್‌‍ ನಮಲ್ಲಿ ಇಲ್ಲ. 1 ಲಕ್ಷ ನಿತ್ಯ ಬಸ್‌‍ ಟ್ರಿಪ್‌ ಇದೆ, ಒಂದೋ ಎರಡೋ ಸಮಸ್ಯೆ ಆಗಬಹುದು. ಇದು ಇಂದೂ ಆಗುತ್ತಿದೆ, ಮುಂದೆಯೂ ಆಗುತ್ತದೆ. ಹಿಂದಿನ ಸರ್ಕಾರ ಬಸ್‌‍ ಖರೀದಿ ಮಾಡಿರಲಿಲ್ಲ, ನೇಮಕಾತಿ ಆಗಿರಲಿಲ್ಲ  ಎಂದು ಸಚಿವ ರಾಮಲಿಂಗರೆಡ್ಡಿ  ಟೀಕಿಸಿದರು.

Key words: Tender, purchase, new buses, Minister, Ramalingareddy

The post ಹೊಸ ಬಸ್ ಖರೀದಿಗೆ ಟೆಂಡರ್: ಕೊರತೆ ಇರುವ ಕಡೆ ಬಸ್ ಗಳನ್ನು ಒದಗಿಸುತ್ತೇವೆ- ಸಚಿವ ರಾಮಲಿಂಗರೆಡ್ಡಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ರಾಹುಲ್ ಗಾಂಧಿ ಭೇಟಿಯಾಗಬೇಕಿತ್ತು, ಆದ್ರೆ ಆಗಲಿಲ್ಲ- ಮಾಜಿ ಸಚಿವ ಕೆ.ಎನ್ ರಾಜಣ್ಣ

ನವದೆಹಲಿ,ಮಾರ್ಚ್,18,2026 (www.justkannada.in):  ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನ ಭೇಟಿಯಾಗಬೇಕಿತ್ತು...

ഇറാന്‍ ഇന്റലിജന്‍സ് മന്ത്രി എസ്മായില്‍ ഖത്തീബിനെ കൊലപ്പെടുത്തിയെന്ന് ഇസ്രഈല്‍

ടെല്‍ അവീവ്: ഇറാന്റെ ഇന്റലിജന്‍സ് മന്ത്രി എസ്മായില്‍ ഖത്തീബിനെ വധിച്ചതായി ഇസ്രഈല്‍...

“ராகுல் காந்தியைப் பார்க்கும்போது அசௌகரியமாக இருக்கிறது" – கங்கனா ரனாவத்

நாடாளுமன்றத்தின் பட்ஜெட் கூட்டத்தொடர் நடந்து வருகிறது. எரிவாயு தட்டுப்பாடு முதல் ஈரான்...

Pinnelli Ramakrishna Reddy: పిన్నెల్లి రామకృష్ణారెడ్డికి భారీ ఊరట.. బెయిల్ మంజూరు

Pinnelli Ramakrishna Reddy: వైఎస్‌ఆర్‌ కాంగ్రెస్‌ పార్టీ సీనియర్‌ నేత, మాజీ...