17
March, 2026

A News 365Times Venture

17
Tuesday
March, 2026

A News 365Times Venture

ಗ್ಯಾಸ್ ಸಿಲಿಂಡರ್ ವಿತರಣೆಯಲ್ಲಿ ಸಮಸ್ಯೆಯಾದ್ರೆ ಆಹಾರ ನಿರೀಕ್ಷಕರನ್ನು ಸಂಪರ್ಕಿಸಿ: ಜಿಲ್ಲಾಧಿಕಾರಿ

Date:

ಬೆಂಗಳೂರು ಗ್ರಾಮಾಂತರ, ಮಾರ್ಚ್,16,2026 (www.justkannada.in): ಜಿಲ್ಲೆಯಾದ್ಯಂತ ಎಲ್ ಪಿಜಿ ಸಿಲಿಂಡರ್ ಪೂರೈಕೆಯಲ್ಲಿ ಸಾರ್ವಜನಿಕ ಕುಂದುಕೊರತೆಗಳು ಕಂಡು ಬಂದಲ್ಲಿ ತಾಲ್ಲೂಕಿನ ಆಹಾರ ಶಾಖೆಯ ಆಹಾರ ನಿರೀಕ್ಷಕರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಎಂದು ಜಿಲ್ಲಾಧಿಕಾರಿ ಡಾ. ಕೆ.ಎನ್ ಅನುರಾಧ ಅವರು ತಿಳಿಸಿದ್ದಾರೆ‌.

ಪ್ರಸ್ತುತ ಕೊಲ್ಲಿ ರಾಷ್ಟ್ರದ ಯುದ್ದದ ಪರಿಣಾಮವಾಗಿ ಉದ್ಬವಿಸಿರುವ ಎಲ್ಪಿಜಿ ಸರಬರಾಜು ಬಗೆಗಿನ ಗೊಂದಲ ಬಗೆಹರಿಸಲು ರಾಜ್ಯ ಸರ್ಕಾರವು ತೈಲ ಕಂಪನಿ ಅಧಿಕಾರಿಗಳೊಂದಿಗೆ IOC/BPC/HPC ಸಭೆ ನಡೆಸಿ ಗೃಹ ಬಳಕೆಯ ಎಲ್ಪಿಜಿ ಸಿಲಿಂಡರ್ ಗಳ ಲಭ್ಯತೆ ಬಗ್ಗೆ ಮಾಹಿತಿ ಪಡೆದು ಸಮಸ್ಯೆ ಇಲ್ಲದ ಬಗ್ಗೆ ತೈಲ ಕಂಪನಿಗಳಿಂದ ಖಾತ್ರಿ ಪಡಿಸಿಕೊಂಡಿದೆ.

ಆಯಿಲ್ ಕಂಪನಿಗಳಿಂದ ಜಿಲ್ಲೆಗೆ ಅಡುಗೆ ಅನಿಲ ಸರಬರಾಜು ಪರಿಸ್ಥಿತಿಗನುಗುಣವಾಗಿ ಅಡುಗೆ ಅನಿಲ ಬಳಕೆ ಮಿತಿಗೊಳಿಸುವ ಬಗ್ಗೆ ಸಾರ್ವಜನಿಕರು,ಗ್ರಾಹಕರು,ಸಂಘ ಸಂಸ್ಥೆಗಳು ಇರತರಿಗೆ ಅರಿವು ಮೂಡಿಸುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಗೃಹಬಳಕೆ ಗ್ಯಾಸ್ ಸರಬರಾಜು ಸಮರ್ಪಕವಾಗಿ ನಡೆಯುತ್ತಿದೆ. ಗೃಹ ಬಳಕೆ ಸಿಲಿಂಡರ್ ಅನ್ನು 25 ದಿನಗಳ ಬಳಿಕವೇ ಬುಕ್ ಮಾಡಲು ಅವಕಾಶ ಕಲ್ಪಿಸಲಾಗಿದೆ. ಆದ್ದರಿಂದ ಗ್ರಾಹಕರು ಅಡುಗೆ ಅನಿಲವನ್ನು ಮಿತಬಳಕೆ ಮಾಡುವಂತೆ ಡಿಸಿ ಕೋರಿದ್ದಾರೆ.

ಗ್ಯಾಸ್ ಸರಬರಾಜುನಲ್ಲಿ ಏನಾದರೂ ಸಮಸ್ಯೆ ಉಂಟಾದಲ್ಲಿ ಆಹಾರ ನೀರಿಕ್ಷಕರು/ಶಿರಸ್ತೇದಾರ್ ಅವರ ದೂರವಾಣಿ ಸಂಖ್ಯೆಗಳು ದೇವನಹಳ್ಳಿ-9449269001, ದೊಡ್ಡಬಳ್ಳಾಪುರ-9483482766, ನೆಲಮಂಗಲ-9036434552, ಹೊಸಕೋಟೆ-9902805563 ಸಂಪರ್ಕಿಸಬಹುದಾಗಿದೆ.

