6
March, 2026

A News 365Times Venture

6
Friday
March, 2026

A News 365Times Venture

ಅಸ್ಪೃಶ್ಯತೆ ಆಚರಣೆ ನಾಶ ಮಾಡಲು ಎಲ್ಲರೂ ಕೈಜೋಡಿಸಿ- ಬಿ.ಬಸವರಾಜು ಕರೆ

Date:

ಮೈಸೂರು, ಮಾರ್ಚ್,5,2026 (www.justkannada.in): ಸಮಾಜದಲ್ಲಿ ಇಂದಿಗೂ ಜಾತಿ ವ್ಯವಸ್ಥೆ ಇರುವುದು ಒಂದು ದುರಂತ. ಸಮಾಜದಲ್ಲಿರುವ ಅಸ್ಪೃಶ್ಯತೆ ಆಚರಣೆ ನಾಶ ಮಾಡಲು ಎಲ್ಲರೂ ಕೈಜೋಡಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಇಲಾಖೆಯ ಉಪ ನಿರ್ದೇಶಕ ಬಿ.ಬಸವರಾಜು  ಕರೆ ನೀಡಿದರು.

ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಕಲಾಮಂದಿರದಲ್ಲಿ ಹಮ್ಮಿಕೊಂಡಿದ್ದ ಅಸ್ಪೃಶ್ಯತೆ ನಿವಾರಣೆ ಅರಿವು ಕಾರ್ಯಗಾರ ಕಾರ್ಯಕ್ರಮವನ್ನು ಉದ್ಘಾಟಿಸಿ  ಮಾತನಾಡಿದ ಬಿ.ಬಸವರಾಜು, ಅಂಬೇಡ್ಕರ್ ಅವರ ಆಶಯದಂತೆ ಸಮಸಮಾಜ ನಿರ್ಮಾಣ ಮಾಡುವಲ್ಲಿ ಮತ್ತು ಅವರು ಹಾಕಿಕೊಟ್ಟಂತಹ ದಾರಿಯಲ್ಲಿ ನಾವು ನಡೆಯಬೇಕು ಜಾತಿ ಮುಕ್ತ ಸಮಾಜ ನಿರ್ಮಾಣ ಮಾಡುವಲ್ಲಿ ಪ್ರತಿಯೊಬ್ಬರು ಕೈಜೋಡಿಸಬೇಕು ಎಲ್ಲರೂ ಜಾಗೃತರಾಗಬೇಕು ಎಂದು ಹೇಳಿದರು.

ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ  ಬಿ ರಂಗೇಗೌಡ ಮಾತನಾಡಿ, ಸಮಾಜದಲ್ಲಿ ಅಸ್ಪೃಶ್ಯತೆ ಆಚರಣೆ ಮಾಡದಂತೆ ಪ್ರತಿಯೊಂದು ಮನೆ ಮನೆಗೂ ಮಾಹಿತಿಯನ್ನು ತಲುಪಿಸುಬೇಕು. ಜಾತಿ ವ್ಯವಸ್ಥೆಯನ್ನು ಹೋಗಲಾಡಿಸಿ ಪರಿಶಿಷ್ಟ ಜಾತಿ ಮತ್ತು ಪರಿಸ್ಥಿತಿ ಪಂಗಡಗಳ ಸಮುದಾಯವನ್ನು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮುಂದೆ ತರುವಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಕೆಲಸ ಬಹಳ ಪ್ರಾಮುಖ್ಯವಾದದ್ದು. ನಾಗರಿಕ ಸಮಾಜದಲ್ಲಿ ಮೇಲು ಕೇಳು ಎಂಬ ಜಾತಿಯಿಂದ ತುಂಬಿದೆ ಇದನ್ನು ನಾಶ ಮಾಡಲು ಎಲ್ಲರೂ ಒಗ್ಗಟ್ಟಿನಿಂದ ಕೈಜೋಡಿಸೋಣ ಎಂದು ಹೇಳಿದರು.

ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಉಪ ಪೊಲೀಸ್ ವರಿಷ್ಠಾಧಿಕಾರಿ ಅನುಶ್ರೀ ರಾಣಿ ಅವರು ಮಾತನಾಡಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನರನ್ನು ರಕ್ಷಣೆ ಮಾಡಲು ಅಸ್ಪೃಶ್ಯತೆಯನ್ನು ಹೋಗಲಾಡಿಸಲು ನಮ್ಮ ಸಂವಿಧಾನದಲ್ಲಿ ಹಲವಾರು ರೀತಿಯ ಕಾಯ್ದೆಗಳನ್ನು ಜಾರಿಗೆ ತರಲಾಗಿದೆ ಮತ್ತು ಅಸ್ಪೃಶ್ಯತೆ ಆಚರಣೆ ಮಾಡುವುದು ಕಾನೂನು ಬಾಹಿರ ಎಂದರು.

ಕಾರ್ಯಕ್ರಮದಲ್ಲಿ ಸಹಾಯಕ ಪ್ರಾಧ್ಯಾಪಕ ಮತ್ತು ಅಂಬೇಡ್ಕರ್ ವಾದಿ ಚಿಂತಕ  ಡಾ. ಕೃಷ್ಣಮೂರ್ತಿ ಚಮರಂ ಹಾಗೂ ಜಿಲ್ಲೆಯ ಎಲ್ಲಾ ತಾಲ್ಲೂಕಿನ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರುಗಳು ಮತ್ತು ಅನಿಕೇತನ ಕಲಾಬಳಗದವರು ಉಪಸ್ಥಿತರಿದ್ದರು.

Key words: Mysore B. Basavaraj, destroy, untouchability

The post ಅಸ್ಪೃಶ್ಯತೆ ಆಚರಣೆ ನಾಶ ಮಾಡಲು ಎಲ್ಲರೂ ಕೈಜೋಡಿಸಿ- ಬಿ.ಬಸವರಾಜು ಕರೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ರಾಜ್ಯದಲ್ಲಿ 8,24,389 ಕೋಟಿ ರೂ. ಸಾಲ: ಗ್ಯಾರಂಟಿ ಮೂಲಕ ಆರ್ಥಿಕ ಸುಧಾರಣೆ- ಸಿಎಂ ಸಿದ್ದರಾಮಯ್ಯ

ಬೆಂಗಳೂರು,ಮಾರ್ಚ್,6,2026 (www.justkannada.in): ರಾಜ್ಯದಲ್ಲಿ 8,24,389 ಕೋಟಿ ರೂ. ಸಾಲವಿದೆ. ಗ್ಯಾರಂಟಿ...

ഇറാനിയന്‍ ഡ്രോണുകളെ പ്രതിരോധിക്കാന്‍ ട്രംപ് ഉക്രെയ്‌നോട് സഹായമഭ്യര്‍ത്ഥിച്ചു: സെലന്‍സ്‌കി

കീവ്: മിഡില്‍ ഈസ്റ്റിലെ ഇറാന്റെ ഡ്രോണാക്രമണങ്ങളെ പ്രതിരോധിക്കാന്‍ ട്രംപ് ഉക്രെയ്‌നോട് സഹായം...