ಬೆಂಗಳೂರು,ಮಾರ್ಚ್,7,2026 (www.justkannada.in): ಬಾಕಿ ಬಿಲ್ ಪಾವತಿ ಮಾಡುವಂತೆ ಆಗ್ರಹಿಸಿ ಗುತ್ತಿಗೆದಾರರು ಪ್ರತಿಭಟನೆ ಹಿನ್ನೆಲೆಯಲ್ಲಿ ಈ ಬಗ್ಗೆ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಮತನಾಡಿದ ಸಚಿವ ಸತೀಶ್ ಜಾರಕಿಹೊಳಿ, ಸಿಎಂ ಸಿದ್ದರಾಮಯ್ಯ ಬಳಿ ಹಣಕಾಸು ಇಲಾಖೆ ಇದೆ. ಕಳೆದ ಬಾರಿ ಹಣ ಕೊಟ್ಟಿದ್ದರು ಈ ಬಾರಿಯೂ ಕೊಡುತ್ತೇವೆ. ಇದು ಬಜೆಟ್ ನಲ್ಲಿ ಘೋಷಣೆ ಮಾಡುವ ಹಣ ಅಲ್ಲ ಗುತ್ತಿಗೆದಾರರು ಬಾಕಿ ಹಣಕ್ಕೆ ಕಾಯಬೇಕು ಅಷ್ಟೆ. ಗುತ್ತಿಗೆದಾರರ ಜೊತೆ ಸಿಎಂ ಸಿದ್ದರಾಮಯ್ಯ ಸಭೆ ಮಾಡುತ್ತಾರೆ ಎಂದರು.
ಬಜೆಟ್ ಕುರಿತು ಪ್ರತಿಕ್ರಿಯಿಸಿದ ಸಚಿವ ಸತೀಶ್ ಜಾರಕಿಹೊಳಿ, ಬಜೆಟ್ ನಲ್ಲಿ ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚು ಅನುದಾನ ನೀಡಲು ಪ್ರಯತ್ನಿಸಿದ್ದಾರೆ. ಸಾಲ ಮಾಡುವುದು ಇದೇ ಮೊದಲೇನು ಅಲ್ಲ. ಕೇಂದ್ರ ಸರ್ಕಾರ, ಎಲ್ಲಾ ರಾಜ್ಯಗಳ ಬಜೆಟ್ ಸಾಲದಲ್ಲೇ ಆಗುತ್ತೆ ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.
Key words: budget, Contractors, Minister, Satish Jarkiholi
The post ಅದು ಬಜೆಟ್ ನಲ್ಲಿ ಘೋಷಿಸುವ ಹಣವಲ್ಲ: ಗುತ್ತಿಗೆದಾರರು ಕಾಯಬೇಕಷ್ಟೆ- ಸಚಿವ ಸತೀಶ್ ಜಾರಕಿಹೊಳಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.





