15
March, 2026

A News 365Times Venture

15
Sunday
March, 2026

A News 365Times Venture

ಸಮಗ್ರ ಆರೋಗ್ಯಕ್ಕೆ ಯೋಗ-ವಿಜ್ಞಾನದ ಸಮನ್ವಯ ಅಗತ್ಯ: ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ

Date:

ಮೈಸೂರು,ಮಾರ್ಚ್,14,2026 (www.justkannada.in):  ಭಾರತ ದೇಶ ಜಗತ್ತಿಗೆ ಕೊಟ್ಟತಂಹ ಕೊಡಗೆಗಳಲ್ಲಿ ಯೋಗವೂ ಒಂದು. ನಮ್ಮ ದೇಶದಲ್ಲಿ ಗುರುಪರಂಪರೆಯಿಂದ ಬಂದಂತಹ ಅಷ್ಟಾಂಗ ಯೋಗ, ಪ್ರಾಣಯಾಮ, ಸಂಗೀತ, ಕಲೆ ಇವುಗಳು ವೈಜ್ಞಾನಿಕ ಹಿನ್ನೆಲೆಯಿಂದ ರೂಪಿತವಾಗಿದೆ ಎಂಬುದು ಎಲ್ಲರೂ ಹೆಮ್ಮೆ ಪಡುವಂತಹದ್ದು ಎಂದು ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ನುಡಿದರು.

ಇಲ್ಲಿನ ವೈಜ್ಞಾನಿಕ ಪ್ರಾಣಾಯಾಮ ಫೌಂಡೇಶನ್ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿದ್ದ 2 ದಿನಗಳ ವೈಜ್ಞಾನಿಕ ಪ್ರಾಣಾಯಾಮ ರಾಷ್ಟ್ರೀಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿದರು.

ಅಷ್ಟಾಂಗ ಯೋಗದಲ್ಲಿ ಪ್ರಾಣಯಾಮ ಒಂದು ಪ್ರಮುಖವಾದದ್ದು. ನಿರಂತರ ಪ್ರಾಣಾಯಾಮ ಅಭ್ಯಾಸದಿಂದ ಮನಸ್ಸನ್ನು ಹತೋಟಿಗೆ ತರಲು ಹಾಗೂ ರೋಗ ಮುಕ್ತ ಜೀವನ ನಡೆಸಲು ವೈಜ್ಞಾನಿಕ ಪ್ರಾಣಾಯಾಮ ಇಂದಿನ ಜೀವನದಲ್ಲಿ ಅತ್ಯಗತ್ಯ ಎಂದು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.

ಭಾರತದ ಪ್ರಾಚೀನ ಯೋಗ ಮತ್ತು ಪ್ರಾಣಾಯಾಮ ವಿದ್ಯೆಯನ್ನು ಆಧುನಿಕ ವೈಜ್ಞಾನಿಕ ಸಂಶೋಧನೆಗಳೊಂದಿಗೆ ಸಂಯೋಜಿಸುವುದು ಇಂದಿನ ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.

ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಡಾ. ರಾಜಶೇಖರ ರೆಡ್ಡಿ ಪೋರೆಡ್ಡಿ ಅವರು, “ಸಮ್ಮೇಳನದಲ್ಲಿ ನಡೆದ ವೈಜ್ಞಾನಿಕ ಚರ್ಚೆಗಳ ಆಳ ಮತ್ತು ವಿವಿಧ ಕ್ಷೇತ್ರಗಳ ತಜ್ಞರ ಭಾಗವಹಿಸುವಿಕೆ ಸ್ತುತ್ಯರ್ಹ,” ಎಂದು ಪ್ರಶಂಸಿಸಿದರು.

ಕೈವಲ್ಯಧಾಮ ಸಂಸ್ಥೆಯ ಶರಶ್ಚಂದ್ರ ಬಾಳೇಕರ್ ಹಾಗೂ ಡಾ. ಪ್ರಹ್ಲಾದ್ ರಾವ್ ಗೌರವಾನ್ವಿತ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಡಾ. ದೇವಕಿ ಮಾಧವ್ ಅವರ ಸಮಾಜಮುಖಿ ಸೇವೆ ಹಾಗೂ ದೃಢ ಸಂಕಲ್ಪವನ್ನು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ  ಶ್ಲಾಘಿಸಿದರು.  ಯೋಗ-ಪ್ರಾಣಾಯಾಮವನ್ನು ಸರಳೀಕರಿಸಿ ವೈಜ್ಞಾನಿಕ ವಿಧಾನದ ಮೂಲಕ ಜನಸಾಮಾನ್ಯರಿಗೆ ತಲುಪಿಸುತ್ತಿರುವ ಅವರ ಕಾರ್ಯ ಮಾನವ ಕಲ್ಯಾಣಕ್ಕೆ ದೊಡ್ಡ ಕೊಡುಗೆ ಎಂದು ಬಣ್ಣಿಸಿದರು.

ಸಂಶೋಧನೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ವಿವಿಧ ವಿಭಾಗಗಳಲ್ಲಿ ನಗದು ಬಹುಮಾನಗಳನ್ನು ವಿತರಿಸಲಾಯಿತು.  ಕಳೆದ ಒಂದು ದಶಕದಿಂದ ವೈಜ್ಞಾನಿಕ ಪ್ರಾಣಾಯಾಮದ ಪ್ರಸಾರದಲ್ಲಿ ತೊಡಗಿಸಿಕೊಂಡಿರುವ ಸೀತಾ ರಮೇಶ್ ಅವರಿಗೆ ‘ಸೇವಾರತ್ನ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.

Key words: Integration, yoga, science, health, Shivaratri Deshikendra Swamiji, Mysore

The post ಸಮಗ್ರ ಆರೋಗ್ಯಕ್ಕೆ ಯೋಗ-ವಿಜ್ಞಾನದ ಸಮನ್ವಯ ಅಗತ್ಯ: ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

പൂനെയില്‍ പൊതുസ്ഥലത്ത് നോമ്പ് തുറക്കുന്നത് ചോദ്യം ചെയ്ത് യുവാക്കളെ ആക്രമിച്ചു; അഞ്ച് പേര്‍ക്ക് പരിക്ക്; 15 പേര്‍ പിടിയില്‍

പൂനെ: പൂനെ അക്‌സര്‍വാഡിയില്‍ കുളത്തിനരികെ നോമ്പ് തുറയ്ക്കായി ഒത്തുകൂടിയ മുസ്‌ലിം യുവാക്കളെ...

“உளவுத் துறையைக் கையாளப் போகும் முதல் பெண் டி.ஜி.பி”- அதிரடி மாற்றங்களைக் கையில் எடுத்த அரசு!

தமிழகத்தில் கடந்த சில நாட்களாக நடந்துவந்த குற்றசெயல்களும், அதை தொடர்ந்து...

Fatty Liver: ఫ్యాటీలివర్ సమస్యతో బాధపడుతున్నారా..? మందులతో పని లేకుండా తగ్గించుకోండిలా..

కాలేయం మన శరీరంలోని అత్యంత కీలకమైన అవయవం. ఇది విషతుల్యాలను తొలగించడం,...