13
March, 2026

A News 365Times Venture

13
Friday
March, 2026

A News 365Times Venture

ಗ್ಯಾರಂಟಿ ಯೋಜನೆ ಹಿಂಪಡೆಯಿರಿ ಎಂದು ಬಿಜೆಪಿ ನಿರ್ಣಯ ಮಂಡಿಸಲಿ- ಡಿಸಿಎಂ ಡಿಕೆ ಶಿವಕುಮಾರ್ ಸವಾಲು

Date:

ಬೆಂಗಳೂರು,ಮಾರ್ಚ್,13,2026 (www.justkannada.in): ಗ್ಯಾರಂಟಿ ಯೋಜನೆಗಳನ್ನು ಮರುಪರಿಶೀಲನೆ ಮಾಡಿ ಅಥವಾ ಹಿಂಪಡೆಯಿರಿ ಎಂದು ಬಿಜೆಪಿಯಿಂದ ಸದನದಲ್ಲಿ ನಿರ್ಣಯ ಮಂಡಿಸಲಿ ಎಂದು ಡಿಸಿಎಂ  ಡಿಕೆ ಶಿವಕುಮಾರ್ ಸವಾಲು ಹಾಕಿದರು.

ವಿಧಾನಸಭೆಯಲ್ಲಿ ಬಜೆಟ್ ಕುರಿತು ಚರ್ಚೆ ವೇಳೆ ಬಿಜೆಪಿ ಶಾಸಕ ಸುರೇಶ್ ಗೌಡ ಅವರು ಗ್ಯಾರಂಟಿ ಯೋಜನೆಗಳನ್ನು ರದ್ದುಗೊಳಿಸಬೇಕು ಎಂದು ಹೇಳಿದರು. ಈ ಕುರಿತು  ಪ್ರತಿಕ್ರಿಯಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್,  ಗ್ಯಾರಂಟಿ ಯೋಜನೆಗಳನ್ನು ಹಿಂಪಡೆಯಿರಿ, ಮರುಪರಿಶೀಲನೆ ಮಾಡಿ ಎಂದು ಬಿಜೆಪಿಯಿಂದ ಅಧಿಕೃತ ತೀರ್ಮಾನ ಮಾಡಿ ಸದನದಲ್ಲಿ ನಿರ್ಣಯ ಮಂಡಿಸಲಿ, ಆನಂತರ ಜನರ ಮುಂದೆ ಸದನದಲ್ಲಿ ಇದರ ಬಗ್ಗೆ ಚರ್ಚೆ ಮಾಡೋಣ ಎಂದರು.

ಸುರೇಶ್ ಅವರೇ ಈ ಅಭಿಪ್ರಾಯ ಕೇವಲ ನಿಮ್ಮ ವೈಯಕ್ತಿಕವಲ್ಲ. ಅದು ಪಕ್ಷದ ಅಭಿಪ್ರಾಯ. ನೀವು ಏನು ಹೇಳುವಿರೋ ಅದರ ಬಗ್ಗೆ ಚಿಂತನೆ ನಡೆಸೋಣ. ನೀವು ಹೇಳುತ್ತಿರುವುದು ಸರಿಯಿಲ್ಲ ಎಂದು ಹೇಳುತ್ತಿಲ್ಲ. ಈ ಬಜೆಟ್ ಅಧಿವೇಶನದ ಒಳಗೆಯೇ ನಿಮ್ಮ ತೀರ್ಮಾನ ತಿಳಿಸಿ ಎಂದು ಡಿಕೆ ಶಿವಕುಮಾರ್ ಟಾಂಗ್ ಕೊಟ್ಟರು.

ಗ್ಯಾರಂಟಿ ಕೊಡುವಾಗ ನಮ್ಮನ್ನು ನೀವು ಕೇಳಿದ್ದರಾ ಎಂದು ಸುರೇಶ್  ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, ಬಿಎಸ್ ಯಡಿಯೂರಪ್ಪ ಅವರು ಒಂದು ಕಾಳು ಕಡಿಮೆ ಆದರೂ ಬಿಡುವುದಿಲ್ಲ ಎಂದು ಹೇಳಿದ್ದರು. ಅದಕ್ಕೆ ಆರು ತಿಂಗಳಲ್ಲಿ ಎಲ್ಲಾ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದವು ನಿಮ್ಮ ಮಾತನ್ನೂ ಕೇಳಿ ಗ್ಯಾರಂಟಿ ಯೋಜನೆಗಳನ್ನು ನೀಡಿದ್ದೇವೆ ಎಂದು ಡಿಕೆ ಶಿವಕುಮಾರ್ ಚಾಟಿ ಬೀಸಿದರು.

Key words: BJP , withdraw, guarantee scheme, DCM, DK Shivakumar

The post ಗ್ಯಾರಂಟಿ ಯೋಜನೆ ಹಿಂಪಡೆಯಿರಿ ಎಂದು ಬಿಜೆಪಿ ನಿರ್ಣಯ ಮಂಡಿಸಲಿ- ಡಿಸಿಎಂ ಡಿಕೆ ಶಿವಕುಮಾರ್ ಸವಾಲು appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ഗസയിലെ വംശഹത്യ; ഐ.സി.ജെയിലെ കേസില്‍ കക്ഷി ചേര്‍ന്ന് നെതര്‍ലാന്‍ഡ്‌സും ഐസ്‌ലാന്‍ഡും

ഹേഗ്: ഗസയില്‍ ഇസ്രഈല്‍ നടത്തുന്ന വംശഹത്യ സംബന്ധിച്ച് ഹേഗിലെ അന്താരാഷ്ട്ര നീതിന്യായ...

ராஜீவ் காந்தி பதவிக்கு வேட்டு! – `டெண்டர் முதல் இன்ஸ்டா வரை…' – வெடித்துக் கிளம்பிய விவகாரம்!

தி.மு.க வின் மாணவர் அணிச் செயலாளராகச் செயல்பட்டு வந்த ராஜீவ் காந்தியை...

IndiGo: ఇరాన్ వార్ ఎఫెక్ట్.. పెరిగిన ఇండిగో టికెట్ ధరలు..

IndiGo: మధ్యప్రాచ్యంలోని ఇరాన్ యుద్ధ ప్రభావం దేశ విమానయాన రంగంపై పడింది....

ഭീകര സംഘടനകൾക്ക് ഇൻഷുറൻസ് പോളിസികൾ നൽകാൻ ഉദ്ദേശിക്കുന്നില്ല: നെതന്യാഹു

ടെൽ അവീവ്: ഇറാന്റെ പുതിയ പരമോന്നത നേതാവിനെതിരെ പരോക്ഷ ഭീഷണിയുമായി ഇസ്രഈൽ...