ಸಮರ್ಪಕ ಪೂರೈಕೆಗಾಗಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಎಲ್ಪಿಜಿ ವಿತರಕರೊಂದಿಗೆ ಸಮಾಲೋಚನೆ ನಡೆಸಲಾಗಿದ್ದು, ಗೃಹಬಳಕೆ ಗ್ಯಾಸ್ ಸಿಲಿಂಡರ್ ಗಳ ಸಮರ್ಪಕ ಸಂಗ್ರಹ ಮತ್ತು ಸರಬರಾಜು ಲಭ್ಯವಿರುವುದನ್ನು ಧೃಡಪಡಿಸಿ ಎಂದಿನಂತೆ ಎಲ್ಪಿಜಿ ವಿತರಕರು ಗ್ರಾಹಕರಿಗೆ ಮನೆಬಾಗಿಲಿಗೆ ಸರಬರಾಜು ಮಾಡುತ್ತಾರೆ. ಅಲ್ಲದೇ ಜಿಲ್ಲೆಯ ಎಲ್ಲಾ ಎಲ್ಪಿಜಿ ವಿತರಕರಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಲಾಗಿರುತ್ತದೆ. ಆದುದರಿಂದ ಸಾರ್ವಜನಿಕರು ಯಾವುದೇ ರೀತಿಯ ಆತಂಕಕ್ಕೆ ಒಳಗಾಗದೆ, ಅಗತ್ಯವಿರುವ ಪ್ರಮಾಣದಲ್ಲಿ ಮಾತ್ರ ಗ್ಯಾಸ್ ಸಿಲಿಂಡರ್ ಪಡೆಯುವಂತೆ ವಿನಂತಿಸಲಾಗಿದೆ.

ಯಾವುದೇ ಅನಧಿಕೃತ ಗ್ಯಾಸ್ ಸಿಲಿಂಡರ್ ಸಂಗ್ರಹಣೆ ಅಥವಾ ಅಕ್ರಮ ಮಾರಾಟ ಕಂಡುಬಂದಲ್ಲಿ ಅಗತ್ಯ ವಸ್ತುಗಳ ಕಾಯ್ದೆ ಹಾಗೂ 1955 Petroleum Products(Maintenace of Production, Storage and Supply) Order 1999 and LPG Control Order 2000  2000 ಸಂಬಂಧಿತ ನಿಯಂತ್ರಣ ಆದೇಶಗಳಡಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Key words: problems, gas cylinder, contact, food inspector, DC

The post ಗ್ಯಾಸ್ ಸಿಲಿಂಡರ್ ವಿತರಣೆಯಲ್ಲಿ ಸಮಸ್ಯೆಯಾದ್ರೆ ಆಹಾರ ನಿರೀಕ್ಷಕರನ್ನು ಸಂಪರ್ಕಿಸಿ: ಜಿಲ್ಲಾಧಿಕಾರಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ಗ್ಯಾಸ್ ಸಿಲಿಂಡರ್ ಪೂರೈಕೆ: ಒಂದೆರಡು ವಾರದಲ್ಲಿ ಸಹಜ ಸ್ಥಿತಿಗೆ-ಸಚಿವ ಕೆ.ಹೆಚ್. ಮುನಿಯಪ್ಪ‌

ಬೆಂಗಳೂರು, ಮಾರ್ಚ್,16,2026 (www.justkannada.in): ರಾಜ್ಯದಲ್ಲಿ ಎಲ್‌ ಪಿಜಿ ಸಿಲಿಂಡರ್ ಕೊರತೆ...

കോണ്‍ഗ്രസ് സംഘപരിവാറിന്റെ ബി ടീമാണെന്ന വസ്തുത വീണ്ടും ശരിവെക്കുന്നു; ബീഹാര്‍-ഒഡീഷ രാജ്യസഭാ തെരഞ്ഞെടുപ്പില്‍ മുഖ്യമന്ത്രി

തിരുവനന്തപുരം: ബീഹാര്‍ രാജ്യസഭാ തെരഞ്ഞെടുപ്പില്‍ നിന്നും കോണ്‍ഗ്രസ് എം.എല്‍.എമാര്‍ വിട്ടുനിന്നതിലും ഒഡീഷയില്‍...

Chairmans Desk: ఇరాన్ యుద్ధంతో గల్ఫ్ కు కలిగిన నష్టమేంటి..? అమెరికా స్నేహం ఎలా కొంప ముంచింది.?

Chairmans Desk : ఇరాన్‌-అమెరికా యుద్ధాన్ని…ప్రపంచంలో యుద్ధ రంగ నిపుణులు, అంతర్జాతీయ...