ಬೆಂಗಳೂರು,ಮಾರ್ಚ್,17,2026 (www.justkannada.in): ಸದನದಲ್ಲಿ ಸಿಎಂ ಸಿದ್ದರಾಮಯ್ಯರನ್ನು ವಿಧಾನಪರಿಷತ್ ಜೆಡಿಎಸ್ ಸದಸ್ಯ ಎಸ್.ಎಲ್ ಭೋಜೇಗೌಡ ಹೊಗಳಿದ್ದಾರೆ.
ವಿಧಾನ ಪರಿಷತ್ ನಲ್ಲಿ ಎಂಎಲ್ ಸಿ ಭೋಜೆಗೌಡ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಸದನಕ್ಕೆ ಬಂದರು ಇದು ನಮ್ಮ ಸೌಭಾಗ್ಯ ಎಂದರು. ಈ ವೇಳೆ ನೀನು ಮಾತನಾಡ್ತೀಯಾ ಅಂತಲೇ ಬಂದೆ ಎಂದು ಸಿಎಂ ಸಿದ್ದರಾಮಯ್ಯ ನುಡಿದರು.
ಈ ವೇಳೆ ಮಾತನಾಡಿದ ಎಂಎಲ್ ಸಿ ಭೋಜೆಗೌಡ, ಸಿಎಂ ಸಿದ್ದರಾಮಯ್ಯ ಮಂಡಿಸಿದ ದಾಖಲೆಯ ಬಜೆಟ್ ನಮಗೆಲ್ಲ ಹೆಮ್ಮೆ ಇದೆ. ರಾಷ್ಟ್ರದಲ್ಲಿ ವಜುಭಾಯ್ 16 ಬಾರಿ ಬಜೆಟ್ ಮಂಡನೆ ಮಾಡಿದ್ದಾರೆ. ಬಿ.ಎಸ್ ಯಡಿಯೂರಪ್ಪ 7 ಬಾರಿ ಬಜೆಟ್ ಮಂಡಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಗಟ್ಟತನವನ್ನ ಹತ್ತಿರದಿಂದ ನೋಡಿದ್ದೇವೆ. ಸರ್ವೋದಯವಾಗಲಿ ಸರ್ವರಲ್ಲಿ ಅಂತಾ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ ಎಂದರು.
Key words: JDS MLC, praises, CM Siddaramaiah
The post ಸಿಎಂ ಸಿದ್ದರಾಮಯ್ಯರನ್ನ ಹೊಗಳಿದ ಜೆಡಿಎಸ್ MLC appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.





